ಪ್ರಕೃತಿಯ ಅಂದ ಹೆಚ್ಚಿಸೋ ಆಕರ್ಷಕ ಅಣಬೆಗಳು

By divya perla  |  First Published Jul 14, 2019, 1:28 PM IST

ಮೊದಲ ಮಳೆಯ ಕುರುಹು ಎಂಬಂತೆ ಮಂಜಿನ ನಗರಿ ಮಡಿಕೇರಿಯಲ್ಲಿ ವಿವಿಧ ಬಗೆಯ, ಬಣ್ಣಗಳ ಅಣಬೆಗಳು ಹುಟ್ಟಿಕೊಂಡಿವೆ. ಆಕರ್ಷಕ ಬಣ್ಣಗಳಿಂದ ಕಂಗೊಳಿಸ್ತಿರೋ ಅಣಬೆಗಳು ಪ್ರಕೃತಿಯ ಸೌಂದರ್ಯ ಹೆಚ್ಚಿಸಿದೆ.


ಮಡಿಕೇರಿ (ಜು.14): ಮಳೆಗಾಲದಲ್ಲಿ ಮೊದಲ ಮಳೆಯಿಂದ ನೆಲ ತೇವಗೊಂಡಾಗ ಅಲ್ಲಲ್ಲಿ ಹುಟ್ಟಿಕೊಳ್ಳುವ ವಿವಿಧ ಆಕಾರದ ಅಣಬೆಗಳು ಮನಸೂರೆಗೊಳ್ಳುತ್ತಿವೆ. ಆಕರ್ಷಕ ಬಣ್ಣಗಳಿಂದ ತುಂಬಿಕೊಂಡಿದ್ದು ಪ್ರಕೃತಿಯ ಸೌಂದರ್ಯವೂ ಇನ್ನಷ್ಟು ಹೆಚ್ಚಿದೆ.

ಮಳೆಗಾಲದಲ್ಲಿ ಅರಳುವ ನಾನಾ ನಮೂನೆಯ ಅಣಬೆಗಳು ಪ್ರಕೃತಿಯನ್ನು ಮತ್ತಷ್ಟು ಆಕರ್ಷಣೀಯವಾಗಿಸುತ್ತವೆ. ಮಳೆಗಾಲ ಆರಂಭವಾಗುವ ಮುನ್ನ ತೇವಭರಿತ ನೆಲದಿಂದ ಅಪರೂಪದ ಅಣಬೆಗಳು ಮೂಡಿದರೆ ಮಳೆಗಾಲದಲ್ಲಿ ಕಾಡುಗಳಲ್ಲಿ ಓಡಾಡಿದವರಿಗೆಲ್ಲ ಮತ್ತಷ್ಟು ಚಿತ್ರ ವಿಚಿತ್ರ ಅಣಬೆಗಳು ಕಾಣಸಿಗುತ್ತವೆ.

Tap to resize

Latest Videos

ತೇವಭರಿತ ಮಣ್ಣಿನಲ್ಲಿ ಅಣಬೆಗಳ ಜನನ:

ದಟ್ಟ ಹಸಿರಿನ ಗಿಡಮರಗಳ ನಡುವೆ, ಒಣಗಿದ ಮರಗಳ ಕಾಂಡಗಳ ಮೇಲೆ ಬಿಳಿ, ಹಳದಿ, ಕಂದು ಬಣ್ಣದ ಅಣಬೆಗಳು ಅರಳಿ ನಿಲ್ಲತ್ತವೆ. ಮಳೆಗಾಲದ ಆರಂಭದಲ್ಲಿ ಕಾಣಸಿಗುವ ಅಣಬೆಗಳ ಸೌಂದರ್ಯವನ್ನು ಆಗಲೇ ಸವಿಯಬೇಕು. ಮಳೆಗಾಲದಲ್ಲಿ ಮೂಡುವ ಅಣಬೆಗಳಿಗೆ ಹಲವು ಬಣ್ಣ, ಆಕಾರ ಹಾಗೂ ರೂಪಗಳಿವೆ. ತೇವದ ಮಣ್ಣಿನಲ್ಲಿ ಅಲ್ಲಲ್ಲಿ ಅಪರೂಪದ ಅಣಬೆಗಳು ಕಾಣ ಸಿಗುತ್ತವೆ. ಕೆಲವು ತರಕಾರಿಯಾಗಿ ಬಳಕೆಯಾದರೆ ಮತ್ತೆ ಕೆಲವು ನೋಟಕ್ಕಷ್ಟೇ ಚೆನ್ನ.

ಕಾಫಿಯ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕುತ್ತಾರೆ. ತೇವದ ಮಣ್ಣಿನಲ್ಲಿ ಮರಗಳ ಬುಡದಲ್ಲಿ ಹೂವಿನ ಮೊಗ್ಗುಗಳಂತೆ ಹುಟ್ಟಿಕೊಳ್ಳುವ ಅಣಬೆಗಳನ್ನು ಕಂಡರೆ ಸಾಕು ಕಿತ್ತೊಯ್ಯುತ್ತಾರೆ. ಹಾಗೆಂದು ಎಲ್ಲ ಅಣಬೆಗಳನ್ನು ತಿನ್ನಲಾಗುವುದಿಲ್ಲ.

ಅಣಬೆಯ ಹಣೆಬರಹ ತಿಳಿದುಕೊಳ್ಳುವುದು ಹೇಗೆ?

ಬಹುತೇಕ ಅಣಬೆಗಳು ನೋಡಲಷ್ಟೇ ಸುಂದರ. ಅಣಬೆಗಳ ಜೀವನ ಶೈಲಿಯೇ ವಿಶಿಷ್ಟ. ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ. ಬಗೆಬಗೆಯ ಆಕಾರ, ಗಾತ್ರ. ಈ ಅಣಬೆಗಳು ಹೆಚ್ಚಾಗಿ ಮರಗಳ ಕಾಂಡಗಳ ಮೇಲೆ, ಸೆಗಣಿಯ ಮೇಲೆ, ಕೊಳೆತ ಎಲೆಗಳ ಮೇಲೆ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತವೆ.   

 

click me!