ಕೆಂಪೇಗೌಡರ ಹೆಸರಲ್ಲಿ ಬೆಂಗಳೂರು ಹಬ್ಬ ಮಾಡಬೇಕು: ನಂಜಾವಧೂತ ಸ್ವಾಮೀಜಿ

By Girish GoudarFirst Published Jan 13, 2023, 1:17 PM IST
Highlights

ಕೆಂಪೇಗೌಡರ ಹೆಸರಿನಲ್ಲಿ ಬೆಂಗಳೂರು ಹಬ್ಬ ಮಾಡಬೇಕು. ಸಂಕ್ರಾಂತಿ ಹಬ್ಬವನ್ನು ಕೆಂಪೇಗೌಡರ ಹಬ್ಬ ಅಂತ ಘೋಷಣೆ ಮಾಡಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಬೇಡಿಕೆಯನ್ನ ಇಟ್ಟಿದ್ದೇವೆ. ಮುಂದಿನ ವರ್ಷ ಸಂಕ್ರಾಂತಿ ದಿನ ಕೆಂಪೇಗೌಡರ ಬೆಂಗಳೂರು ಹಬ್ಬ ಅಂತ ಘೋಷಣೆ ಮಾಡಿ. ಈ ಹಬ್ಬ ವಿಶ್ವವಿಖ್ಯಾತವಾಗಿ ಹಬ್ಬವಾಗಬೇಕು: ನಂಜಾವಧೂತ ಶ್ರೀ. 

ಬೆಂಗಳೂರು(ಜ.13): ಇಂದು ವಿಧಾನಸೌಧದ ಮುಂದೆ ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆ ಶಿಲಾನ್ಯಾಸ ಆಗಿದೆ. ನಮ್ಮದು ಒಂದು ಬೇಡಿಕೆ ಇತ್ತು, ಕೆಂಪೇಗೌಡರ ಹೆಸರಿನಲ್ಲಿ ಬೆಂಗಳೂರು ಹಬ್ಬ ಮಾಡಬೇಕು. ಸಂಕ್ರಾಂತಿ ಹಬ್ಬವನ್ನು ಕೆಂಪೇಗೌಡರ ಹಬ್ಬ ಅಂತ ಘೋಷಣೆ ಮಾಡಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಬೇಡಿಕೆಯನ್ನ ಇಟ್ಟಿದ್ದೇವೆ. ಮುಂದಿನ ವರ್ಷ ಸಂಕ್ರಾಂತಿ ದಿನ ಕೆಂಪೇಗೌಡರ ಬೆಂಗಳೂರು ಹಬ್ಬ ಅಂತ ಘೋಷಣೆ ಮಾಡಿ. ಈ ಹಬ್ಬ ವಿಶ್ವವಿಖ್ಯಾತವಾಗಿ ಹಬ್ಬವಾಗಬೇಕು ಅಂತ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. 

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಅವರು, ಕಲ್ಯಾಣದ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿ, ಪಾರದರ್ಶಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಬಸವೇಶ್ವರರ ಪುತ್ಥಳಿ, ಬೆಂಗಳೂರು ನಗರದ ಕನಸ್ಸನ್ನ ಕಂಡ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಸಿಎಂ ಸಚಿವ ಸಂಪುಟದ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅಸಿವ ಅಶೋಕ್ ಇದರ ಜಬಾವ್ದಾರಿ ಹೊತ್ತು ಆದಷ್ಟು ಬೇಗ ನಿರ್ಮಾಣ ಮಾಡಬೇಕಂತ ಸಂಕಲ್ಪ ಮಾಡಿದ್ದಾರೆ. ಅವರ ಆಶಯದಂತೆ ಆದಷ್ಟು ಬೇಗ ನಿರ್ಮಾಣ ಆಗಲಿ ಅಂತಾ ಆಶಯಿಸುತ್ತೇನೆ ಅಂತ ಶ್ರೀಗಳು ತಿಳಿಸಿದ್ದಾರೆ. 

Chitradurga: ಈ ಬಾರಿ ನಮ್ಮ ಸಮಾಜಕ್ಕೆ ಪೆನ್ನು ಸಿಕ್ಕೇ ಸಿಗಲಿದೆ ಎಂದ ನಂಜಾವಧೂತ ಶ್ರೀಗಳು!

ನಿರ್ಮಲಾನಂದ ಸ್ವಾಮೀಜಿ ಅವರು ಮಾತನಾಡಿ, ನಾವು ಸರ್ಕಾರಕ್ಕೆ ಬಹಳ ದಿನದಿಂದಲೇ ಬೇಡಿಕೆ ಇಟ್ಟಿದ್ವಿ, ಸಚಿವ ಅಶೋಕ್ ನೇತೃತ್ವದಲ್ಲಿ ಆಗ್ತಾ ಇದೆ. ಆದಷ್ಟು ಬೇಗ ಆಗಲಿ ಅಂತ ನಾವು ಕೇಳುತ್ತೇವೆ. ಬೆಂಗಳೂರು ನಿರ್ಮಾಣ ಮಾಡಿದವರು ಕೆಂಪೇಗೌಡರು, ಮತ್ತೊಂದು ಕಡೆ ಧರ್ಮ ಗುರು ಬಸವಣ್ಣ ಅವರು ಆದರ್ಶ ಪುರುಷರು ಇವರಾಗಿದ್ದಾರೆ ಅಂತ ಹೇಳಿದ್ದಾರೆ. 

click me!