ಕೊರೊನಾ ವಾರಿಯರ್ಸ್‌ಗಳಿಗೆ ಕಲಾ ನಮನ

By Suvarna NewsFirst Published Aug 14, 2020, 4:31 PM IST
Highlights

ಕೊರೋನಾ ಕಾಲದಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಿರುವ ವಾರಿಯರ್ಸ್ ಗಳಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಲಾನಮನ ಸಲ್ಲಿಸಲಾಗಿದ.

ಮಣಿಪಾಲ (ಆ.14) :  ಸ್ವಾತಂತ್ರ್ಯೋತ್ಸವದಂಗವಾಗಿ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ಇಲ್ಲಿನ ಕಸ್ತೂರ್ಬಾ ಆಸ್ರತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಆಸ್ಪತ್ರೆಯ ಆವರಣದಲ್ಲಿ ಬೃಹತ್ ವರ್ಣಚಿತ್ರವನ್ನು ರಚಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಗೌರವ ಸಮರ್ಪಿಸಿದ್ದಾರೆ.

 ಆಸ್ಪತ್ರೆಯ ಡೀನ್ ಡಾ.ಶರತ್ ರಾವ್ ಅವರು ಕಲಾಕೃತಿಯನ್ನು ಸಾರ್ವಜನಿಕ ವೀಕ್ಷಣಗೆ  ಅನಾವರಣಗೊಳಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಡಾ.ಸುಮ ನಾಯರ್, ಡಾ. ವೀಣಾ ಕಾಮತ್, ಡಾ.ಈಶ್ವರಿ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. 

ಸದ್ಯಕ್ಕೆ ಶಾಲೆ ಇಲ್ಲ: ಪ್ರೌಢ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಹೊಸ ಕಾರ್ಯಕ್ರಮ...!.

 ಜಲವರ್ಣ ಮಾಧ್ಯಮದಲ್ಲಿ ರಚಿಸಲಾಗಿರುವ ಈ ಕಲಾಕೃತಿಯು 320 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಕಲಾಕೃತಿಯ ಮೂಲಕ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಪೊಲೀಸರಿಗೆ, ವೈದ್ಯರಿಗೆ, ದಾದಿಯರಿಗೆ, ಪೌರಕಾರ್ಮಿಕರಿಗೆ ಮತ್ತು ಪತ್ರಕರ್ತರಿಗೆ ಗೌರವ ಸಲ್ಲಿಸಲಾಗಿದೆ.

click me!