Chitradurga News: ಆಟೋಗಳಲ್ಲಿ ಒಮ್ಮೆಲೆ ಝೊಂಬಿಯಂತೆ 25 ಜನ ಹತ್ತಿ ಪ್ರಯಾಣಿಸ್ತಾರೆ!

By Kannadaprabha NewsFirst Published Jan 2, 2023, 2:56 PM IST
Highlights

ಚಳ್ಳಕೆರೆ ನಗರದದಿಂದ ಸುತ್ತ ಮುತ್ತ ಐದರಿಂದ ಹದಿನೈದು ಕಿಮೀ ವರೆಗಿನ ಹಳ್ಳಿಗಳಿಗೆ ಆಟೋಗಳು ಸಂಚರಿಸುತ್ತವೆ. ಹಾಗಾಗಿ 25 ಮಂದಿ ತುಂಬಿಕೊಂಡು ಹೋಗುತ್ತಾರೆ. ಪ್ರಯಾಣಿಕರು ತಮ್ಮ ಊರು ಬರುವ ತನಕ ಜೀವ ಕೈಲಿಡಿದುಕೊಂಡಿರುತ್ತಾರೆ. ಕೇಳಿದಷ್ಟುಹಣ ನೀಡಿಯೂ, ಪ್ರಯಾಣಿಕರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ.

ಕ್ಯಾಂಪನ್‌ ಸ್ಟೋರಿ-ಭಾಗ-4

ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ (ಜ.2) : ಆಟೋ ರಿಕ್ಷಾ ಎಂದರೆ ತ್ರೀ ಪ್ಲಸ್‌ ಒನ್‌ ಸೀಟ್‌ ಸಾಮರ್ಥ್ಯದ ಪ್ರಯಾಣಿಕರ ವಾಹನ ಎಂದೇ ಪ್ರಾದೇಶಿಕ ಸಾರಿಗೆ ಕಚೇರಿ ದಾಖಲಾತಿಗಳಲ್ಲಿ ನಮೂದಾಗಿರುತ್ತದೆ. ಸ್ವಲ್ಪ ಅಡ್ಜೆಸ್ಟ್‌ ಮಾಡ್ಕಂಡು ಹೋದ್ರೆ ಒಂದಿಬ್ಬರು ಹೆಚ್ಚುವರಿಯಾಗಿ ಪ್ರಯಾಣಿಸಬಹುದು. ಆದರೆ ಭವಿಷ್ಯದ ಸೈನ್ಸ್‌ ಸಿಟಿ ಎಂಬ ಖ್ಯಾತಿಗೆ ಒಳಗಾಗಿರುವ ಚಳ್ಳಕೆರೆಯಲ್ಲಿ ಮಾತ್ರ ಆಟೋಗಳಲ್ಲಿ ಹೋಗುವ ಪ್ರಯಾಣಿಕರಿಗೆ ಮಿತಿ ಇದ್ದಂತೆ ಕಾಣುವುದಿಲ್ಲ. ಬರೋಬ್ಬರಿ ಇಪ್ಪತ್ತೈದು ಮಂದಿ ಪ್ರಯಾಣಿಸುತ್ತಾರೆ. ಮಿನಿ ಬಸ್‌ಗಳಲ್ಲಿನ ಸಾಮರ್ಥ್ಯದಷ್ಟುಪ್ರಯಾಣಿಕರನ್ನು ಈ ಆಟೋಗಳು ನಿತ್ಯವೂ ನಗರದಿಂದ ಹಳ್ಳಿಗಳತ್ತ ಕೊಂಡೊಯ್ಯತ್ತವೆ.

ಗ್ರಾಮೀಣ ಪ್ರದೇಶಗಳಿಗೆ ಹೋಗಲು ಸಕಾಲದಲ್ಲಿ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಜನತೆ ಅನಿವಾರ್ಯವಾಗಿ ಇಂತಹ ಆಟೋಗಳ ಅವಲಂಬಿಸುತ್ತಿದ್ದಾರೆ. ಸಂದರ್ಭಗಳ ದುರ್ಬಳಕೆ ಮಾಡಿಕೊಳ್ಳುವ ಆಟೋ ಚಾಲಕರು ಬಾಯಿಗೆ ಬಂದಂತೆ ದರ ವಸೂಲು ಮಾಡುತ್ತಾರೆ. ಆಟೋ ಏರಿ ತಮ್ಮ ಸ್ಥಳದಲ್ಲಿ ಇಳಿಯುವಾಗ ಎಷ್ಟುಕೇಳುತ್ತಾರೋ ಅನ್ನೋ ಭಯ ಪ್ರಯಾಣಿಕರಲ್ಲಿ ಮೂಡುತ್ತದೆ. ಪ್ರತಿ ನಿತ್ಯವೂ ಆಂಧ್ರಪ್ರದೇಶವೂ ಸೇರಿದಂತೆ ಗ್ರಾಮೀಣ ಭಾಗದ ನೂರಾರು ಜನರು ಬಂದುಹೋಗುತ್ತಾರೆ. ಹೊರಗಡೆಯಿಂದ ಬರುವ ಜನರಿಗೆ ಅನೇಕ ಸಲ ಆಟೋ ಚಾಲಕರ ವರ್ತನೆ ಭಯ ಹುಟ್ಟಿಸಿದ ಪ್ರಸಂಗಗಳು ಇವೆ.

 

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಆಟೋ-ಸುಲಿಗೆ; ಕಿಮೀಗೂ ನೂರು ರೂ. ಕೇಳ್ತಾರೆ!

ನಗರ ವ್ಯಾಪ್ತಿಯಲ್ಲಿ ಆಟೋ ಪ್ರಯಾಣ ದರ 30 ರು.(ಇದು ಆಟೋ ಚಾಲಕರೇ ನಿಗದಿಮಾಡಿಕೊಂಡ ದರ) ನಿಗದಿ ಮಾಡಲಾಗಿದೆ. ಆಟೋ ಚಾಲಕ ಸಂಘದವರೇ ದರ ನಿರ್ಧಾರ ಮಾಡಿದ್ದರೂ ನೆಹರೂ ವೃತ್ತದಿಂದ ವಿಠಲನಗರ ವ್ಯಾಪ್ತಿಗೆ ಪ್ರಯಾಣಿಸಿದರೆ 50 ರಿಂದ 70 ರು. ಕೇಳುತ್ತಾರೆ. ಯಾಕಪ್ಪ ಇಷ್ಟುದುಬಾರಿ ಎಂದು ಪ್ರಶ್ನಿಸಿದರೆ ಪ್ರಯಾಣಿಕರ ಮೇಲೆಯೇ ದರ್ಪ ತೋರುತ್ತಾರೆ. ಕೇಳಿದಷ್ಟುಕೊಡಿ ಎಂದು ದಬಾಯಿಸುವವರೆ ಹೆಚ್ಚು.

ಚಳ್ಳಕೆರೆ ನಗರದದಿಂದ ಸುತ್ತ ಮುತ್ತ ಐದರಿಂದ ಹದಿನೈದು ಕಿಮೀ ವರೆಗಿನ ಹಳ್ಳಿಗಳಿಗೆ ಆಟೋಗಳು ಸಂಚರಿಸುತ್ತವೆ. ಹಾಗಾಗಿ 25 ಮಂದಿ ತುಂಬಿಕೊಂಡು ಹೋಗುತ್ತಾರೆ. ಪ್ರಯಾಣಿಕರು ತಮ್ಮ ಊರು ಬರುವ ತನಕ ಜೀವ ಕೈಲಿಡಿದುಕೊಂಡಿರುತ್ತಾರೆ. ಕೇಳಿದಷ್ಟುಹಣ ನೀಡಿಯೂ, ಪ್ರಯಾಣಿಕರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ.

ತಾಲೂಕಿನ ದೊಡ್ಡೇರಿ, ರೆಡ್ಡಿಹಳ್ಳಿ, ಕೆಂಚವೀರನಹಳ್ಳಿ, ದೇವರಮರಿಕುಂಟೆ, ಕಸ್ತೂರಿತಿಮ್ಮನಹಳ್ಳಿ, ಮೀರಸಾಭಿಹಳ್ಳಿ, ಕರೀಕೆರೆ, ವಿಡಪನಕುಂಟೆ, ದ್ಯಾವರನಹಳ್ಳಿ, ಪುರ್ಲೆಹಳ್ಳಿ, ಚನ್ನಮ್ಮನಾಗತಿಹಳ್ಳಿ, ಹೊಟ್ಟೆಪ್ಪನಹಳ್ಳಿ, ಗೋಪನಹಳ್ಳಿ, ಚಿಗತನಹಳ್ಳಿ ಅಡವಿಚಿಕ್ಕೆನಹಳ್ಳಿ, ಸಾಣಿಕೆರೆ, ಸೋಮಗುದ್ದು, ಚಿಕ್ಕಮಧುರೆ, ಹಿರೇಮಧುರೆಯೂ ಸೇರಿದಂತೆ ಹಲವಾರು ಕಡೆಗೆ ನಿತ್ಯ ಕನಿಷ್ಠವೆಂದರೂ 100 ಆಟೋಗಳು ಸಂಚರಿಸುತ್ತವೆ.

ಫಿಟ್‌ನೆಸ್‌ ತೋರಿಸಿದ ನಂತರ ಆಟೋದ ಮೀಟರ್‌ ಮಾಯ

ಒಳಗೆ ಸೀಟುಗಳು ಭರ್ತಿಯಾದ ಮೇಲೂ ಆಟೋ ಮೇಲ್ಗಡೆ ಇರುವ ಪುಟ್ಟಕ್ಯಾರಿಯರ್‌ ಮೇಲೆ ಜನರ ಕುಳ್ಳಿರಿಸಿಕೊಂಡು ಹೋಗಲಾಗುತ್ತದೆ. ಪೊಲೀಸ್‌, ಕಾನೂನಿನ ಭಯವಿಲ್ಲದೆ ಪ್ರಯಾಣಿಕರನ್ನು ಕರೆದೊಯ್ಯುವ ಚಾಲಕರ ಪ್ರಶ್ನೆ ಮಾಡುವವರು ಇಲ್ಲದಂತಾಗಿದೆ. ಪೋಲೀಸರ ಜಾಣ ಕುರುಡುತನ ಎಂದಿನಂತೆ ಅಗ್ರಸ್ಥಾನದಲ್ಲಿದೆ.

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಆಟೋ-ಸುಲಿಗೆ; ಕಿಮೀಗೂ ನೂರು ರೂ. ಕೇಳ್ತಾರೆ!

ಗ್ರಾಮೀಣರ ಸುಲಿಗೆ:

ಬಸ್‌ಗಳು ಇಲ್ಲದ ಕಾರಣ ಇಂತಹ ಆಟೋ ಅವಲಂಬಿಸುವ ಗ್ರಾಮೀಣರನ್ನು ಆಟೋ ಚಾಲಕರು ಸುಲಿಗೆ ಮಾಡುತ್ತಿದ್ದಾರೆ. ಒಬ್ಬ ಪ್ರಯಾಣಿಕನಿಗೆ 20ರಿಂದ 30 ರು. ದರ ವಸೂಲು ಮಾಡುವ ಆಟೋದವರು ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿ ಕೊಡುವುದಿಲ್ಲ. ನಾಲ್ಕು ಮಂದಿ ಹೋಗುವ ಸಾಮರ್ಥ್ಯದ ವಾಹನದಲ್ಲಿ 25 ಮಂದಿಯ ಕರೆದೊಯ್ಯುತ್ತಿದ್ದಾರೆ.

click me!