ಫಿಟ್‌ನೆಸ್‌ ತೋರಿಸಿದ ನಂತರ ಆಟೋದ ಮೀಟರ್‌ ಮಾಯ

ಚಿತ್ರದುರ್ಗದಲ್ಲಿ ಆಟೋ ಪ್ರಯಾಣದರ ಹೆಚ್ಚಳ ಕುರಿತಂತೆ ಕನ್ನಡಪ್ರಭದಲ್ಲಿ ಸರಣಿ ವರದಿಗಳು ಶುರುವಾಗುತ್ತಿದ್ದಂತೆ ಮೀಟರ್‌ ಹಾಕಿದ್ರೆ ಮಾತ್ರ ಕಡಿವಾಣ ಹಾಕಬಹುದೆಂಬ ಪ್ರತಿಕ್ರಿಯೆಗಳು ವ್ಯಾಪಕವಾಗಿ ಕೇಳಿ ಬಂದಿವೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲೂ ಆಟೋ ಚಾಲಕರ ನಡೆ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗಿವೆ.

Autos meter disappears after showing fitness at chitradurga rav

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಡಿ.31) : ಚಿತ್ರದುರ್ಗದಲ್ಲಿ ಆಟೋ ಪ್ರಯಾಣದರ ಹೆಚ್ಚಳ ಕುರಿತಂತೆ ಕನ್ನಡಪ್ರಭದಲ್ಲಿ ಸರಣಿ ವರದಿಗಳು ಶುರುವಾಗುತ್ತಿದ್ದಂತೆ ಮೀಟರ್‌ ಹಾಕಿದ್ರೆ ಮಾತ್ರ ಕಡಿವಾಣ ಹಾಕಬಹುದೆಂಬ ಪ್ರತಿಕ್ರಿಯೆಗಳು ವ್ಯಾಪಕವಾಗಿ ಕೇಳಿ ಬಂದಿವೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲೂ ಆಟೋ ಚಾಲಕರ ನಡೆ ಬಗ್ಗೆ ಕಟು ಟೀಕೆಗಳು ವ್ಯಕ್ತವಾಗಿವೆ. ಪ್ರಯಾಣದರ ನಿಗದಿ ಮಾಡಲು ಮೀಟರ್‌ ಅಳವಡಿಸುವ ಕ್ರಮ ಒತ್ತಟ್ಟಿಗಿರಲಿ, ಆಟೋ ರಿಕ್ಷಾ ಎಂದರೆ ಮೀಟರ್‌ ಇರಲೇಬೇಕೆಂಬ ಸಂಗತಿ ಅಷ್ಟಾಗಿ ಪೊಲೀಸರಿಗೆ ಗೊತ್ತೇ ಇಲ್ಲ.

ಯಾವುದೇ ಆಟೋ ಶೋ ರೂಂ(Showroom)ನಿಂದ ಹೊರ ಬಂದ ನಂತರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ(Regional Transport Department Office)ಗೆ ಹೋಗಿ ನೋಂದಣಿ(Registration) ಆಗುವುದಿಲ್ಲ. ಇದಕ್ಕಿಂತ ಮೊದಲು ಮೀಟರ್‌ ಅಳವಡಿಸುವ ಪ್ರಕ್ರಿಯೆ ಮುಗಿಸಿಕೊಳ್ಳಲೇಬೇಕು. ಇದಕ್ಕೆಂದೇ ತೂಕ ಮತ್ತು ಅಳತೆ ಇಲಾಖೆ ಕಾರ್ಯ ನಿರ್ವಹಿಸುತ್ತದೆ.

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಆಟೋ-ಸುಲಿಗೆ; ಕಿಮೀಗೂ ನೂರು ರೂ. ಕೇಳ್ತಾರೆ!

ಆಟೋ(Auto) ಸಂಗಡ ತೂಕ ಮತ್ತು ಅಳತೆ ಇಲಾಖೆ(Department of Measurement)ಗೆ ಎಡತಾಕುವ ಮಾಲೀಕರು ಮೀಟರ್‌ ಫಿಕ್ಸ್‌ ಮಾಡಿಕೊಂಡು ಅಧಿಕಾರಿಗಳಿಗೆ ತೋರಿಸುತ್ತಾರೆ. ಮೀಟರ್‌ ಮೇಲಿನ ನಂಬರ್‌( ಉತ್ಪಾದನಾ ಸೀರೀಸ್‌) ರೆಕಾರ್ಡ್‌ ಮಾಡಿಸಿಕೊಂಡು ಸತ್ಯಾಪನ ಮತ್ತು ಮುದ್ರೆ ಮಾಡಿಸಿಕೊಳ್ಳುತ್ತಾರೆ. ನಂತರ ನೇರವಾಗಿ ಪ್ರಾದೇಶಿಕ ಕಚೇರಿಗೆ ಹೋಗಿ ಪಾಸಿಂಗ್‌ ಮಾಡಿಸಿಕೊಳ್ಳುತ್ತಾರೆ. ಇದಾದ ನಂತರವೇ ಆಟೋ ಬೀದಿಗಿಳಿಯಬೇಕು.

ಎಲ್ಲಿವೆ ಮೀಟರ್‌ಗಳು ?

ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡ ತಕ್ಷಣ ಆಟೋ ಚಾಲಕರು ಮೀಟರುಗಳ ಕಿತ್ತೆಸೆಯುತ್ತಿದ್ದಾರೆ. ಇದನ್ನು ಪರಿಶೀಲಿಸುವ ಉಸಾಬರಿಗೆ ಪೊಲೀಸರಾಗಲೀ, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳಾಗಲೀ ಹೋಗುತ್ತಿಲ್ಲ. ರಿಕ್ಷಾ ಮಾಲೀಕರು ಪ್ರತಿ ವರ್ಷ ತೂಕ ಮತ್ತು ಅಳತೆ ಇಲಾಖೆಗೆ ಹೋಗಿ ಸತ್ಯಾಪನ ಮತ್ತು ಮುದ್ರೆ ಮಾಡಿಸಿಕೊಳ್ಳಲೇ ಬೇಕೆಂಬುದು ನಿಯಮ. ಚಿತ್ರದುರ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇದುವರೆಗೂ 3864 ಆಟೋಗಳು ನೋಂದಣಿಯಾಗಿದ್ದು, ಇಷ್ಟೇ ಪ್ರಮಾಣದ ಆಟೋಗಳಿಗೆ ಮೀಟರ್‌ಗಳು ಇರಬೇಕು. ನೀವು ದುರ್ಗದ ಯಾವುದೇ ಆಟೋಗಳತ್ತ ಕಣ್ಣು ಹಾಯಿಸಿದರೆ ಒಂದೂ ಮೀಟರ್‌ ಕಾಣಿಸುವುದಿಲ್ಲ. ಅಂದರೆ ಇವೆಲ್ಲ ಕಾನೂನು ಬಾಹಿರವಾಗಿಯೇ ಸಂಚರಿಸುತ್ತಿವೆ.

ಸತ್ಯಾಪನ ಮುದ್ರೆ ಮುದ್ರೆಗಳಿಲ್ಲ:

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಮೂರು ಸಾವಿರ ಆಟೋಗಳು ನೋಂದಣಿಯಾಗಿದ್ದರೆ, ತೂಕ ಮತ್ತು ಅಳತೆ ಇಲಾಖೆಯಲ್ಲಿ ಕೇವಲ 251 ಆಟೋಗಳಿಗೆ ಮಾತ್ರ ಸ್ಟಾಂಪಿಂಗ್‌(ಸತ್ಯಾಪನ ಮುದ್ರೆ) ಮಾಡಿಸಲಾಗಿದೆ. ಉಳಿದ ಆಟೋಗಳು ಎಲ್ಲಿ ಹೋದವು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಸೇರಿದಂತೆ ಮೂರು ತಾಲೂಕುಗಳಿಗೆ ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ನಿಯಂತ್ರಕರು ಬರುತ್ತಾರೆ. ಉಳಿದಂತೆ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲೂಕುಗಳಿಗೆ ಮತ್ತೋರ್ವ ಸಹಾಯಕ ನಿಯಂತ್ರಕರು ಬರಲಿದ್ದು, ಅವರ ಕಚೇರಿ ಚಳ್ಳಕೆರೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಐಕ್ಯತಾ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮನ ಸಾಧ್ಯತೆ : ಪಿ.ಟಿ.ಪರಮೇಶ್ವರ ನಾಯ್ಕ್

ನಿಯಮಬಾಹಿರವಾಗಿ ಸಂಚರಿಸುತ್ತಿರುವ ಈ ಆಟೋಗಳ ತಡೆದು ಮೊದಲು ಮೀಟರ್‌ ಅಳವಡಿಸುವ ಪ್ರಕ್ರಿಯೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ, ಕಾನೂನು ಮಾಪನ ಶಾಸ್ತ್ರ ಮತ್ತು ಪೊಲೀಸರು ಚಾಲನೆ ನೀಡಿ ಯಶ ಕಾಣಬೇಕು. ನಂತರವೇ ದರ ನಿಗದಿಪಡಿಸುವ ಕೆಲಸ ಶುರುವಾಗುತ್ತದೆ. ಆಟೋಗಳಿಗೆ ಮೀಟರ್‌ ಹಾಕಿಸದ ಹೊರತು ಚಾಲಕರ ನಡೆಗಳ ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ. ಯಾವುದೇ ಆಟೋ ಬೀದಿಗಿಳಿಯಬೇಕಾದರೆ ಮೀಟರ್‌ ಇರಲೇಬೇಕೆಂಬ ಕಾನೂನನ್ನು ರಿಕ್ಷಾ ಚಾಲಕರಿಗೆ ಪರಿಚಯ ಮಾಡಿಕೊಡುವ ಅಗತ್ಯವಿದೆ.

Latest Videos
Follow Us:
Download App:
  • android
  • ios