ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣದ ಯೋಜನೆಯೊಂದು ಸಿದ್ಧವಾಗಿದ್ದು,ಕೋಡಿ ಹಸಿರು ಮಸೀದಿ ಮಾದರಿಯಲ್ಲಿ ನಿರ್ಮಿಸಲು ಯೋಜನೆ ಸಿದ್ಧವಾಗಿದೆ.
ಉಡುಪಿ (ಸೆ.14) : ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಬಾಬರಿ ಮಸೀದಿ ಕೆಡವಿದ ಬಳಿಕ ಅಯೋಧ್ಯೆಯ ಧನ್ನಿಪುರದಲ್ಲಿ ತಲೆ ಎತ್ತಲಿರುವ ನೂತನ ಮಸೀದಿಯನ್ನು ಪರಿಸರಸ್ನೇಹಿಯಾಗಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಎಂಬಲ್ಲಿರುವ ಗ್ರೀನ್ ಮಸೀದಿಯ ರಚನೆ ಕುರಿತು ಅಧ್ಯಯನ ನಡೆದಿದೆ.
ಕೋಡಿಯಲ್ಲಿ 4 ವರ್ಷಗಳ ಹಿಂದೆ ಬ್ಯಾರೀಸ್ ಗ್ರೂಪ್ ನಿರ್ಮಾಣ ಮಾಡಿರುವ ಈ ಬದ್ರಿಯಾ ಜುಮ್ಮಾ ಮಸೀದಿ ವಿಶ್ವದ ಪ್ರಥಮ ಹಸಿರು ಮಸೀದಿ ಎಂಬ ಖ್ಯಾತಿಗೆ ಪಾತ್ರವಾಗಿದೆ. 15 ಸಾವಿರ ಚರದಡಿಯ ಈ ಮಸೀದಿಯನ್ನು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ, ಸಾಕಷ್ಟುಗಾಳಿ, ಬೆಳಕು ಆಡುವಂತೆ, ಅತ್ಯಂತ ಕಡಿಮೆ ವಿದ್ಯುತ್ ಬಳಕೆಯಾಗುವಂತೆ ನಿರ್ಮಿಸಲಾಗಿದೆ ಮತ್ತು ಈ ವಿದ್ಯುತ್ತನ್ನು ಮಸೀದಿಯ ಮೀನಾರ್ ಮೇಲೆ ಅಳವಡಿಸಲಾಗಿರುವ ಗಾಳಿಯಂತ್ರದ ಮೂಲಕವೇ ಉತ್ಪಾದಿಸಲಾಗುತ್ತಿದೆ.
undefined
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯಷ್ಟೆ ದೊಡ್ಡ ಮಸೀದಿ ನಿರ್ಮಾಣ
ಮಸೀದಿಯ ಈ ಪರಿಸರಸ್ನೇಹಿ ತತ್ವವು ಅಯೋಧ್ಯೆಯಲ್ಲಿ ನಿರ್ಮಿಸಲಾಗುವ ಮಸೀದಿಯ ವಿನ್ಯಾಸಕಾರ ಎಸ್.ಎಂ. ಅಖ್ತರ್ ಅವರನ್ನು ಆಕರ್ಷಿಸಿದೆ. ಈಗಾಗಲೇ 50 ಮಂದಿ ಕೋಡಿ ಮಸೀದಿಗೆ ಭೇಟಿ ನೀಡಿ ಅಧ್ಯಯನವನ್ನೂ ಮಾಡಿದ್ದಾರೆ ಎಂದು ಬ್ಯಾರೀಸ್ ಗ್ರೂಪ್‌ನ ಸೈಯದ್ ಅಹಮದ್ ಬ್ಯಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
40 ವರ್ಷದ ಹಿಂದೆ ಕೋಡಿ ನಿವಾಸಿ ಸೂಫಿ ಸಾಹೇಬ್ ಅವರು ಹಜ್‌ಗೆ ತೆರಳಲು ಒಂದಷ್ಟುಹಣ ಸಂಗ್ರಹಿಸಿದ್ದರು. ಆದರೆ, ಅನಾರೋಗ್ಯದಿಂದ ಹಜ್ ಯಾತ್ರೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಆ ಹಣದಿಂದ ಪುಟ್ಟಮಸೀದಿ ನಿರ್ಮಿಸಿದ್ದರು. 4 ವರ್ಷಗಳ ಹಿಂದೆ ಅದೇ ಮಸೀದಿಯನ್ನು ಅವರ ಮೊಬ್ಬಕ್ಕಳು ಬ್ಯಾರೀಸ್ ಗ್ರೂಪ್‌ನ ಮೂಲಕ ಸಂಪೂರ್ಣ ಪರಿಸರಸ್ನೇಹಿ ಮಸೀದಿಯನ್ನಾಗಿ ಪರಿವರ್ತಿಸಿದ್ದಾರೆ.