Namma Metro: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ 1.70 ಕೋಟಿ ಆದಾಯ: ಹಿಂದಿನ ದಾಖಲೆ ಉಡೀಸ್

By Sathish Kumar KHFirst Published Jan 2, 2023, 2:45 PM IST
Highlights

ಹೊಸ ವರ್ಷದ ಹಿನ್ನೆಲೆಯಲ್ಲಿ ಡಿ.31ರಂದು ಬೆಳಗ್ಗೆಯಿಂದ ರಾತ್ರಿವರೆಗೆ ಮೆಟ್ರೋ ರೈಲಿನಲ್ಲಿ 6.50 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ನಮ್ಮ ಬಿಎಂಆರ್‌ಸಿಎಲ್ ಸಂಸ್ಥೆಗೆ ಬರೋಬ್ಬರಿ 1.70 ಕೋಟಿ ರೂ. ಆದಾಯ ಬಂದಿದೆ.

ಬೆಂಗಳೂರು (ಜ.02):  ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್‌ ರಹಿತ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುವ ಬೆಂಗಳೂರು ಮೆಟ್ರೋ ಕಾರ್ಪೋರೇಷನ್‌ ಲಿ. (ಬಿಎಂಆರ್‌ಸಿಎಲ್‌)ನ ನಮ್ಮ ಮೆಟ್ರೋ ರೈಲಿನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಡಿ.31ರಂದು ಒಂದೇ ದಿನ ಬೆಳಗ್ಗೆಯಿಂದ ರಾತ್ರಿವರೆಗೆ 6.50 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ನಮ್ಮ ಬಿಎಂಆರ್‌ಸಿಎಲ್ ಸಂಸ್ಥೆಗೆ ಬರೋಬ್ಬರಿ 1.70 ಕೋಟಿ ರೂ. ಆದಾಯ ಬಂದಿದೆ.

ಹೌದು, ನಮ್ಮ ಮೆಟ್ರೋ ಸಾರಿಗೆ ಆರಂಭವಾದ ನಂತರ ಬಹಳಷ್ಟು ಜನರು ಬಸ್‌, ಕಾರು ಹಾಗೂ ಬೈಕ್‌ಗಳನ್ನು ಬದಿಗಿಟ್ಟು ಟ್ರಾಫಿಕ್‌ ಮುಕ್ತವಾಗಿ Bangalore Metro Rail Corporation Limited (BMRCL) ಸಂಸ್ಥೆಯ ಮೆಟ್ರೋದಲ್ಲಿ ಸಂಚಾರ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಮೆಟ್ರೋ ಸಂಸ್ಥೆ ಆರಂಭವಾಗಿ 11ನೇ ವರ್ಷಕ್ಕೆ ಕಾಲಿಟ್ಟಿದ್ದು, ಈವರೆಗೆ ೫೬ ಕಿ.ಮೀ ಮಾರ್ಗದಲ್ಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಆದರೆ, ಕೋವಿಡ್‌ ಸಂದರ್ಭದಲ್ಲಿ ಎರಡು ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿತ್ತು. ಕೋವಿಡ್‌ ಇಳಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದ ನಂತರ ಪ್ರಯಾಣಿಕರ ಸಂಚಾರ ಹೆಚ್ಚಳವಾಗಿದ್ದು, ಲಾಭದ ಹಾದಿಗೆ ಮರಳಿತ್ತು. ಈಗ ಡಿ.೩೧ರ ದಿನದಂದು ಈ ಹಿಂದಿನ ಎಲ್ಲ ದಾಖಲೆಗಳಿಗಿಂತ ಹೆಚ್ಚಿನ ಜನರು ಸಂಚಾರ ಮಾಡಿದ್ದು, ಲಾಭದ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡಿದೆ.

ಹೊಸ ವರ್ಷಚಾರಣೆ ಪ್ರಯುಕ್ತ ನಮ್ಮ ಮೆಟ್ರೋ ಅವಧಿ ವಿಸ್ತರಣೆ, ಮುಂಜಾವು 2 ಗಂಟೆಯವರೆಗೆ ಸೇವೆ ಲಭ್ಯ

ನ್ಯೂ ಇಯರ್ ಸಂಭ್ರಮದಲ್ಲಿ ಮೆಟ್ರೋಗೆ ಆದಾಯ: ಡಿಸೆಂಬರ್ 31 ರಂದು ಒಂದೇ ದಿನ ದಾಖಲೆ ಬರೆದ ಮೆಟ್ರೋ ರೈಡರ್ ಶಿಪ್ ಹಾಗೂ ಮೆಟ್ರೋ ಆದಾಯ ಹೆಚ್ಚಳವಾಗಿದೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಹೆಚ್ಚಿನ ಆದಾಯ ಹಾಗೂ ಪ್ರಯಾಣಿಕರು ಸಂಚಾರ ಮಾಡಿದ ದಾಖಲೆ ನಿರ್ಮಾಣವಾಗಿದೆ. ಡಿ.31 ರಂದು ಮೆಟ್ರೋದಲ್ಲಿ 6. 50 ಲಕ್ಷ ಪ್ರಯಾಣಿಕರ ಸಂಚಾರ ಮಾಡಿದ್ದಾರೆ. ಈ ಪ್ರಯಾಣಿಕರ ಸಂಚಾರದಿಂದ ಒಂದೇ ದಿನದಲ್ಲಿ ಬರೀಬ್ಬರಿ 1.70 ಕೋಟಿ ರೂ. ಆದಾಯ ಗಳಿಸಿದೆ.

ತಡರಾತ್ರಿವರೆಗೂ ಮೆಟ್ರೋ ಸಂಚಾರ: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಮಧ್ಯ ರಾತ್ರಿ 2 ಗಂಟೆಯವರೆಗೂ ಮೆಟ್ರೋ ಪ್ರಯಾಣದ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಎಂ.ಜಿ. ರಸ್ತೆ, ಕಬ್ಬನ್ ಪಾರ್ಕ್ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಬಳಕೆ ಮಾಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಕಾರಣ ನಿಗಮದ ಸಿಬ್ಬಂದಿ ಜೊತೆಗೆ 100 ಕ್ಕೂ ಹೆಚ್ಚು ಹೋಂ ಗಾರ್ಡ್ ಗಳನ್ನ ನಿಯೋಜನೆ ಮಾಡುವ ಮೂಲಕ ಭದ್ರತೆ ಒದಗಿಸಲಾಗಿತ್ತು. 2022ರ ಆರಂಭದಲ್ಲಿ 2 ಲಕ್ಷ  ರೈಡರ್ ಶಿಫ್ ಇದ್ದು,  ಡಿಸೆಂಬರ್ ಗೆ 5 ಲಕ್ಷದವರೆಗೂ ಹೆಚ್ಚಿಗೆ ಆಗಿತ್ತು. ಈಗ ಡಿ.31 ರಂದು ಮೊದಲ ಬಾರಿಗೆ ಆರೂವರೆ ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ ಎಂದು ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಮಾಹಿತಿ ನೀಡಿದ್ದಾರೆ.

click me!