ಕೊಡಗಿನ ಕುಂದಬೆಟ್ಟದ ತಪ್ಪಲಿನಲ್ಲಿ ಪಾಂಡವರ ಕಾಲದ ಪುರಾತನ ಶಿವಲಿಂಗ ಪತ್ತೆ!

By Govindaraj SFirst Published Jan 7, 2024, 6:29 PM IST
Highlights

ಪಾಂಡವರ ಕಾಲದ್ದು ಎನ್ನಲಾದ 4 ಅಡಿ ಎತ್ತರದ ಬೃಹತ್ ಗಾತ್ರದ ಶಿವಲಿಂಗವೊಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಂದ ಗ್ರಾಮದಲ್ಲಿ ದೊರೆತ್ತಿದೆ. ಇಲ್ಲಿನ ಕಿಲನ್ ಗಣಪತಿ ಎಂಬುವರ ದೋಟದಲ್ಲಿ ಪುರಾತನ ಲಿಂಗ ಮತ್ತು ಇತರೆ ವಸ್ತುಗಳು ದೊರೆತ್ತಿರುವುದು ಗ್ರಾಮದವರಲ್ಲಿ ಅಚ್ಚರಿ ಮೂಡಿಸಿದೆ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.07): ಪಾಂಡವರ ಕಾಲದ್ದು ಎನ್ನಲಾದ 4 ಅಡಿ ಎತ್ತರದ ಬೃಹತ್ ಗಾತ್ರದ ಶಿವಲಿಂಗವೊಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಂದ ಗ್ರಾಮದಲ್ಲಿ ದೊರೆತ್ತಿದೆ. ಇಲ್ಲಿನ ಕಿಲನ್ ಗಣಪತಿ ಎಂಬುವರ ದೋಟದಲ್ಲಿ ಪುರಾತನ ಲಿಂಗ ಮತ್ತು ಇತರೆ ವಸ್ತುಗಳು ದೊರೆತ್ತಿರುವುದು ಗ್ರಾಮದವರಲ್ಲಿ ಅಚ್ಚರಿ ಮೂಡಿಸಿದೆ. ಕೆಲವು ದಿನಗಳ ಹಿಂದೆ ಕಲ್ಯಾಟಂಡ ಅಜ್ಜಪ್ಪನವರು, ದರ್ಶನ್ ನಂಜಪ್ಪ ಅವರ ತೋಟದಲ್ಲಿ ಭೂಮಿಯೊಳಗೆ ಶಿವಲಿಂಗವಿದೆ ಎಂದು ಹೇಳಿದ್ದರಂತೆ. ಅವರ ಮಾತಿನಂತೆ ತೋಟದೊಳಗೆ ಮರವೊಂದರ ಸುತ್ತ ಕಟ್ಟೆಯಂತಿರುವ ಜಾಗವನ್ನು ಹಗೆಸಿದ್ದಾರೆ. 

ಆದರೆ ಏನೂ ದೊರೆತ್ತಿಲ್ಲ. ಆದರೆ ಬೃಹತ್ ಮರವನ್ನು ಜೆಸಿಬಿ ಬಳಸಿ ಬುಡ ಸಮೇತ ಹಗೆಸಿದಾಗ ಮರದ ಬುಡದ ಆಳದಲ್ಲಿ ಬೃಹತ್ ಶಿವಲಿಂಗ ಪತ್ತೆಯಾಗಿದೆ. ಸುಮಾರು 800 ವರ್ಷಗಳ ಇತಿಹಾಸವುಳ್ಳ ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಈ ಶಿವಲಿಂಗ ದೊರೆತ್ತಿರುವುದು ಕುಟುಂಬದವರು ಸಂತೋಷಗೊಳ್ಳುವಂತೆ ಮಾಡಿದೆ. ಶಿವಲಿಂಗ ಅಪಾರ ಶಕ್ತಿಯನ್ನು ಹೊಂದಿದೆ ಎಂದು  ಹಿರಿಯ ಅರ್ಚಕ ಹಾಗೂ ಗುಮ್ಮಟ್ಟಿರ ಕುಟುಂಬದ ಹಿರಿಯರು ಅಭಿಪ್ರಾಯಿಸಿದ್ದಾರೆ. ಶಿವಲಿಂಗದ ಜೊತೆಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆಗಳು, ಸೋಮಸೂತ್ರ ಹಾಗೂ ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತ್ತಿವೆ. 

ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ ಈ ಶಿವಲಿಂಗ ಪತ್ತೆಯಾಗಿರುವುದು ಹಲವು ಚಿಂತನೆಗಳಿಗೆ ಎಡೆಮಾಡಿಕೊಟ್ಟಿದೆ. ಪಾಂಡವರು ಈ ಭಾಗದಲ್ಲಿ ಸಂಚರಿಸುತ್ತಿದ್ದ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಿರಬಹುದು ಎಂದು ಶಿಲ್ಪಿ ಶಿವಕುಮಾರ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ದರ್ಶನ ನಂಜಪ್ಪ ಮರದ ಬುಡದ ಆಳದಲ್ಲಿ ದೊರೆತ್ತಿರುವ ಶಿವಲಿಂಗ, ಪಾಣಿಪೀಠ ಸೇರಿದಂತೆ ಇತರೆ ವಸ್ತುಗಳನ್ನು ಸದ್ಯ ಒಂದೆಡೆ ರಕ್ಷಿಸಿ ಇಟ್ಟಿದ್ದೇವೆ. ಶಿವಲಿಂಗದ ಒಂದು ಭಾಗಕ್ಕೆ ಹಿಂದೆಯೇ ಹಾನಿಯಾಗಿದೆ. 

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಡಿ ಪಂಕ್ಚರ್ ಆಗಿದೆ: ವಿಜಯೇಂದ್ರ ಲೇವಡಿ

ಹಿಂದಿನ ಕಾಲದಲ್ಲಿ ಬಿಳಿ ಕಲ್ಲಿನಿಂದ ಹಾಗೂ ಕಾಡುಕಲ್ಲುಗಳಿಂದ ಶಿವಲಿಂಗ ಮಾಡುತ್ತಿದ್ದರು. ಅದೇ ಕಲ್ಲುಗಳನ್ನು ಬಳಸಿ ಶಿವಲಿಂಗ ಮಾಡಿರುವುದು ಗೊತ್ತಾಗುತ್ತದೆ ಎಂದಿದ್ದಾರೆ. ಕೊಡಗು ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭದಲ್ಲಿ ಅದನ್ನು ಲಿಂಗಾಯಿತ ರಾಜರು ಕೊಡಗನ್ನು ಆಳ್ವಿಕೆ ಮಾಡುತ್ತಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಏನಾದರೂ ಇದ್ದ ದೇವಾಲಯ ಶಿವಲಿಂಗವೇನಾದರೂ ಇರಬಹುದೇ ಎನ್ನುವ ಅನೀವುಮಾನಗಳು ಇವೆ. ಇದನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ.

click me!