ದಸರಾ ಪ್ರಯುಕ್ತ ಬೆಂಗಳೂರು- ಮಂಗಳೂರು ವಿಶೇಷ ರೈಲು

By Kannadaprabha NewsFirst Published Sep 26, 2019, 8:49 AM IST
Highlights

ದಸರಾ ಪ್ರಯುಕ್ತ ಮಂಗಳೂರು ಹಾಗೂ ಬೆಂಗಳೂರಿನ ನಡುವೆ ವಿಶೇಷ ರೈಲು ಆರಂಭಿಸಲಾಗಿದೆ. ದಸರಾ ಆಚರಣೆ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ನೈಋುತ್ಯ ರೈಲ್ವೆ ವಿಭಾಗವು ದಸರಾ ಹಬ್ಬದ ಪ್ರಯುಕ್ತ ಅ.4 ಮತ್ತು 8ರಂದು ಬೆಂಗಳೂರು -ಮಂಗಳೂರು ಮಧ್ಯೆ ಸುವಿಧಾ ವಿಶೇಷ ರೈಲು ಸೌಲಭ್ಯ ಕಲ್ಪಿಸಿದೆ.

ಮಂಗಳೂರು(ಸೆ.26): ದಸರಾ ಪ್ರಯುಕ್ತ ಮಂಗಳೂರು ಹಾಗೂ ಬೆಂಗಳೂರಿನ ನಡುವೆ ವಿಶೇಷ ರೈಲು ಆರಂಭಿಸಲಾಗಿದೆ. ದಸರಾ ಆಚರಣೆ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ನೈಋುತ್ಯ ರೈಲ್ವೆ ವಿಭಾಗವು ದಸರಾ ಹಬ್ಬದ ಪ್ರಯುಕ್ತ ಅ.4 ಮತ್ತು 8ರಂದು ಬೆಂಗಳೂರು -ಮಂಗಳೂರು ಮಧ್ಯೆ ಸುವಿಧಾ ವಿಶೇಷ ರೈಲು ಸೌಲಭ್ಯ ಕಲ್ಪಿಸಿದೆ. ಅ.4ರಂದು ರಾತ್ರಿ 10.20ಕ್ಕೆ ಯಶವಂತಪುರ ರೈಲ್ವೆ ಸ್ಟೇಷನ್‌ನಿಂದ ಹೊರಡುವ 15 ಕೋಚ್‌ಗಳ ಸುವಿಧಾ ಸ್ಪೆಷಲ್‌ (ನಂ.82655) ರೈಲು ಅ.5ರಂದು ಬೆಳಗ್ಗೆ 8.30ಕ್ಕೆ ಮಂಗಳೂರು ಜಂಕ್ಷನ್‌ ರೈಲ್ವೆ ಸ್ಟೇಷನ್‌ ತಲುಪಲಿದೆ.

ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!

ಅ.8ರಂದು ರಾತ್ರಿ 10.15ಕ್ಕೆ ಮಂಗಳೂರು ಜಂಕ್ಷನ್‌ ರೈಲ್ವೆ ಸ್ಟೇಷನ್‌ನಿಂದ ಹೊರಡುವ ಸುವಿಧಾ ಸ್ಪೆಷಲ್‌ (ನಂ.82656) ರೈಲು ಅ.9ರಂದು ಬೆಳಗ್ಗೆ 8 ಗಂಟೆಗೆ ಯಲಹಂಕ ರೈಲ್ವೆ ಸ್ಟೇಷನ್‌ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

click me!