Belagavi ಆಯತಪ್ಪಿ ಬಾವಿಗೆ ಬಿದ್ದ ಬೀದಿನಾಯಿ, ಕಚ್ಚಿದರೂ ಛಲಬಿಡದೇ ರಕ್ಷಣೆ

By Suvarna News  |  First Published May 12, 2022, 4:33 PM IST
  • ಬೆಳಗಾವಿಯಲ್ಲಿ ಯಶಸ್ವಿ 'ಆಪರೇಷನ್ ಡಾಗ್' ಕಾರ್ಯಾಚರಣೆ
  • ನಾಯಿ ಕಚ್ಚಿದರೂ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ನಾಯಿಯ ರಕ್ಷಿಸಿದ SDRF ಸಿಬ್ಬಂದಿ
  • SDRF ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
     

ಬೆಳಗಾವಿ (ಮೇ.12): ಬಾವಿಗೆ ಬಿದ್ದ ಬೀದಿ ನಾಯಿಯನ್ನು (Street Dog) ಅರ್ಧಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ (Dog) ಕಚ್ಚಿದರೂ ಸಹ ಛಲಬಿಡದೇ ರಕ್ಷಣೆ ಮಾಡಿದ್ದು, ಮೇ 10ರ ಬೆಳಗ್ಗೆ ನಡೆದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಗಾವಿ ನಗರದ ಕಚೇರಿ ಗಲ್ಲಿಯಲ್ಲಿ ಮಕ್ಕಳ ಕಲ್ಲೇಟಿಗೆ ಮೇ 10ರ ಬೆಳಗ್ಗೆ 10 ಗಂಟೆಗೆ ಬೀದಿ ನಾಯಿಯೊಂದು‌ ಬಾವಿಗೆ ಬಿದ್ದಿತ್ತು. ಬೀದಿನಾಯಿ ಬಾವಿಗೆ ಬಿದ್ದ ಬಗ್ಗೆ ಸ್ಥಳೀಯರು ಎಸ್ ಡಿಆರ್‌ಎಫ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಎಸ್‌ಡಿಆರ್‌ಎಫ್ ಸಿಬ್ಬಂದಿ ಬಾವಿಗಿಳಿದು ಬೀದಿ ನಾಯಿಯನ್ನು ರಕ್ಷಿಸಿದ್ದಾರೆ.

Tap to resize

Latest Videos

ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದ ಎಸ್‌ಡಿಆರ್‌ಎಫ್ ಸಿಬ್ಬಂದಿ ವಿಠ್ಠಲ್ ಜೆಡ್ಲಿ, ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ ಕಚ್ಚಿದರೂ ಛಲಬಿಡದೇ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್ ಸಿಬ್ಬಂದಿ ವಿಠ್ಠಲ್ ಜೆಡ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮರಳಿದ್ದಾರೆ. ಬಾವಿಗೆ ಬಿದ್ದ ಬೀದಿನಾಯಿ ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IOCL RECRUITMENT 2022: ವಿವಿಧ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ 

 ಕುಡಿಯೋದೇ ನನ್ನ ವೀಕ್ನೆಸ್ಸು, ತಹಶಿಲ್ದಾರ್ ಕಚೇರಿ ಎದುರು ಟೈಟ್ ಆಗಿ ಮಲಗಿದ ಗ್ರಾಮ ಲೆಕ್ಕಾಧಿಕಾರಿ!: ಕರ್ತವ್ಯ ವೇಳೆಯೇ ಕಂಠಪೂರ್ತಿ ಕುಡಿದು ಸವದತ್ತಿ (Savadatti) ತಹಶಿಲ್ದಾರ್ ಕಚೇರಿ (tahasildar Office) ಎದುರು ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಭಿನಯದ ಯುದ್ಧಕಾಂಡ ಚಿತ್ರದ ಕುಡಿಯೋದೆ ನನ್ನ ವೀಕ್ನೆಸ್ಸು ಸಾಂಗ್ ಎಡಿಟ್ ಮಾಡಿದ ವಿಡಿಯೋ ವೈರಲ್ ಆಗಿದೆ. 

ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ( Goravana Kolla) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (village accountant) ಆಗಿದ್ದ ಸಂಜು ಬೆಣ್ಣಿ (Sanju Benni) ಗೊರವನ್ನಕೊಳ್ಳ ಗ್ರಾಮದಲ್ಲಿಯೂ ಇದೇ ರೀತಿ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ‌ನಂತೆ. ಹೀಗಾಗಿ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇಷ್ಟಾದರೂ ತಹಶಿಲ್ದಾರ್ ಕಚೇರಿಯಲ್ಲಿಯೂ ತನ್ನ ಹಳೆಯ ಚಾಳಿಯನ್ನು ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಮುಂದುವರಿಸಿದ್ದಾರೆ. 

ಗ್ರಾಮ ಲೆಕ್ಕಾಧಿಕಾರಿ ಸಂಜು ಬೆಣ್ಣಿ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿದು ದುರ್ವತನೆ ಮಾಡ್ತಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ( Prashant Patil) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Eastern Railway Recruitment 2022: ಬರೋಬ್ಬರಿ 1201 ಹುದ್ದೆಗಳಿಗೆ ಅರ್ಜಿ ಆಹ್ವಾನ 

ರಮೇಶ್‌ ಜಾರಕಿಹೊಳಿ ಕೋಟ್ಯಂತರ ಸಾಲ ಬಾಕಿ: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ(Ramesh Jarkiholi) ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರು. ಸಾಲ(Loan) ಬಾರಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌(ST Somashekhar) ಅವರು ಮಂಗಳವಾರ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. 

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆ, ಸವರಿನ್‌ ಇಂಡಸ್ಟ್ರೀಸ್‌ ಸೇರಿ​ದಂತೆ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ(Belagavi DCC Bank) ನಾಲ್ಕು ಸಕ್ಕರೆ ಕಾರ್ಖಾನೆಗಳು ಡಿಫಾಲ್ಟ್‌ಗಳಿವೆ. ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ(Lakshmi Hebbalkar) ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿಲ್ಲ. ವಿಜಯಪುರ, ಶಿರಸಿ, ತುಮಕೂರು, ಮಂಗಳೂರಿನಲ್ಲಿ ರಮೇಶ ಜಾರಕಿಹೊಳಿ ಸಾಲ ಪಡೆದಿದ್ದು ಎರಡು ವರ್ಷದಿಂದ ಬಡ್ಡಿಯನ್ನೂ(Interest) ಮರುಪಾವತಿ ಮಾಡಿಲ್ಲ. ಈಗಾಗಲೇ ಹಲವು ಬಾರಿ ಅವರಿಗೆ ನೋಟಿಸ್‌ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ವಿಜಯಪುರ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಲಕ್ಷ್ಮೀ ಹೆಬ್ಬಾಳಕರ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.

click me!