ಮೀಸಲಾತಿ ಆದೇಶ ಹೊರಡಿಸೋವರೆಗೂ ನಾವು ಪಾದಯಾತ್ರೆ ಕೈ ಬಿಡಲ್ಲ| ಅವಶ್ಯಬಿದ್ರೆ ನಾವು ಅಮಿತ್ ಶಾ ಅಲ್ಲ ಮೋದಿಗೂ ಭೇಟಿಯಾಗುತ್ತೇವೆ:ವಿಜಯಾನಂದ ಕಾಶಪ್ಪನವರ|
ಕೊಪ್ಪಳ(ಜ.17): ನಮ್ಮದು ಶಾಂತಿಯುತ ಪ್ರತಿಭಟನೆಯಾಗಿದೆ. ಇದು ಹೀಗೆ ಮುಂದುವರೆದರೆ ಕ್ರಾಂತಿಯಾಗತ್ತದೆ. ನಾವು ಈಗಾಗಲೇ 90 ಕಿಮೀ ಪಾದಯಾತ್ರೆಯನ್ನ ಪೂರೈಸಿದ್ದೇವೆ. ಸರ್ಕಾರ ಇದೇ ರೀತಿ ಬಿಟ್ರೆ ಪಾದಯಾತ್ರೆ ಕ್ರಾಂತಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಿಎಂ ಯಡಿಯೂರಪ್ಪನವರು ವಚನಭ್ರಷ್ಟ ಆಗ್ತಾರೆ ಅನ್ನೋ ಅನುಮಾನ ಇದೆ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಪಂಚಮಸಾಲಿ ಸಮಯದಾಯಕ್ಕೆ 2 ಎ ಮೀಸಲಾತಿಗಾಗಿ ಆಗ್ರಹಿಸಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಆದೇಶ ಹೊರಡಿಸೋವರೆಗೂ ನಾವು ಪಾದಯಾತ್ರೆ ಕೈ ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
undefined
ಬಿಜೆಪಿ ಸರ್ಕಾರ ರಚನೆಗೆ ಪಂಚಮಸಾಲಿ ಮಠಾಧೀಶರ ಪಾತ್ರ ದೊಡ್ಡದು: ಜಯಮೃತ್ಯುಂಜಯ ಶ್ರೀ
ನೂತನ ಸಚಿವ ಮುರುಗೇಶ್ ನಿರಾಣಿ ತಪ್ಪು ಸಂದೇಶ ಕೊಡುತ್ತಿದ್ದಾರೆ. ಸಿಎಂ ಯಡಿಯೂರಪ್ಪನವರ ಮನವೊಲಿಸುವ ತಪ್ಪು ಸಂದೇಶ ಕೊಡಬೇಡಿ. ನಾವು ಇವತ್ತು ಅಮಿತ್ ಶಾ ಕಾರ್ಯಕ್ರಮಕ್ಕೆ ಘೇರಾವ್ ಹಾಕಬೇಕು ಅಂತ ಅಂದುಕೊಂಡಿದ್ದೇವು. ಆದ್ರೆ ಅದು ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ನಾವು ಗೌರವಯುತವಾಗಿ ಅಲ್ಲಿಗೆ ಹೋಗಿಲ್ಲ. ಸಚಿವ ಸಿ.ಸಿ.ಪಾಟೀಲ್, ಸಂಸದ ಸಂಗಣ್ಣ ಕರಡಿ ಹೋಗಿದ್ದಾರೆ. ಅವರು ಚರ್ಚೆ ಮಾಡುವ ಭರವಸೆ ಇದೆ. ಅವಶ್ಯಬಿದ್ರೆ ನಾವು ಅಮಿತ್ ಶಾ ಅಲ್ಲ ಮೋದಿಗೂ ಭೇಟಿಯಾಗುತ್ತೇವೆ ಎಂದ ಕಾಶಪ್ಪನವರ ತಿಳಿಸಿದ್ದಾರೆ.