ಕಲಬುರಗಿ: ಚಿಕಿತ್ಸೆ ಫಲಿಸದೆ ಆಶಾ ಕಾರ್ಯಕರ್ತೆ ಸಾವು

Kannadaprabha News   | Asianet News
Published : May 16, 2020, 02:50 PM IST
ಕಲಬುರಗಿ: ಚಿಕಿತ್ಸೆ ಫಲಿಸದೆ ಆಶಾ ಕಾರ್ಯಕರ್ತೆ ಸಾವು

ಸಾರಾಂಶ

ರಸ್ತೆ ಅಪಘಾತ ಆಶಾ ಕಾರ್ಯಕರ್ತೆ ಸಾವು| ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್‌ ಬಳಿ ನಡೆದ ದುರ್ಘಟನೆ| ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು, ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಆಶಾ ಕಾರ್ಯಕರ್ತೆ ಕೊನೆಯುಸಿರು|

ಕಲಬುರಗಿ(ಮೇ.16): ಜಿಲ್ಲೆಯ ಜೇವರ್ಗಿ ತಾಲೂಕು ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದಾಗ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯಡ್ರಾಮಿ ತಾಲೂಕಿನ ಆಶಾ ಕಾರ್ಯಕರ್ತೆ ಶಾರದಾ ನಿಂಗಪ್ಪ ಕೋಟನೂರ (45) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ಈ ಕುರಿತಂತೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಮಾಗಣಗೇರಾದಿಂದ ಶುಕ್ರವಾರ ಬೆಳಗ್ಗೆ ಹೊರಟು ಜೇವರ್ಗಿಯತ್ತ ಸಾಗುತ್ತಿದ್ದಾಗ ಚಿಗರಳ್ಳಿ ಕ್ರಾಸ್‌ ಬಳಿ ಇವರ ಬೈಕ್‌ ಅಪಘಾತಕ್ಕೀಡಾಗಿತ್ತು.

ಕೊರೋನಾ ಕಾಟಕ್ಕೆ ಸುಸ್ತಾದ ಜನ: ನಾನ್‌ ಕೋವಿಡ್‌ ರೋಗಿಗಳ ಸಮಸ್ಯೆ ಕೇಳೋರ‍್ಯಾರು..?

ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಆಶಾ ಕಾರ್ಯಕರ್ತೆ ಕೊನೆಯುಸಿರೆಳೆದಿದ್ದಾಳೆ.
 

PREV
click me!

Recommended Stories

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು