Chikkamagaluru: ಅಸ್ಸಾಂ ವಲಸಿಗರಿಂದ ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ

By Suvarna News  |  First Published Dec 18, 2022, 7:30 PM IST

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್ನಲ್ಲಿ  ಅಸ್ಸಾಂ ಕಾರ್ಮಿಕರು ಅಡ್ವಾನ್ಸ್ ತೆಗೆದುಕೊಂಡಿದ್ದಾರೆ. ಆದರೂ ಕೆಲಸ ಮಾಡ್ತಿಲ್ಲ ಅಂತ ಪ್ರಶ್ನಿಸಿದ್ದಕ್ಕೆ ಮಚ್ಚು-ದೊಣ್ಣೆಯಿಂದ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ತೋಟದ ಮಾಲೀಕ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.18): ಕಾಫಿನಾಡು ಚಿಕ್ಕಮಗಳೂರಲ್ಲಿ ಹತ್ರತ್ರ ಲಕ್ಷಕ್ಕೂ ಅಧಿಕ ಹೆಕ್ಟೇರ್ನಲ್ಲಿ ಕಾಫಿ ಬೆಳೆದಿದ್ದಾರೆ. ಕಾಫಿ ಕೆಲ್ಸಕ್ಕೆ ವರ್ಷಪೂರ್ತಿ ಜನಬೇಕು. ಸ್ಥಳಿಯ ಕೆಲಸಗಾರರದ್ದು ಟೈಮಿಂಗ್ಸ್. ಕೂಲಿಯೂ ಹೆಚ್ಚು. ಹಾಗಾಗಿ, ದೊಡ್ಡ-ದೊಡ್ಡ ಪ್ಲಾಂಟರ್ಗಳು ಹೊರರಾಜ್ಯದ ಕೆಲಸಗಾರರನ್ನೇ ಆಶ್ರಯಿಸಿದ್ದಾರೆ. ಲೈನ್ ಮನೆ ಕೊಟ್ರೆ ಸಾಕು. ಕೂಲಿಯೂ ಕಡಿಮೆ. ಜನರೂ ಸಿಗ್ತಾರೆ. ಇಡೀ ದಿನ ಕೆಲ್ಸ ಮಾಡ್ತಾರೆ. ಹಾಗಾಗಿ, ಅಸ್ಸಾಂನವರನ್ನ ಕರ್ಕೊಂಡ್ ಬಂದ ಇಟ್ಕೊಂಡಿದ್ದಾರೆ. ಆದ್ರೆ, ಅವ್ರನ್ನ ಅಸ್ಸಾಂನವರು ಎಂದು ಯಾರೂ ಒಪ್ಪಲ್ಲ. ನಂಬಲ್ಲ. ಅವ್ರು ಅಕ್ರಮ ಬಾಂಗ್ಲಾ ವಲಸಿಗರು ಎಂದೇ ಹೇಳಲಾಗ್ತಿದೆ. ಕೆಲ ವೇಳೆ ಸಾಕಷ್ಟು ಜನ ಸಿಕ್ಕಿಬಿದ್ದಿದ್ದಾರೆ ಕೂಡ. ಆದ್ರೆ ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್ನಲ್ಲಿ ಕಾರ್ಮಿಕರೇ ತೋಟದ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

Tap to resize

Latest Videos

ಮಚ್ಚು, ದೊಣ್ಣೆಗಳಿಂದ ಹಲ್ಲೆ ಯತ್ನಿಸಿದ ಅಸ್ಸಾಂ ಕಾರ್ಮಿಕರು:
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್ನಲ್ಲಿ  ಅಸ್ಸಾಂ ಕಾರ್ಮಿಕರು ಅಡ್ವಾನ್ಸ್ ತೆಗೆದುಕೊಂಡಿದ್ದಾರೆ. ಆದರೂ ಕೆಲಸ ಮಾಡ್ತಿಲ್ಲ ಅಂತ ಪ್ರಶ್ನಿಸಿದ್ದಕ್ಕೆ ಮಚ್ಚು-ದೊಣ್ಣೆಯಿಂದ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ತೋಟದ ಮಾಲೀಕ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಆದರೆ, ಅಸ್ಸಾಂನವರು ಎಂದು ಹೇಳಿಕೊಂಡು ಕಾಫಿತೋಟದಲ್ಲಿ ಕೆಲಸ ಮಾಡುತ್ತಿರುವವರು ನೂರಕ್ಕೆ ಸಾವಿರ ಪರ್ಸೆಂಟ್ ಅಸ್ಸಾಂನವರು ಎಂದು ಯಾರೂ ಒಪ್ಪಲ್ಲ. ಹಾಗಾಗಿ, ಕಾಫಿತೋಟದ ಮಾಲೀಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹಲ್ಲೆಗೊಳಗಾದ ತೋಟದ ಮಹಮದ್ ಅಜ್ಗರ್ ತೋಟದ ಮಾಲೀಕರಲ್ಲಿ ಮನವಿ ಮಾಡಿದ್ದಾರೆ.

Chikkamagaluru: ಸರಕಾರಿ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿ

ಸೂಕ್ತ ಕ್ರಮಕ್ಕೆ ಮಾಲೀಕರ  ಒತ್ತಾಯ: ಕಾಫಿತೋಟದ ಕೆಲಸಕ್ಕೆ ಉತ್ತರ ಕರ್ನಾಟಕ-ಉತ್ತರ ಭಾರತದದಿಂದಲೂ ಕಾರ್ಮಿಕರು ಬರುತ್ತಾರೆ. ಬಂದವರು ಅಡ್ವಾನ್ಸ್ ಪಡೆದು, ಕೆಲಸ ಮುಗಿಸಿಕೊಂಡು ಹೋಗುತ್ತಾರೆ. ಮತ್ತೆ ಬರುತ್ತಾರೆ. ಅದು ಕಾರ್ಮಿಕರು-ಮಾಲೀಕರ ನಂಬಿಕೆ-ಸಂಬಂಧದದ್ದು. ಆದರೆ, ಅಸ್ಸಾಂ ಎಂದು ಹೇಳಿಕೊಂಡು ಬರುವವರು ಒಂದು ತೋಟದಲ್ಲಿ ಕೆಲಸ ಮಾಡುತ್ತೇವೆಂದು ಮುಂಗಡ ಹಣ ಪಡೆದು ತಿಂಗಳು ಕೆಲಸ ಮಾಡಿ, ಮತ್ತೊಂದು ತೋಟಕ್ಕೆ ಹೋಗಿ ಅಲ್ಲೂ ಹಣ ಪಡೆದು ಎಲ್ಲೂ ಕೆಲಸ ಮಾಡದೆ ನಾಟಕ ಕಳ್ಬೀಳುವ ಸನ್ನಿವೇಶ-ಸಂದರ್ಭಗಳು ಇವೆ. ಈಗ ಆಗಿರೋದು ಅದೆ. ಹಾಗಾಗಿ, ಮಾಲೀಕರು ಎಚ್ಚೆತ್ತು ಕೊಳ್ಳಬೇಕಾಗಿದೆ. ಇಲ್ಲವಾದ್ರೆ, ನಮ್ಮ ಹಣ ಕೊಟ್ಟು ನಾವೇ ಒದೆ ತಿನ್ನೋ ಅಂತ ಪರಿಸ್ಥಿತಿ ಬರೋದು ಗ್ಯಾರಂಟಿ. ಪೊಲೀಸರು ಕೂಡ ಅಸ್ಸಾಂನವರು ಎಂದು ಬರುವ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಕಣ್ಣಿಡಬೇಕು, ಜೊತೆಗೆ, ತೋಟದ ಮಾಲೀಕರು ಕೂಡ ಒಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Chikkamagalauru: ದತ್ತಜಯಂತಿ ವೇಳೆ ಕೋಮು ಗಲಭೆ ಸೃಷ್ಟಿಸಲು ನಡೆದಿತ್ತು ಮಹಾಸಂಚು

ಇಲ್ಲವಾದರೆ, ನಾಳೆ ಈ ಪರಿಸ್ಥಿತಿ ಎಲ್ಲರಿಗೂ ಬರಬಹುದು. ಅಯ್ಯೋ ದೇವ್ರೇ ಇಂದೆಂಥಾ ಕರ್ಮ ಅಲ್ವಾ. ನಮ್ಮ ತೋಟದಲ್ಲಿ ನಮ್ಮದೇ ಮನೆಗಳನ್ನ ಉಚಿತವಾಗಿ ನೀಡಿ. ಕೆಲಸ ಕೊಟ್ಟು. ಊಟ ನೀಡಿ. ಆರೋಗ್ಯ ನೋಡ್ಕಂಡ್. ಅವ್ರ ಮಕ್ಕಳನ್ನ ಪ್ರೀತಿಸಿ. ನಮ್ಮ ದುಡ್ ಕೊಟ್ಟು ಕೊನೆಗೆ ಅವರಿಂದ ನಾವೇ ಒದೆ ತಿನ್ನೋದು ಅಂದ್ರೆ ನಾವಿನ್ನೆಂಥ ಪಾಪಿಗಳು ಅನ್ನೋ ಪ್ರಶ್ನೆ ಮೂಡುತ್ತೆ. ಕಾಫಿತೋಟದ ಮಾಲೀಕರು, ಪೊಲೀಸರು ಈಗಲೇ ಒಂದು ಸೂಕ್ತ ನಿರ್ಣಯ-ತೀರ್ಮಾನ ಮಾಡಬೇಕಿದೆ. ಇಲ್ಲವಾದರೆ, ಈಗಾಗಲೇ ಕೊಲೆ-ದರೋಡೆಯ ಒಂದೆರಡು ಪ್ರಕರಣಗಳಿವೆ. ಮುಂದೆ ಹೆಚ್ಚಾದ್ರೂ ಆಗಬಹುದು ಕಾಫಿತೋಟದ ಮಾಲೀಕರೇ ಎಚ್ಚರ ಎಚ್ಚರ.

click me!