ಇನ್ನೂ ಕಾದಿದೆ ಘನಘೋರ ಆಪತ್ತು : ಕೋಡಿ ಸ್ವಾಮೀಜಿಯಿಂದ ಭಾರೀ ಎಚ್ಚರಿಕೆ

Suvarna News   | Asianet News
Published : Sep 09, 2021, 03:34 PM ISTUpdated : Sep 09, 2021, 04:02 PM IST
ಇನ್ನೂ ಕಾದಿದೆ ಘನಘೋರ ಆಪತ್ತು : ಕೋಡಿ ಸ್ವಾಮೀಜಿಯಿಂದ ಭಾರೀ ಎಚ್ಚರಿಕೆ

ಸಾರಾಂಶ

ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಇನ್ನೂ ಆಪತ್ತು ಕಾಡಲಿದೆ. ಭೂ‌ಮಿ‌ ನಡುಗಲಿದೆ, ರಾಜಭಯ ಎಲ್ಲವೂ ಇದೆ ಎಂದು ಹಾಸನದಲ್ಲಿಂದು ಕೋಡಿ ಸ್ವಾಮೀಜಿ ಭವಿಷ್ಯ

 ಹಾಸನ  (ಸೆ.09): ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಇನ್ನೂ ಆಪತ್ತು ಕಾಡಲಿದೆ. ಭೂ‌ಮಿ‌ ನಡುಗಲಿದೆ, ರಾಜಭಯ ಎಲ್ಲವೂ ಇದೆ ಎಂದು ಹಾಸನದಲ್ಲಿಂದು ಕೋಡಿ ಸ್ವಾಮೀಜಿ ಹೇಳಿದ್ದಾರೆ. 

"

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿಂದು ಮಾತನಾಡಿದ ಕೋಡಿ ಶ್ರೀ  ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಇನ್ನೂ ಆಪತ್ತು ಕಾಡಲಿದೆ.  ಭವಿಷ್ಯದಲ್ಲಿ ಮತ್ತೆ ವಿಪತ್ತು ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.  ಕಾರ್ತಿಕ ಮಾಸದವರೆಗೂ ಇದೇ ವಿಪತ್ತು ಇರಲಿದೆ ಎಂದೂ ಹೇಳಿದ್ದಾರೆ. 

ಆತಂಕಕಾರಿ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿಜಿ : ಎಚ್ಚರಿಕೆ ಸೂಚನೆ

ಮಾಡಾಳು ಸ್ಚರ್ಣಗೌರಿ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು ನಾನು ಒಂದೂವರೆ ವರ್ಷದ ಹಿಂದೆಯೇ ಒಂದು ದೇಶ ಕಾಣೆಯಾಗೊ ಭವಿಷ್ಯ ಹೇಳಿದ್ದೆ.ಭೂಪಟದಿಂದಲೇ ದೇಶ ಕಾಣೆಯಾಗೋ ಭವಿಷ್ಯ ಹೇಳಿದ್ದೆ. ಅದು ಅಫ್ಘಾನಿಸ್ತಾನ ಆಗಿದೆ. ಒಂದು ದೇಶ ಭೂಪಟದಿಂದ  ಅಳಿಸಿ ಹೋಗುತ್ತೆ ಎಂದು ಹೇಳಿದ್ದೆ ಈಗ ಅಫ್ಘಾನಿಸ್ತಾನ ಅಳಿಸಿ ಹೋಯಿತು. ಆ ಭಯ ಜಗತ್ತಿನಾದ್ಯಂತ ಇದೆ ಎಂದರು.

ಅಫ್ಘಾನಿಸ್ತಾನದಿಂದ ಇಡೀ ಜಗತ್ತಿಗೇ ಭಯ ಇದೆ. ಅಲ್ಲಿ ನಡೆಯುತ್ತಿರೊ ಚಟುವಟಿಕೆಗಳಿಂದ‌ ಜಗತ್ತಿಗೇ ಭಯವಿದೆ. ಕೊರೋನ ಸದ್ಯಕ್ಕೆ ಮುಗಿಯಲ್ಲ. ಇನ್ನೂ ಎರಡು ಮೂರು ವರ್ಷ ಹೊಸ ರೂಪ ತಾಳಲಿದೆ.  ಆತ್ಮಗಳು ಭಂಗವಾಗಿ ಕಾಡುತ್ತವೆ. ಮುಂದಿನ ದಿನಗಳಲ್ಲಿ ಗಾಳಿಯಾಗಿ ಬೀಸಿ ಸಾವು ಹೆಚ್ಚಲಿದೆ.  ನಿಧಾನವಾದರೂ ಈ ಅಲೆ ಇನ್ನೂ ಎರಡು, ಮೂರು ವರ್ಷ ಇರಲಿದೆ ಎಂದರು.

ರಾಜ್ಯ ರಾಜಕೀಯದ ಹಿಂದೆ ಸೂತ್ರಧಾರಿ ಇದ್ದಾರೆ.  ಬೊಮ್ಮಾಯಿ ಗೊಂಬೆಯಾಗಿದ್ದಾರೆ. ಸೂತ್ರ ನಡೆಸಿದಂತೆ  ಗೊಂಬೆ ಕುಣಿಯುತ್ತದೆ. ಅವರ ಹಿಂದೆ ಸೂತ್ರಧಾರಿಯಾಗಿ ಯಡಿಯೂರಪ್ಪ ಇದ್ದಾರೆ. ಬೊಮ್ಮಾಯಿ ನಡೆಸಿಕೊಂಡು ಹೋಗುತ್ತಾರೆ ಎಂದು ಭವಿಷ್ಯ ನುಡಿದರು. ನೇರವಾಗಿಯೇ ಸಿಎಂ ಬೊಮ್ಮಾಯಿ ಸೂತ್ರ ಯಡಿಯೂರಪ್ಪ ಕೈಲಿದೆ ಎಂದರು. 

ಸರ್ಕಾರಕ್ಕೆ‌ ಏನು ತೊಂದರೆ ಆಗಲ್ಲ. ಸರ್ಕಾರ ಸುಭದ್ರವಾಗಿರಲಿದೆ ಎಂದು ಭವಿಷ್ಯ ನುಡಿದರು.

ಹಿಂದೂ ದೇಶ ಎಂದರೆ ದೈವ ಧರ್ಮ, ಸತ್ಯಾ ನಂಬಿಕೆ ಸಾಧುಗಳ ಮೇಲಿರುವಂತದ್ದು. ಅಂತಹ ಸಾಧುಗಳು ಬೀದಿಗೆ ಬಂದಾಗ ಅಗೌರವ ತೋರಿದರು. ಬಿಜೆಪಿ ಹೈ ಕಮಾಂಡ್ ಬಗ್ಗೆ ಸ್ವಾಮೀಜಿ ಅಸಮಾಧಾನದ ಮಾತನ್ನಾಡಿದರು. ಸ್ವಾಮಿಗಳು ಬೀದಿಗೆ ಬಂದಿದ್ದು ಯಡಿಯೂರಪ್ಪ ರನ್ನ ಉಳಿಸಲಿ ಎಂದು ಅಲ್ಲಾ. 

ಕೊರೋನ ಇದೆ, ಪ್ರವಾಹ ಇದೆ, ವಿಪರೀತ ಮಳೆಯಿದೆ.  ಜನ ಸಾಯುತ್ತಿದ್ದಾರೆ, ಹಾಹಾಕಾರ ಇದೆ. ಇಂತಹ ಸಂದರ್ಭ ರಾಜನ ಬದಲಾವಣೆ ಸರಿಯಲ್ಲ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು.  ಆದರೆ ಆಡಳಿತ ಪಕ್ಷ ಧಿಕ್ಕರಿಸಿದರು. ಸ್ವಾಮಿಜಿಗಳ ಸಲಹೆ ಧಿಕ್ಕರಿಸಿದ ಫಲವನ್ನು  ಅವರು ಸದ್ಯದಲ್ಲೇ ಉಣ್ಣುತ್ತಾರೆ.  ಸಿಎಂ ಪೂರ್ಣ ಅವಧಿ ಮುಗಿಸುತ್ತಾರೆ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಕೋಡಿ ಶ್ರೀ ಹೇಳಿದರು.

ದೇಶಕ್ಕೆ ರಾಜ್ಯಕ್ಕೆ ಎಲ್ಲಾ ರಾಜಭಯ ಇದೆ.  ಆಶ್ವಿಜ ಸಂಕ್ರಾಂತಿ‌ಒಳಗೆ ಬಹುದೊಡ್ಡ ಕಂಟಕ‌ ಇದೆ ಎಂದು ಹೇಳಿದ್ದೆ. ಅದರೊಳಗೆ ಎಲ್ಲವೂ ಸೇರಿದೆ ಎಂದು ಹಾಸನ ಜಿಲ್ಲೆ ಮಾಡಾಳು ಗ್ರಾಮದಲ್ಲಿ ಕೋಡಿ ಶ್ರೀ ಹೇಳಿದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC