ಬೆನ್ನಿಗೆ ಚೂರಿ ಹಾಕುತ್ತಿರುವುದು ಬೇಸರದ ಸಂಗತಿ: ಸಾ.ರಾ. ಮಹೇಶ್‌

By Kannadaprabha NewsFirst Published Mar 30, 2023, 7:20 AM IST
Highlights

ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡು, ನಮ್ಮಿಂದಲೇ ಬೆಳೆದು ಅಧಿಕಾರ ಪಡೆದು, ಸಾಕಷ್ಟುಅನುಕೂಲ ಪಡೆದ ಕೆಲವರು ನನ್ನ ಹಾಗೂ ಪಕ್ಷದ ವಿರುದ್ದೇ ನಿಂತು ಬೆನ್ನಿಗೆ ಚೂರಿ ಹಾಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಶಾಸಕ ಸಾ.ರಾ. ಮಹೇಶ್‌ ಭಾವನಾತ್ಮಕವಾಗಿ ನುಡಿದರು.

  ಸಾಲಿಗ್ರಾಮ:ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡು, ನಮ್ಮಿಂದಲೇ ಬೆಳೆದು ಅಧಿಕಾರ ಪಡೆದು, ಸಾಕಷ್ಟುಅನುಕೂಲ ಪಡೆದ ಕೆಲವರು ನನ್ನ ಹಾಗೂ ಪಕ್ಷದ ವಿರುದ್ದೇ ನಿಂತು ಬೆನ್ನಿಗೆ ಚೂರಿ ಹಾಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಶಾಸಕ ಸಾ.ರಾ. ಮಹೇಶ್‌ ಭಾವನಾತ್ಮಕವಾಗಿ ನುಡಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರು, ರಸ್ತೆ, ವಿದ್ಯುತ್‌, ಶಿಕ್ಷಣ, ಆಸ್ಪತ್ರೆ, ಸಮುದಾಯ ಭವನಗಳು, ರೈತಾಪಿ ವರ್ಗಕ್ಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀವು ಕೊಟ್ಟಅಧಿಕಾರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅನುದಾನವನ್ನು ಈ ತಾಲೂಕಿಗೆ ತಂದು. ಎಲ್ಲ ವರ್ಗಗಳ ಮತದಾರರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನ ಒಬ್ಬ ಶಾಸಕನಾಗಿ ಪ್ರಾಮಾಣಿಕವಾಗಿ ನನ್ನ ಶಕ್ತಿ ಮೀರಿ ವೈಯಕ್ತಿಕವಾಗಿಯೂ ಸಹಾಯ ಮಾಡಿರುವ ತೃಪ್ತಿ ನನಗಿದೆ ಎಂದರು.

ಹೆಣ್ಣು ಮಕ್ಕಳು ದೂರದೂರುಗಳಿಗೆ ಕೆಲಸಕ್ಕಾಗಿ ಬೆಳಗ್ಗೆ 6ಕ್ಕೆ ಮನೆ ಬಿಟ್ಟು ರಾತ್ರಿ ಮನೆ ಸೇರುತ್ತಿದ್ದು, ಅವರ ಕುಟುಂಬ ನಿರ್ವಹಣೆಯ ಕಷ್ಟಅರಿವು ನನಗಿರುವ ಕಾರಣ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಮಾಡಿರದಂತಹ ಗಾರ್ಮೆಂಟ್ಸ… ಕಾರ್ಖಾನೆ ಆರಂಭಿಸಿ ಇಂದು ಒಂದು ಸಾವಿರ ಹೆಣ್ಣು ಮಕ್ಕಳಿಗೆ ಕೆಲಸ ನೀಡಿ 70 ಸಾವಿರ ಕಟುಂಬದ ಹೆಣ್ಣು ಮಕ್ಕಳನ್ನು ಷೇರುದಾರನನ್ನಾಗಿ ಮಾಡಿ ಬರುವಂತ ಆದಾಯವನ್ನು ಅವರಿಗೆ ನೀಡುತ್ತಿರುವುದು ನನ್ನ ಕ್ಷೇತ್ರದ ಹೆಣ್ಣು ಮಕ್ಕಳು, ತಾಯಂದಿರ ಮೇಲೆ ನನಗಿರುವ ಅಪಾರ ಕಾಳಜಿ ಎಂದು ಅವರು ತಿಳಿಸಿದರು.

ಬೇರೆಯವರು ಮತಕ್ಕಾಗಿ ಕಣ್ಣೀರು ಹಾಕುತ್ತಾರೆ. ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ, ನಮ್ಮನ್ನ ಕಾಯುತ್ತಾನೆ ಎನ್ನುವ ಭಾವನೆ ಇದ್ದರೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ ಎನ್ನುವ ಭರವಸೆ ಇದ್ದರೆ ನನಗೆ ಮತಕೊಟ್ಟು ಗೆಲ್ಲಿಸಿ ನಾನು ಕೂಡ ಮನುಷ್ಯನೆ ನಾನು ಕೂಡ ಕಣ್ಣೀರು ಹಾಕಿದ್ದೇನೆ ನನ್ನ ಬೆನ್ನಿಗೆ ಚೂರಿ ಹಾಕಿದವರನ್ನು ನೆನೆದು ಎಂದು ಭಾವುಕರಾದರು.

ಜೆಡಿಎಸ್‌ ಕಾರ್ಯಕರ್ತರೇ ನಮ್ಮ ಶಕ್ತಿ : ಶಾಸಕ ಸಾ.ರಾ. ಮಹೇಶ್‌

ತಾಲೂಕು ಜೆಡಿಎಸ್‌ ಅಧ್ಯಕ್ಷ ಮೆಡಿಕಲ… ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಕೆ.ಆರ್‌. ನಗರ ಅಧ್ಯಕ್ಷÜ ಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಮಧುಚಂದ್ರ, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್‌, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಸೋಮಶೇಖರ್‌, ಉಪಾಧ್ಯಕ್ಷೆ ನೀಲಮ್ಮ ಗೋವಿಂದೇಗೌಡ, ಮಾಜಿ ಅಧ್ಯಕ್ಷರಾದ ನಟರಾಜ…, ಎಸ್‌.ಆರ್‌. ದಿನೇಶ್‌, ಪ್ರಕಾಶ್‌ ಲಾಲು ಸಾಹೇಬ್‌, ನಾಗೇಂದ್ರ, ಪಾಪಣ್ಣ, ಆಯಾಜ…, ನಟರಾಜು, ನಾಗರಾಜು, ಸುಜಯ…, ಎಸ್‌.ಪಿ. ಆನಂದ್‌, ಏಜಾಸ್‌, ಮಂಜು, ರಾಜು, ಚಂದ್ರು, ಲೋಕೇಶ್‌, ಶಕೀಲ…, ಕುಚೇಲ, ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಸೋಮಶೇಖರ್‌, ಲಕ್ಕೇಗೌಡ ಸೇರಿದಂತೆ ಜೆಡಿಎಸ್‌ ಕಾರ್ಯಕರ್ತರು ಇದ್ದರು.

ಈ ಬಾರಿ ಎಚ್‌ಡಿಕೆ ಸಿಎಂ

ಕೆ.ಆರ್‌.ನಗರ :  ಈ ಬಾರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ. ಮಹೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಬದುಕು ಕಟ್ಟಿಕೊಳ್ಳಲು ರಾಜಕೀಯಕ್ಕೆ ಬಂದಿಲ್ಲ : ಸಾ.ರಾ. ಮಹೇಶ್‌

ಪಟ್ಟಣದ ವಿಜಯನಗರ ಬಡಾವಣೆ ಬಳಿಯ ನೂತನ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗುವ ವಿಶ್ವಕರ್ಮ ಸಮುದಾಯ ಭವನದ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಕುಮಾರಸ್ವಾಮಿಯವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದರು, ಆದರೆ ಈ ಬಾರಿ ರಾಜ್ಯದ ಜನರೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ತೀರ್ಮಾನಿಸಿದ್ದು, ರಾಜ್ಯದ ಸಮಗ್ರ ಅಭಿವೃದ್ದಿ ಸ್ಥಳೀಯ ರಾಜಕೀಯ ಪಕ್ಷದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿರುವ ಜನತೆ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಲಿದ್ದಾರೆ ಎಂದರು.

ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವವರು ಮುಖ್ಯವೋ ನಮ್ಮ ಕುಟುಂಬ ಉಳಿಸಿ ಎಂದು ಜನತೆಯ ಮನೆ ಬಾಗಿಲಿಗೆ ಹೋಗುತ್ತಿರುವವರು ಮುಖ್ಯವೋ ಎಂಬುದನ್ನು ತೀರ್ಮಾನಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದ ಅವರು ತಾಲೂಕಿನ ಸೂಕ್ಷ್ಮತೀತ ಸೂಕ್ಷ್ಮ ಸಮಾಜಗಳಿಗೆ ಏನಾದರೂ ಕೆಲಸ ಮಾಡುಕೊಡುವುದಾಗಿ ನಾನು ಮಾತು ಕೊಟ್ಟರೆ ಸ್ವಲ್ಪ ದಿನ ತಡವಾದರೂ ಸರಿ ತಪ್ಪದೇ ನೆರವೇರಿಸುತ್ತೇನೆ. ಅಂತೆಯೆ ವಿಶ್ವಕರ್ಮ ಸಮಾಜದ ಸಮುದಾಯಭವನಕ್ಕೆ ನೇರ ಸರ್ಕಾರದಿಂದ ಈ ಜಾಗವನ್ನು ಮಂಜೂರಾತಿ ಮಾಡಿಸಿ ಇದಕ್ಕೆ ತಗಲುವ 5 ಲಕ್ಷ ರು. ಗಳನ್ನು ಈಗಾಗಲೆ ಪಾವತಿಸಿರುವುದಾಗಿ ಹೇಳಿದರು.

click me!