' ಅಮೃತಬಳ್ಳಿ, ತುಳಸಿ ಕಷಾಯ ಮಾರಕ ಕೊರೋನಾ ಗುಣಪಡಿಸುವ ಔಷಧ'

Kannadaprabha News   | Asianet News
Published : Mar 06, 2020, 11:24 AM ISTUpdated : Mar 06, 2020, 11:50 AM IST
' ಅಮೃತಬಳ್ಳಿ, ತುಳಸಿ ಕಷಾಯ ಮಾರಕ ಕೊರೋನಾ ಗುಣಪಡಿಸುವ ಔಷಧ'

ಸಾರಾಂಶ

ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾಗೆ ಈ ಎರಡು ಗಿಡಗಳಿಂದ ತಯಾರಿಸಿದ ಕಷಾಯ ಸೇವಿಸಿದಲ್ಲಿ ಪರಿಣಾಮಕಾರಿ ಎನ್ನಲಾಗಿದೆ. 

ಹೊನ್ನಾಳಿ [ಮಾ.06]:  ಯೋಗ, ಪ್ರಾಣಾಯಾಮ ಅಭ್ಯಾಸದಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ದೀರ್ಘಾಯುಗಳಾಗಬಹುದು. ಸದ್ಯಕ್ಕೆ ಜಗತ್ತನ್ನು ಬೆಚ್ಚಿಬೀಳುವಂತೆ ಮಾಡಿರುವ ಕೊರೋನಾ ರೋಗವನ್ನೂ ಕೂಡಾ ಯೋಗಾಸನದ ಮೂಲಕ ಓಡಿಸಬಹುದು ಎಂದು ಬಾಬಾ ರಾಮ್‌ದೇವ್‌ಜೀ ಹೇಳಿದರು.

ಇಲ್ಲಿನ ಹಿರೇಕಲ್ಮಠದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಗುರುವಾರ ಸಂಜೆ ಅವರು ಯೋಗ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಅವರು, ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನ ನೀಡಿ ಜನಮನ ಗೆದ್ದರು.

ಹಾಸನದ ವ್ಯಕ್ತಿಗೆ ಕೊರೋನಾ ಶಂಕೆ : ಜಿಲ್ಲಾಸ್ಪತ್ರೆಗೆ ದಾಖಲು.

ಅಮೃತಬಳ್ಳಿ, ತುಳಸಿ, ಕರಿಮೆಣಸು, ಅರಿಶಿಣ, ಶುಂಠಿ ಮಿಶ್ರಣ ಮಾಡಿ ಕಷಾಯ ಸೇವಿಸಿದರೆ ಕೊರೋನಾ ರೋಗ ಹೇಳ ಹೆಸರಿಲ್ಲದಂತೆ ಓಡಿಹೋಗುತ್ತದೆ ಎಂದರು. ಯೋಗ ಭಾರತದ ಸಂಸ್ಕೃತಿ. ನಾವೆಲ್ಲರೂ ಯೋಗ ವ್ರತ, ಸ್ವದೇಶಿ ವ್ರತಗಳ ಮೂಲಕ ಭಾರತ ಮಾತೆಯ ಸೇವೆ ಮಾಡುವ ಸಂಕಲ್ಪ ಮಾಡೋಣ ಎಂದರಲ್ಲದೇ ಯೋಗಾಭ್ಯಾಸದಿಂದ ನಿರೋಗಿಗಳಾಗಿರಿ ಎಂದು ಜನಸಮೂಹಕ್ಕೆ ಕರೆನೀಡಿದರು.

ವಿವಿಧ ಯೋಗಾಸನಗಳನ್ನು ಬಾಬಾ ರಾಮ್‌ದೇವ್‌ ವೇದಿಕೆಯ ಮೇಲೆ ನಿರಾಯಾಸವಾಗಿ ಮಾಡಿ ಜನಮೆಚ್ಚುಗೆ ಗಳಿಸಿದರು. ಅವರೊಂದಿಗೆ ಹಿರೇಕಲ್ಮಠದ ಒಡೆಯರ್‌ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಚಿತ್ರನಟ ಡಾ. ಶಿವರಾಜ್‌ಕುಮಾರ್‌, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡಾ ಯೋಗಾಸನಗಳನ್ನು ಮಾಡಿದರು. ಇದೇ ವೇಳೆ ನಟ ಶಿವರಾಜ್‌ ಕುಮಾರ್‌ ತಮ್ಮ ತಂದೆ ಡಾ.ರಾಜ್‌ ಅಭಿನಯದ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಬೀದರ್‌ ಸಂಸದ ಭಗವಂತ ಖೂಬಾ, ಜನಪ್ರತಿನಿಧಿಗಳು ಇದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC