Gambling in Chamarajnagar: ASI ಸೇರಿ ಮೂವರು ನೌಕರರು ಸಸ್ಪೆಂಡ್

Suvarna News   | Asianet News
Published : Dec 25, 2021, 03:26 PM IST
Gambling in Chamarajnagar:    ASI ಸೇರಿ ಮೂವರು ನೌಕರರು ಸಸ್ಪೆಂಡ್

ಸಾರಾಂಶ

ಜೂಜಾಟದಲ್ಲಿ ಸಿಕ್ಕಿ ಬಿದ್ದಿದ್ದ ಎಎಸ್ಐ ಸೇರಿ ಮೂವರು ನೌಕರರು ಸೇವೆಯಿಂದ ಅಮಾನತು ಡಿ 21 ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿ 17 ಮಂದಿ ಬಂಧನ

 ಚಾಮರಾಜನಗರ (ಡಿ.25):  ಜೂಜಾಟದಲ್ಲಿ ಸಿಕ್ಕಿ ಬಿದ್ದಿದ್ದ ಎಎಸ್ಐ (ASI) ಸೇರಿ ಮೂವರು ನೌಕರರು ಸೇವೆಯಿಂದ ಅಮಾನತಾಗಿದ್ದಾರೆ.   ಡಿ 21 ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ  ಜೂಜಾಟವಾಡುತ್ತಿದ್ದ ಪೊಲೀಸರು (Police) ಸೇರಿ 17 ಮಂದಿಯನ್ನು ಬಂಧಿಸಲಾಗಿತ್ತು.  ಚಾಮರಾಜನಗರದ (Chamarajanagar) ಕರಿನಂಜನ ಪುರದಲ್ಲಿ ಜೂಜಾಟ ನಡೆಸಲಾಗಿತ್ತು.

ಇದೀಗ ಘಟನೆಗೆ ಸಂಬಂಧಿಸಿದಂತೆ ಎಎಸ್ಐ (ASI), ಹೆಡ್ ಕಾನ್ಸ್ ಟೇಬಲ್ , ತಹಶೀಲ್ದಾರ್ (Tahasildar) ಚಾಲಕನನ್ನು ಸಸ್ಪೆಂಡ್ ಮಾಡಲಾಗಿದೆ.  ಮೀಸಲು ಪಡೆಯ ಎಎಸ್ಐ (ASI) ಪ್ರದೀಪ್, ಹೆಡ್ ಕಾನ್ಸ್‌ ಟೇಬಲ್ ಮರಿಸ್ವಾಮಿ, ಚಾಮರಾಜನಗರ (Chamarajanagar) ತಹಶೀಲ್ದಾರ್ ಚಾಲಕ ಕಮಲೇಶ್ ಅವರನ್ನು ಅಮಾನತು ಮಾಡಲಾಗಿದೆ.   ಚಾಮರಾಜನಗರ (Chamarajanagar) ಎಸ್ಪಿ ದಿವ್ಯ ಸಾರಾ ಥಾಮಸ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 

ಕಳ್ಳರ ಗ್ಯಾಂಗಿಗೆ ಪೊಲೀಸಪ್ಪನೇ ನಾಯಕ :  ಖಾಕಿ ತೊಟ್ಟು ಕಳ್ಳರ ಹಿಡಿಯಬೇಕಾದ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬ(Police Constable), ಶೋಕಿ ಬದುಕಿನ ಮೋಹಕ್ಕೆ ಸಿಲುಕಿ ಇಬ್ಬರು ಅಪ್ರಾಪ್ತ ಹುಡುಗರನ್ನು ಒಳಗೊಂಡ ಬೈಕ್‌ ಕಳ್ಳರ ತಂಡಕ್ಕೆ ಬಾಸ್‌ ಆದ. ಕಡೆಗೆ ತನ್ನ ಶಿಷ್ಯರು ಬಾರ್‌ನಲ್ಲಿ ಹೇಳಿದ ‘ಸತ್ಯ’ದ ಪರಿಣಾಮ ಇದೀಗ ಜೈಲು(Jail) ಸೇರಿದ್ದಾನೆ.

ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯ ಕಾನ್‌ಸ್ಟೇಬಲ್‌ ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್‌ ರವಿ ಎಂಬಾತನೇ ಬೈಕ್‌ ಕಳ್ಳರ ಗ್ಯಾಂಗ್‌(Gang of Thieves) ಸ್ಟಾರ್‌ ಆಗಿದ್ದು, ಕದ್ದ ಬೈಕ್‌ಗಳ ವಿಲೇವಾರಿಗೆ ಸಹಕರಿಸಿದ ಆರೋಪದ ಮೇರೆಗೆ ರಾಜಸ್ಥಾನ(Rajasthan) ಮೂಲದ ಚಿನ್ನಾಭರಣ ವ್ಯಾಪಾರಿ ರಮೇಶ್‌ ಕೂಡಾ ಜೈಲು ಸೇರುವಂತಾಗಿದೆ. ಈ ಕೃತ್ಯದಲ್ಲಿ ಹೊನ್ನಪ್ಪನ ಸಹಚರರಾದ 17 ವರ್ಷದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಪೊಲೀಸರು(Police) ವಿಚಾರಣೆ ನಡೆಸಿದ್ದಾರೆ.

ಇತ್ತೀಚಿಗೆ ಬಾರ್‌ನಲ್ಲಿ ಮದ್ಯ(Alcohol) ಸೇವಿಸುವಾಗ ಅಪ್ರಾಪ್ತರರು, ತಮ್ಮ ಕಳ್ಳತನಕ್ಕೆ ಪೊಲೀಸ್‌ ಬಾಸ್‌ ಎಂದಿದ್ದರು. ಈ ಮಾತು ಕೇಳಿಸಿಕೊಂಡ ಬಾತ್ಮೀದಾರನೊಬ್ಬ ನೀಡಿದ ಮಾಹಿತಿ ಮೇರೆಗೆ ಆ ಇಬ್ಬರು ಹುಡುಗರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೈಕ್‌ ಕಳ್ಳತನ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದ್ದಾರೆ.

ಹುಡುಗರ ದಾರಿ ತಪ್ಪಿಸಿದ:

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹೊನ್ನಪ್ಪ ದುರದಪ್ಪ ಮಾಳಗಿ, 2016ರಲ್ಲಿ ಕಾನ್‌ಸ್ಟೇಬಲ್‌ ಹುದ್ದೆಗೆ ಆಯ್ಕೆಯಾಗಿದ್ದ. ಆನಂತರ ವಿದ್ಯಾರಣ್ಯಪುರ ಠಾಣೆಗೆ ನೇಮಕಗೊಂಡಿದ್ದ ಆತ, 2019ರಲ್ಲಿ ಓಓಡಿ ಮೇರೆಗೆ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದ. ವಿದ್ಯಾರಣ್ಯಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಒಂದೂವರೆ ವರ್ಷದ ಹಿಂದೆ ಬೈಕ್‌ ಸರ್ವೀಸ್‌ ಸ್ಟೇಷನ್‌ನಲ್ಲಿ ಆತನಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಹುಡುಗರ ಪರಿಚಯವಾಗಿದೆ. ಆಗ ಆ ಹುಡುಗರಿಗೆ ‘ನೀವೇಷ್ಟುಸವೀರ್‍ಸ್‌ ಸ್ಟೇಷನ್‌ನಲ್ಲಿ ದುಡಿಯುತ್ತೀರಿ. ನಾನು ಹೇಳಿದಂತೆ ಮಾಡಿದರೆ ನಿಮಗೆ ಕೈ ತುಂಬ ಹಣ ಸಿಗುತ್ತೆ’ ಎಂದು ಉಪದೇಶ ಮಾಡಿದ್ದ. ಈ ಮಾತು ಒಪ್ಪಿದ ಬಾಲಕರಿಗೆ ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುವ ಬೈಕ್‌ಗಳನ್ನು ಕಳವು ಮಾಡುವಂತೆ ಕಾನ್‌ಸ್ಟೇಬಲ್‌ ಹೊನ್ನಪ್ಪ ಸೂಚಿಸಿದ್ದ.

ಬಳಿಕ ಕದ್ದ ಬೈಕ್‌ಗಳಿಗೆ(Bike) ನಕಲಿ ಆರ್‌ಸಿ ಸೇರಿದಂತೆ ದಾಖಲೆ ಸೃಷ್ಟಿಸಿ ಕಡಿಮೆ ಬೆಲೆಗೆ ಹೊನ್ನಪ್ಪ ಮಾರಾಟ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಬೈಕ್‌ ಕಳವು ಮಾಡುವ ಅಪ್ರಾಪ್ತ ಬಾಲಕಿಗೆ ಸ್ಪಲ್ಪ ಹಣ ಕೊಟ್ಟು ಇನ್ನುಳಿದ ಹಣದಲ್ಲಿ ಹೊನ್ನಪ್ಪ ಬಿಂದಾಸ್‌ ಜೀವನ ಸಾಗಿಸುತ್ತಿದ್ದ. ಆತನಿಗೆ ಬೈಕ್‌ ವಿಲೇವಾರಿಗೆ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ರಮೇಶ್‌ ನೆರವು ಕೊಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬೈಕ್‌ ಕಳ್ಳರ ತಂಡವನ್ನು ವಿಜಯನಗರ ಉಪ ವಿಭಾಗದ ಎಸಿಪಿ ನಂಜುಂಡೇಗೌಡ ಹಾಗೂ ಮಾಗಡಿ ರಸ್ತೆ ಠಾಣೆ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ನೇತೃತ್ವದ ತಂಡ ಬಂಧಿಸಿದೆ.

ಕುಡಿದ ಅಮಲಲ್ಲಿ ಸತ್ಯ ಬಾಯ್ಬಿಟರು!

ಕೆಲ ದಿನಗಳ ಹಿಂದೆ ತಮ್ಮ ಸ್ನೇಹಿತರ ಜತೆ ಬಾರ್‌ಗೆ ಮದ್ಯ ಸೇವನೆಗೆ ಅಪ್ರಾಪ್ತರು ತೆರಳಿದ್ದರು. ಆ ವೇಳೆ ಮದ್ಯ ಸೇವಿಸಿದ ಅವರು, ಕುಡಿದ ಮತ್ತಿನಲ್ಲಿ ತಮ್ಮ ಗೆಳೆಯರ ಮುಂದೆ ನಮಗೆ ಪೊಲೀಸ್‌ ಕಾನ್‌ಸ್ಟೇಬಲ್‌ ಬಾಸ್‌. ಕದ್ದರೂ ನಾವು ಸಿಕ್ಕಿ ಬೀಳುವುದಿಲ್ಲ ಎಂದು ಬಡಬಡಿಸಿದ್ದರು. ಈ ಸಂಭಾಷಣೆ ನಡೆಯುವ ವೇಳೆ ಪಕ್ಕದ ಟೇಬಲ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಮತ್ತೊಬ್ಬ ಬೈಕ್‌ ಕಳ್ಳ ಕೇಳಿಸಿಕೊಂಡಿದ್ದ. ಕೊನೆಗೆ ಆತ ಪೊಲೀಸ್‌ ಬಾತ್ಮೀದಾರನಿಗೆ ಸದರಿ ವಿಷಯ ಮುಟ್ಟಿಸಿದ್ದ. ಈ ವಿಚಾರ ತಿಳಿದ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ತಂಡ, ಕೂಡಲೇ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹೊನ್ನಪ್ಪ ಸಂಗತಿ ಗೊತ್ತಾಯಿತು ಎಂದು ಮೂಲಗಳು ಹೇಳಿವೆ.

77 ಲಕ್ಷ ಮೌಲ್ಯದ 53 ಬೈಕ್‌ ಜಪ್ತಿ

ಒಂದು ವರ್ಷದ ಅವಧಿಯಲ್ಲಿ ನಂದಿನಿ ಲೇಔಟ್‌, ಮಾಗಡಿ ರಸ್ತೆ, ರಾಜಗೋಪಾಲನಗರ, ಯಶವಂತಪುರ, ಎಚ್‌ಎಂಟಿ ಲೇಔಟ್‌, ಗಂಗಮ್ಮನ ಸರ್ಕಲ್‌, ಜ್ಞಾನಭಾರತಿ ಹಾಗೂ ಪೀಣ್ಯ ಸೇರಿದಂತೆ ಇನ್ನಿತರೆ ಕಡೆ ಕಳವು ಮಾಡಿದ್ದ ಬಾಕ್ಸ್‌. 77 ಲಕ್ಷ ಮೌಲ್ಯದ 53 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ತನಿಖೆ(Investigation) ಮುಂದುವರೆದಿದ್ದು, ಮತ್ತಷ್ಟು ಬೈಕ್‌ಗಳು ಪತ್ತೆಯಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಅಪ್ರಾಪ್ತರನ್ನು ಬಳಸಿಕೊಂಡರೇ ಕಾನೂನಾತ್ಮಾಕವಾಗಿ ತಾನು ಸುರಕ್ಷಿತ ಎಂದು ಕಾನ್‌ಸ್ಟೇಬಲ್‌ ಹೊನ್ನಪ್ಪ ಭಾವಿಸಿದ್ದ. ಅಪ್ರಾಪ್ತರು ಸಿಕ್ಕಿಬಿದ್ದರು ಅವರನ್ನು ಜೈಲಿಗೆ ಕಳುಹಿಸುವುದಿಲ್ಲ. ಅಲ್ಲದೆ ಅವರು ತನ್ನ ಹೆಸರು ಸಹ ಹೇಳುವುದಿಲ್ಲ ಎಂದು ಆತ ತಿಳಿದಿದ್ದ ಎನ್ನಲಾಗಿದೆ.

ನಾನು ಕಳ್ಳತನ ಮಾಡಿಸಿಲ್ಲ. ಆ ಹುಡುಗರೇ ಕದ್ದ ಬೈಕ್‌ಗಳನ್ನು ವಿಲೇವಾರಿ ಮಾಡಿಸಿಕೊಡುವಂತೆ ಕೇಳಿದ್ದರು. ನಾನು ನಮ್ಮ ಸ್ನೇಹಿತರಿಗೆ ಬೈಕ್‌ಗಳನ್ನು ಕೊಡಿಸಿದ್ದೆ ಅಷ್ಟೇ ಎಂದು ವಿಚಾರಣೆ ವೇಳೆ ಹೊನ್ನಪ್ಪ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ