Aviation Training Center: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನಾ ತರಬೇತಿ ಕೇಂದ್ರ

By Kannadaprabha News  |  First Published Jan 6, 2022, 6:48 AM IST

*   ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ವಿಮಾನಯಾನ ಸಚಿವರಲ್ಲಿ ಒತ್ತಾಯಿಸಿದ್ದ ಜೋಶಿ
*   ವಿಮಾನ ಚಾಲನಾ ತರಬೇತಿ ಬಯಸುವ ಯುವಕರಿಗೆ ಇದೊಂದು ಒಳ್ಳೆಯ ಅವಕಾಶ
*   ವಾಣಿಜ್ಯ ನಗರಿ ಹುಬ್ಬಳ್ಳಿಗೆ ಮತ್ತೊಂದು ಗರಿ


ಹುಬ್ಬಳ್ಳಿ(ಜ.06):  ವಾಣಿಜ್ಯ ನಗರಿ ಹುಬ್ಬಳ್ಳಿಯ(Hubballi) ವಿಮಾನ ನಿಲ್ದಾಣದಲ್ಲಿ(Airport) ವಿಮಾನ ಚಾಲನಾ ತರಬೇತಿ ಕೇಂದ್ರ(Aviation Training Center) ತಲೆ ಎತ್ತಲಿದೆ. ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತರಬೇತಿ ಕೇಂದ್ರ ತೆರೆಯಲು ಒಪ್ಪಿಗೆ ಸೂಚಿಸಿದ್ದು ಶೀಘ್ರ ಇದಕ್ಕಾಗಿ ವಿಮಾನಯಾನ ಪ್ರಾಧಿಕಾರ ಟೆಂಡರ್‌ ಕರೆವ ಸಾಧ್ಯತೆ ಇದೆ.

ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಇಲಾಖಾ ಸಚಿವ ಪ್ರಹ್ಲಾದ ಜೋಶಿ(Pralhad Joshi) ಅವರು ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ವಿಮಾನಯಾನ ಸಚಿವರಲ್ಲಿ ಒತ್ತಾಯಿಸಿದ್ದರು. ದೇಶದಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್‌ಗಳ ಕೊರತೆ ನೀಗಿಸಲು ಆರು ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಕೇಂದ್ರ ಸರ್ಕಾರ ಸ್ಥಾಪಿಸುತ್ತಿದೆ. ಅದರಲ್ಲೀಗ ಹುಬ್ಬಳ್ಳಿ ಕೂಡ ಸೇರ್ಪಡೆ ಆಗಿರುವುದು ಸಂತೋಷಕರ ವಿಷಯ ಎಂದು ತಿಳಿಸಿದ್ದಾರೆ.

Tap to resize

Latest Videos

Hubballi: ಮತ್ತಷ್ಟು ಸುಂದರವಾಗಲಿದೆ ಏರ್‌ಪೋರ್ಟ್‌

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜೋಶಿ, ಈ ಹಿಂದಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ(Hardeep Singh Puri) ಹಾಗೂ ಈಗಿನ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyotiraditya Scindia) ಜತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒತ್ತಾಯ ಮಾಡಿದ್ದೆವು. ನಮ್ಮ ಬೇಡಿಕೆಗೆ ಸ್ಪಂದಿಸಿರುವ ಸಚಿವ ಸಿಂಧಿಯಾ ಅವರ ಈ ಕ್ರಮದಿಂದ ವಿಮಾನ ಚಾಲನಾ ತರಬೇತಿ ಬಯಸುವ ಯುವಕರಿಗೆ(Youths) ಇದೊಂದು ಒಳ್ಳೆಯ ಅವಕಾಶ ಸಿಕ್ಕಂತಾಗಿದೆ. ಈ ಕೇಂದ್ರ ಸ್ಥಾಪನೆಯಿಂದ ಕೈಗಾರಿಕೋದ್ಯಮಕ್ಕೂ(Industry) ಸಹಕಾರಿಯಾಗಲಿದೆ ಎಂದೂ ಜೋಶಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕರೆ, ಎರಡನೇ ಹಂತದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ವಿಮಾನ ಚಾಲನಾ ತರಬೇತಿ ಕೇಂದ್ರಕ್ಕೆ ಆಯ್ಕೆ ಮಾಡಲಾಗಿದೆ. ತರಬೇತಿ ಕೇಂದ್ರ ಸ್ಥಾಪನೆಗೆ ನಿಲ್ದಾಣದಲ್ಲಿ ಅಗತ್ಯ ಸ್ಥಳಾವಕಾಶ ಇದೆ. ಎಎಐ ಈ ಕುರಿತು ಟೆಂಡರ್‌ ಕರೆಯಲಿದೆ. ತರಬೇತಿ ಕೇಂದ್ರಕ್ಕಾಗಿ ಕಟ್ಟಡ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ‘ಏರ್‌ ಟ್ಯಾಕ್ಸಿ’ ಸೇವೆ ಶೀಘ್ರ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ(Hubballi Airport) ‘ಏರ್‌ ಟ್ಯಾಕ್ಸಿ’(Air Taxi) ಸೇವೆ ಲಭ್ಯವಾಗುವ ಸಾಧ್ಯತೆ ಇದೆ. ಹರಿಯಾಣ(Haryana) ಮೂಲದ ಕಂಪನಿಯೊಂದು ಈ ಸೇವೆಗಾಗಿ ಹುಬ್ಬಳ್ಳಿಯಲ್ಲಿ ರಾತ್ರಿ ನಿಲುಗಡೆಗೆ ಡಿಜಿಸಿಎ ಮೂಲಕ ಪರವಾನಗಿ ಪಡೆದಿದೆ.

ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಮೊದಲ ಕಾರ್ಗೋ ಸೇವೆ: ಕೃಷ್ಯುತ್ಪನ್ನ ಸಾಗಾಟ

ಉಡಾನ್‌(Udaan) ಯೋಜನೆ ಅಡಿ ಉತ್ತಮ ಸಾಧನೆ ಮಾಡಿರುವ ಹುಬ್ಬಳ್ಳಿ ನಿಲ್ದಾಣದಲ್ಲಿ ಸದ್ಯ ಖಾಸಗಿ ವಿಮಾನಗಳ(Private Flights) ಮೂಲಕ ಗಣ್ಯರು ಸಂಚರಿಸುತ್ತಿದ್ದಾರೆ. ಅದರ ಹೊರತಾಗಿ ಖಾಸಗಿ ಸಂಸ್ಥೆಯಿಂದಲೆ ‘ಏರ್‌ ಟ್ಯಾಕ್ಸಿ’ ಸೇವೆ ಇರಲಿಲ್ಲ. ಇದೀಗ ‘ಏರ್‌ ಟ್ಯಾಕ್ಸಿ’ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಅಂದುಕೊಂಡಂತೆ ನಡೆದರೆ ವಾಣಿಜ್ಯ ನಗರಿಗೆ ಮತ್ತೊಂದು ಗರಿ ಮೂಡಿದಂತಾಗಲಿದೆ.

ಹುಬ್ಬಳ್ಳಿ(Hubballi) ನಿಲ್ದಾಣದಲ್ಲಿ ಪ್ರತಿನಿತ್ಯ ವಿಮಾನಗಳ ಸಂಚಾರ ಇದ್ದರೂ ರಾತ್ರಿ ವೇಳೆ ಪಾರ್ಕಿಂಗ್‌ಗೆ ಯಾವುದೆ ಅವಕಾಶ ಇರಲಿಲ್ಲ. ಸ್ಟಾರ್‌ ಏರ್‌(Star Air), ಇಂಡಿಗೋ(Indigo) ಸೇರಿ ಕೆಲ ಕಂಪನಿಗಳು ಈ ಮೊದಲೆ ರಾತ್ರಿ ನಿಲುಗಡೆಗೆ ಪರವಾನಗಿ ಕೋರಿದ್ದು, ಡಿಜಿಸಿಐ (Directorate General of Civil Aviation) ಒಪ್ಪಿಗೆಗೆ ಕಾಯುತ್ತಿವೆ. ಈ ನಡುವೆ ಹರಿಯಾಣದ ಗುರಗಾಂವ್‌(Gurugram) ಮೂಲದ ‘ಏರ್‌ ಟ್ಯಾಕ್ಸಿ’ ಹೆಸರಿನ ಸಂಸ್ಥೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾರ್ಕಿಂಗ್‌ಗೆ ಅನುಮತಿ ಪಡೆದಿದೆ.
 

click me!