ಇಂದು ಬೆಂಗಳೂರಿಗರಿಗೆ ತಟ್ಟಲಿದೆ ಆಟೋ ಮುಷ್ಕರದ ಬಿಸಿ..!

By Girish GoudarFirst Published Dec 29, 2022, 8:33 AM IST
Highlights

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ನಡೆಸಲಿರುವ ಆಟೋ ಚಾಲಕರ ಮುಷ್ಕರ 

ಬೆಂಗಳೂರು(ಡಿ.29):  ಬೆಂಗಳೂರು ಆಟೋ ಚಾಲಕರು ಇಂದು(ಗುರುವಾರ) ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ವಿಧಾನಸೌಧ ಚಲೋ ಹೋರಾಟ ನಡೆಸಲಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಮುಷ್ಕರ ನಡೆಸಲಿದ್ದಾರೆ. 

ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿರುವ ಆಟೋ ಚಾಲಕರು ಬೃಹತ್ ಆಟೋ ರ‍್ಯಾಲಿ ಮೂಲಕ‌ ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ. ಇಂದಿನ ಆಟೋ ಮುಷ್ಕರಕ್ಕೆ 21 ಆಟೋ ಸಂಘಟನೆಗಳು ಬೆಂಬಲ ನೀಡಿವೆ. ರಾಜಧಾನಿಯ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರು ಈಗಾಗಲೇ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. 

Bike Taxi : ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಮಾಲೀಕರು, ಆಟೋ ಚಾಲಕರ ಜಟಾಪಟಿ ಶುರು

ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಆಟೋ ಚಾಲಕರು ಬೀದಿಗೆ ಬೀಳುತ್ತಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ಅನುಮತಿ ಇಲ್ಲದಿದ್ರೂ ರಾಜಾರೋಷವಾಗಿ ಸಂಚಾರ ಮಾಡುತ್ತಿದ್ದರೂ ಆರ್ಟಿಓ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ಮಟ್ಟ ಹಾಕುವಲ್ಲಿ ವಿಫಲರಾಗಿದ್ದಾರೆ ಅಂತ ದೂರಿದ್ದಾರೆ. 

ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಬೈಕ್‌ಗಳಿಗೆ ಅನುಮತಿ ನೀಡಿದೆ. ಮೊದಲ ಹಂತದಲ್ಲಿ 100 ಇ- ಬೈಕ್‌ಗಳನ್ನ ರಸ್ತೆಗಿಳಿಸಲು ಬೌನ್ಸ್ ಕಂಪನಿ ನಿರ್ಧರಿಸಿದೆ. ನಂತರ ಹಂತ ಹಂತವಾಗಿ 1000 ಇ- ಬೈಕ್‌ಗಳನ್ನ ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಕೂಡ ಬೌನ್ಸ್ ಕಂಪನಿ ಬೈಕ್ ಸೇವೆ ನೀಡುತ್ತಿತ್ತು. ಕೊರೋನಾ ಸಮಯದಲ್ಲಿ  ಬೌನ್ಸ್ ಬೈಕ್ ಕಂಪನಿ ಬೈಕ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ- ಬೈಕ್ ಸೇವೆ ನೀಡಲು ಬೌನ್ಸ್ ಬೈಕ್ ಕಂಪನಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದೆ. 

ಆಟೋ ಚಾಲಕರ ಪ್ರಮುಖ ಬೇಡಿಕೆಗಳು

1- ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡಬೇಕು
2- ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ವಾಪಸ್ ಪಡೆಯಬೇಕು
 

click me!