ಉತ್ತರಕನ್ನಡ: ಅಟ್ಟಣಿಗೆ ಯಕ್ಷಗಾನ, 8 ವೇದಿಕೆಗಳಲ್ಲಿ ನಡೆದ "ಜಲಂಧರ ಕಾಳಗ" ಪ್ರಸಂಗ

By Girish Goudar  |  First Published Jan 7, 2024, 8:07 PM IST

ರಾಷ್ಟ್ರೀಯ ಹೆದ್ದಾರಿ 66ರ ಬಳಿ ಪೋಸ್ಟ್ ಚೆಂಡಿಯಾ ಗಾಂವಕರ್‌ವಾಡ ರಸ್ತೆಯಿಂದ ಸುಮಾರು 1.5 ಕಿಮೀ ಒಳಗೆ ಕೊನೆಯ ಗ್ರಾಮ ಒಕ್ಕಲಕೇರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಕೃಷ್ಣ ದೇವರ ಮೂರ್ತಿಯ ಮಹಾಪೂಜೆಯ ಅಂಗವಾಗಿ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಯಕ್ಷಗಾನ ಪ್ರದರ್ಶನ ನಡೆಯಿತು. 


ಉತ್ತರಕನ್ನಡ(ಜ.07): ಏಕಕಾಲದಲ್ಲಿ ಎಂಟು ವೇದಿಕೆಗಳಲ್ಲಿ "ಜಲಂಧರ ಕಾಳಗ" ಯಕ್ಷಗಾನ ಪ್ರದರ್ಶನ ನಡೆಯಿತು. ಸಾಮಾನ್ಯವಾಗಿ ಎರಡು, ಮೂರು, ವೇದಿಕೆಗಳನ್ನು ಮಾಡಿ ಏಕ ಕಾಲದಲ್ಲಿ ಯಕ್ಷಗಾನ ಪ್ರದರ್ಶಿಸುವ `ಅಟ್ಟಣಿಗೆ ಯಕ್ಷಗಾನ' ರೂಢಿಯಲ್ಲಿದೆ. ಆದರೆ, ಚೆಂಡಿಯಾದ ಶೇಡಿಹೊಂಡ, ಒಕ್ಕಲಕೇರಿ ಗ್ರಾಮಸ್ಥರು ಸೇರಿ ಈ ಭಾಗದಲ್ಲಿ ಮೊದಲ ಬಾರಿಗೆ ಎರಡು ಅಂತಸ್ತಿನಲ್ಲಿ 8 ವೇದಿಕೆ ನಿರ್ಮಿಸಿ ಅಪರೂಪದ ಯಕ್ಷಗಾನ ನಡೆಸಲಾಗಿದೆ. 

ರಾಷ್ಟ್ರೀಯ ಹೆದ್ದಾರಿ 66ರ ಬಳಿ ಪೋಸ್ಟ್ ಚೆಂಡಿಯಾ ಗಾಂವಕರ್‌ವಾಡ ರಸ್ತೆಯಿಂದ ಸುಮಾರು 1.5 ಕಿಮೀ ಒಳಗೆ ಕೊನೆಯ ಗ್ರಾಮ ಒಕ್ಕಲಕೇರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಕೃಷ್ಣ ದೇವರ ಮೂರ್ತಿಯ ಮಹಾಪೂಜೆಯ ಅಂಗವಾಗಿ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಯಕ್ಷಗಾನ ಪ್ರದರ್ಶನ ನಡೆಯಿತು. 

Tap to resize

Latest Videos

undefined

ಚುಡಾಯಿಸಿ ಆಪತ್ತು ತಂದುಕೊಂಡ ವಿದ್ಯಾರ್ಥಿಗಳು, ಹಾಸ್ಟೆಲ್‌ ಗೆ ನುಗ್ಗಿ ಹೊಡೆದ ಕುಡುಕರ ಗ್ಯಾಂಗ್‌!

ಒಕ್ಕಲಕೇರಿ (ಕೋಡಾರ) ಗುಡೇದೇವ ಬಾಲ ಭಕ್ತ ಮಂಡಳಿಯ ಸದಸ್ಯರು ಸೇರಿ ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಎರಡು ಅಂತಸ್ಸಿನಲ್ಲಿ ಕಬ್ಬಿಣದ ಸರಳು, ಬಿದಿರಿನ ಗಳನ್ನು ಬಳಸಿ ಅಟ್ಟಣಿಗೆಗಳನ್ನು ಸಿದ್ಧ ಮಾಡಿದ್ದರು. ಈ ವೇದಿಕೆಗೆ ಅಭಿಮುಖವಾಗಿ ಭಾಗವತರು, ಚೆಂಡೆಯವರಿಗಾಗಿ ಪ್ರತ್ಯೇಕವಾಗಿ ಅಟ್ಟಣಿಗೆ ಸಿದ್ಧ ಮಾಡಲಾಗಿತ್ತು. ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುವ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಹಣ ಜೋಡಿಸಿ, ರಾತ್ರಿ ವೇಳೆ ಯಕ್ಷಗಾನ ಕಲಿತು, ಸ್ವತಃ ವೇದಿಕೆ ಕಟ್ಟಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಸ್ಥಳೀಯ ಯಕ್ಷಗಾನ ಕಲಾವಿದ ಸುರೇಶ ಗೌಡ ಯುವಕರಿಗೆ ಯಕ್ಷ ಹೆಜ್ಜೆಗಳನ್ನು ಹೇಳಿಕೊಟ್ಟು, ಮಾರ್ಗದರ್ಶನ ಮಾಡಿದ್ದು, ದೇವಲೋಕ, ವೈಕುಂಠ, ಕೈಲಾಸ, ಬ್ರಹ್ಮ ಲೋಕ, ವರುಣ ಲೋಕ ಹೀಗೆ ಪ್ರತಿ ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರು ಒಂದೊಂದು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ‌. ಯಕ್ಷಗಾನದಲ್ಲಿ ಪ್ರಮುಖ ಪಾತ್ರಧಾರಿಯಾದ ಜಲಂಧರನಾಗಿ ವಿಶ್ವ ಎಸ್.ಗೌಡ, ಆತನ ಪತ್ನಿ ವೃಂದೆಯಾಗಿ ಶಿವಾನಂದ ಗೌಡ ಪಾತ್ರ ನಿರ್ವಹಿಸಿದ್ದಾರೆ.15 ಸ್ಥಳೀಯ ಕಲಾವಿದರು ಕೂಡಾ ಚೆಂಡೆಯ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.

click me!