ಬೆಂಗ್ಳೂರಲ್ಲಿ ದುಡ್ಡು ಕೊಟ್ರೆ ಸಾಕು ಸಿಗುತ್ತೆ ಡಿಎಲ್: ಆರ್‌ಟಿಓ ಕಚೇರಿಯಲ್ಲಿನ ಕಳ್ಳಾಟ ಬಯಲು..!

Published : Jan 13, 2023, 02:02 PM ISTUpdated : Jan 13, 2023, 02:04 PM IST
ಬೆಂಗ್ಳೂರಲ್ಲಿ ದುಡ್ಡು ಕೊಟ್ರೆ ಸಾಕು ಸಿಗುತ್ತೆ ಡಿಎಲ್: ಆರ್‌ಟಿಓ ಕಚೇರಿಯಲ್ಲಿನ ಕಳ್ಳಾಟ ಬಯಲು..!

ಸಾರಾಂಶ

ಕರ್ತವ್ಯ ಲೋಪವೆಸಗಿದ ಭ್ರಷ್ಟ ಎಆರ್ಟಿಓ ಕೃಷ್ಣನಂದನ್ನ ಸಾರಿಗೆ ಇಲಾಖೆ ಕಮಿಷನರ್ ಎಸ್.ಎನ್. ಸಿದ್ದರಾಮಪ್ಪ ಅವರು ಅಮಾನತು ಮಾಡಿದ್ದಾರೆ. ಮೂರೇ ದಿನದಲ್ಲಿ ಬರೋಬ್ಬರಿ 2504 ಡಿಎಲ್‌ಗಳನ್ನ ಟೆಸ್ಟ್ ಇಲ್ಲದೆ ವಿತರಣೆ ಮಾಡಿದ್ದ ಕೃಷ್ಣನಂದ. 

ಬೆಂಗಳೂರು(ಜ.13): ಬೆಂಗಳೂರು ಸಾರಿಗೆ ಇಲಾಖೆ ಕಚೇರಿಗಳಲ್ಲಿ ಡಿಎಲ್ ಗೋಲ್ಮಾಲ್‌ ಬಯಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ ಕಚೇರಿಯಲ್ಲಿ ದುಡ್ಡು ಕೊಟ್ರೆ ಡಿಎಲ್ ಸಿಗುತ್ತೆ, ಕಂತೆ ಕಂತೆ ನೋಟು ಕೊಟ್ರೆ ಸಾಕು ಯಾವುದೇ ಟೆಸ್ಟ್ ಇಲ್ಲದೆ ಡಿಎಲ್ ಸಿಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಂದ ಬಳಿ ಲಂಚ ಪಡೆದು ಅಕ್ರಮವಾಗಿ ಡಿಎಲ್‌ಗಳನ್ನ ವಿತರಣೆ ಮಾಡುತ್ತಿದ್ದಾರೆ. ತನಿಖೆ ವೇಳೆ ಭ್ರಷ್ಟ ಆರ್‌ಟಿಓ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ. 

ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ ಕಚೇರಿಯಲ್ಲಿ ಅಕ್ರಮವಾಗಿ ಬರೋಬ್ಬರಿ 2504 ಡ್ರೈವಿಂಗ್ ಲೈಸೆನ್ಸ್‌ಗಳು ಪತ್ತೆಯಾಗಿವೆ. ಕೆಎ.51 ಸಾರಿಗೆ ಇಲಾಖೆ ಕಚೇರಿಯಲ್ಲಿ ಡಿಸೆಂಬರ್-19 ರಂದು 964,ಡಿ.20-979,ಡಿಸೆಂಬರ್-21-ರಂದು  561 ರಂದು ಡಿಎಲ್‌ಗಳು ವಿತರಣೆಯಾಗಿವೆ.ಅಕ್ರಮವಾಗಿ ಬೇಕಾಬಿಟ್ಟಿ ಡಿಎಲ್‌ಗಳನ್ನ ವಿತರಣೆ ಮಾಡಿ ಭ್ರಷ್ಟ ಎಆರ್ಟಿಓ ಕೃಷ್ಣನಂದ ತಗ್ಲಾಕೊಂಡಿದ್ದಾರೆ. 

ಯಾವುದೇ ವ್ಯಕ್ತಿಯ ಡ್ರೈವಿಂಗ್‌ ಲೈಸೆನ್ಸ್‌ ಅಮಾನತು ಮಾಡುವ ಅಧಿಕಾರ ಪೊಲೀಸರಿಗಿಲ್ಲ: ಕೋಲ್ಕತ್ತ ಹೈಕೋರ್ಟ್‌

ಕರ್ತವ್ಯ ಲೋಪವೆಸಗಿದ ಭ್ರಷ್ಟ ಎಆರ್ಟಿಓ ಕೃಷ್ಣನಂದನ್ನ ಸಾರಿಗೆ ಇಲಾಖೆ ಕಮಿಷನರ್ ಎಸ್.ಎನ್. ಸಿದ್ದರಾಮಪ್ಪ ಅವರು ಅಮಾನತು ಮಾಡಿದ್ದಾರೆ. ಮೂರೇ ದಿನದಲ್ಲಿ ಬರೋಬ್ಬರಿ 2504 ಡಿಎಲ್‌ಗಳನ್ನ ಟೆಸ್ಟ್ ಇಲ್ಲದೆ ಕೃಷ್ಣನಂದ ವಿತರಣೆ ಮಾಡಿದ್ದಾರೆ. ಪ್ರತಿ ಡಿಎಲ್‌ಗೆ 3 ರಿಂದ 5 ಸಾವಿರ ಪಡೆದು ಡಿಎಲ್ ವಿತರಣೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. 

ಕೇವಲ ಎಲೆಕ್ಟ್ರಾನಿಕ್ ಸಿಟಿ ಆರ್‌ಟಿ ಓ ಕಚೇರಿಯಲ್ಲಿ ಮಾತ್ರವಲ್ಲ ಬೆಂಗಳೂರು ಕೇಂದ್ರ, ದಕ್ಷಿಣ, ಹಾಗೂ ಕೆ.ಆರ್. ಪುರಂ ಕಚೇರಿಗಳಲ್ಲೂ ಬೇಕಾಬಿಟ್ಟಿ ಡಿಎಲ್ ಸೇಲ್ ನಡೆಯುತ್ತಿದೆ ಅಂತ ಹೇಳಲಾಗುತ್ತಿದೆ. ಈ ಸಂಬಂಧ ಕಾರಣ ಕೇಳಿ ಆರ್‌ಟಿಓ ಕಮಿಷನರ್ ಸಿದ್ದರಾಮಪ್ಪ ಅವರು ನೋಟೀಸ್ ನೀಡಿದ್ದಾರೆ. 

PREV
Read more Articles on
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ