'ಬಿಜೆಪಿಗರು ಹಿಂದೂ ಎಂಬ ಡ್ರೆಸ್ ಕೋಡ್ ಹಾಕೊಂಡು ಜನರ ದಾರಿ ತಪ್ಪಿಸ್ತಿದ್ದಾರೆ'

Suvarna News   | Asianet News
Published : Feb 01, 2020, 02:58 PM IST
'ಬಿಜೆಪಿಗರು ಹಿಂದೂ ಎಂಬ ಡ್ರೆಸ್ ಕೋಡ್ ಹಾಕೊಂಡು ಜನರ ದಾರಿ ತಪ್ಪಿಸ್ತಿದ್ದಾರೆ'

ಸಾರಾಂಶ

ಮೋದಿ 2014ರಿಂದ ಸುಳ್ಳು ಹೇಳುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ| ಮೋದಿ ಹೇಳಿದ ಸುಳ್ಳು ಈವಾಗ ಜನರಿಗೆ ಗೊತ್ತಾಗಿದೆ| ಇವರ ಬಣ್ಣ ಬಯಲಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಬಯ್ಯಾಪುರ| 

ಕೊಪ್ಪಳ(ಫೆ.01): ಸಚಿವ ಸಿ.ಟಿ.ರವಿ ರಾಹುಲ್ ಗಾಂಧಿ ಬಗ್ಗೆ‌‌‌ ತೀರಾ ಬಾಲಿಶವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಬಗ್ಗೆ ರವಿಗೆ ಲವಲೇಶವೂ ಗೊತ್ತಿಲ್ಲ. ಇವರೆಲ್ಲ ಹಿಂದೂ ಎಂಬ ಡ್ರೆಸ್ ಕೋಡ್ ಹಾಕಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವೂ ಕೂಡ ಹಿಂದುಗಳೇ ಎಂಬುದು ಜನರಿಗೆ ಗೊತ್ತಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಧಾ‌ನಿ ನರೇಂದ್ರ ಮೋದಿ ಅವರು 2014ರಿಂದ ಸುಳ್ಳು ಹೇಳುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ. ಅವರ ಸುಳ್ಳು ಈವಾಗ ಜನರಿಗೆ ಗೊತ್ತಾಗಿದೆ. ಇವರ ಬಣ್ಣ ಬಯಲಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನರೇಂದ್ರ ಮೋದಿ ಏನು 100 ವರ್ಷ ಆಡಳಿತ ಮಾಡ್ತಾರಾ ನೋಡೋಣ. ಬಿಜೆಪಿಗರಿಗೆ ಇದೇ ಕೊನೆಯ ಸರ್ಕಾರ. ಮುಂದೆ ಕೇಂದ್ರ ಮತ್ತು ರಾಜ್ಯದಲ್ಲೆರಡೂ ಕಡೆ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಮುಂದೆ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಅಮರೇಗೌಡ ಬಯ್ಯಾಪೂರ ಭವಿಷ್ಯ ನುಡಿದಿದ್ದಾರೆ. 
 

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!