ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಬೀದರ್‌ಗೆ ಅಸಾದುದ್ದಿನ್ ಓವೈಸಿ ಭೇಟಿ

By Suvarna NewsFirst Published Feb 1, 2020, 3:23 PM IST
Highlights

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶನ| ಶಾಹಿನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶ ದ್ರೋಹದ ದೂರು ದಾಖಲು| ಬೀದರ್‌ಗೆ ಭೇಟಿ ನೀಡಿದ ಅಸಾದುದ್ದಿನ್ ಓವೈಸಿ| ಜೈಲಿನಲ್ಲಿ ಬಂಧಿರ ಜೊತೆ ಸಮಾಲೋಚನೆ ನಡೆಸಿದ ಓವೈಸಿ| 

ಬೀದರ್(ಫೆ.01): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶನ ಮಾಡಿದ ನಗರದ ಶಾಹಿನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶ ದ್ರೋಹದ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಬೀದರ್ ನಗರಕ್ಕೆ ಇಂದು(ಶನಿವಾರ) ಆಗಮಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಕರಣ ಸಂಬಂಧ ಬಂಧಿತರಾಗಿ ಜಿಲ್ಲಾ ಕಾರಾಗೃಹದಲ್ಲಿರುವ‌ ಶಿಕ್ಷಕಿ ಫರೀಮಾ ಬೇಗಂ, ವಿಧ್ಯಾರ್ಥಿನಿಯ ತಾಯಿ ನವೀದಾ ಅವರನ್ನ ಅಸಾದುದ್ದಿನ್ ಓವೈಸಿ ಭೇಟಿ‌ ಸಮಾಲೋಚನೆ ನಡೆಸಿದ್ದಾರೆ. 

ಸಮಾಲೋಚನೆ ವೇಳೆ ಶಿಕ್ಷಕಿ ಫರೀಮಾ ಬೇಗಂ, ವಿಧ್ಯಾರ್ಥಿನಿಯ ತಾಯಿ ನವೀದಾ ಅವರಿಗೆ ಧೈರ್ಯದಿಂದ ಇರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ನಗರದ ಎಸ್ಪಿ ಕಚೇರಿಗೆ ಭೇಟಿ ನೀಡಿ ಎಸ್ಪಿ ಟಿ.ಶ್ರೀಧರ ಜೊತೆ ಪ್ರಕರಣದ ಬಗ್ಗೆ ಚರ್ಚಿಸಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. 
 

ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!