ಎಡಗಾಲಿನಲ್ಲಿ ಮಾತ್ರ ಒಂಭತ್ತು ಬೆರಳುಳ್ಳ ಮಗು ಜನನ

By Kannadaprabha News  |  First Published May 27, 2021, 9:48 AM IST
  • ಎಡಗಾಲಿಗೆ ಒಂಬತ್ತು ಬೆರಳುಳ್ಳ ಅಪರೂಪದ ಗಂಡು ಮಗು ಜನನ
  • ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20ನೇ ಪ್ರಕರಣ
  • ಸಿಜರೀನ್‌ ಮಾಡುವ ಮೂಲಕ ಹೆರಿಗೆ ಮಾಡಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. 

ಹೊಸಪೇಟೆ (ಮೇ.27): ನಗರದ ಖಾಸಗಿ ಆಸ್ಪತ್ರೆಯಲ್ಲಿ ಎಡಗಾಲಿಗೆ ಒಂಬತ್ತು ಬೆರಳುಳ್ಳ ಅಪರೂಪದ ಗಂಡು ಮಗುವಿಗೆ ತಾಯಿಯೊಬ್ಬರು ಜನ್ಮ ನೀಡಿದ್ದಾರೆ. 

ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20ನೇ ಪ್ರಕರಣವಾಗಿದೆ. ಆದರೆ, ಬಲಗಾಲಿಗೆ ಐದು ಬೆರಳುಗಳಿವೆ. 

Tap to resize

Latest Videos

ನವಜಾತ ಶಿಶುಗಳು ಮಾಡುವ ಕೆಲವು ವಿಲಕ್ಷಣ, ಆದರೆ ಸಾಮಾನ್ಯ ಕೆಲಸಗಳು!! ..

ಸಿಜರೀನ್‌ ಮಾಡುವ ಮೂಲಕ ಹೆರಿಗೆ ಮಾಡಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಆದರೆ, ಮಗುವಿನ ತಾಯಿ ಹೆಸರು ಹಾಗೂ ವಿಳಾಸ ಬಹಿರಂಗಕ್ಕೆ ಕುಟುಂಬಸ್ಥರು ಸಮ್ಮತಿಸಿಲ್ಲ. 

ತಾಯಿಯ ಗರ್ಭದಲ್ಲಿರುವಾಗ ಮಗುವಿಗೆ ಎಷ್ಟುಬೆರಳುಗಳು ಇರುತ್ತವೆ ಎಂಬುದು ಗೊತ್ತಾಗಲ್ಲ. ಜನನವಾದ ಬಳಿಕವಷ್ಟೇ ಇದು ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.

click me!