ಬೆಳಗಾವಿಯಲ್ಲಿ ಮತ್ತೆ MES, ಶಿವಸೇನೆ ಪುಂಡಾಟ: ಮಹಿಳಾ ಕಾರ್ಯಕರ್ತೆಯರ ಬಂಧನ

By Suvarna News  |  First Published Mar 8, 2021, 1:38 PM IST

ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಪ್ರತಿಭಟನೆ| ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ಯತ್ನ| ಮಹಾನಗರ ಪಾಲಿಕೆ ಬಳಿಯೇ ಪುಂಡ ಎಂಇಎಸ್, ಶಿವಸೇನೆ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ ಪೊಲೀಸರು| 


ಬೆಳಗಾವಿ(ಮಾ.08): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ. ಹೌದು, ಇಂದು(ಸೋಮವಾರ) ರಾಜ್ಯದ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಲೇಬೇಕು. ಬೆಳಗಾವಿ ನಮ್ಮ ಹಕ್ಕದ್ದು ಯಾರ ಅಪ್ಪಂದಲ್ಲ ಎಂದು ಮರಾಠಿ ಭಾಷೆಯಲ್ಲಿ ಘೋಷಣೆ ಕೂಗುವ ಉದ್ಧಟತನ ಮೆರೆದಿದ್ದಾರೆ. 

ಬೆಳಗಾವಿ ಮಹಾನಗರ ಪಾಲಿಕೆ ಎದುರು ಇರುವ ಕನ್ನಡ ಧ್ವಜ ತೆರಲುಗೊಳಿಸಲು ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್, ಶಿವಸೇನೆ ಕಾರ್ಯಕರ್ತರು ಆಗ್ರಹಿ, ನಾಡದ್ರೋಹಿ ಘೋಷಣೆಗಳನ್ನ ಕೂಗಿದ್ದಾರೆ. ಕೈಯಲ್ಲಿ ಭಗವಾ ಧ್ವಜ ಹಿಡಿದು ಶಿವಸೇನೆ, ಎಂಇಎಸ್ ಕಾರ್ಯಕರ್ತರ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ.  ನಗರದ ಸಂಭಾಜಿ ವೃತ್ತದಿಂದ ಸರ್ದಾರ್ ಮೈದಾನದತ್ತ ಪ್ರತಿಭಟನಾ ಮೆರವಣಿ ಹೊರಟಿದ್ದಾರೆ. ಎಂಇಎಸ್ ಮಹಿಳಾ ಘಟಕದ ಕಾರ್ಯಕರ್ತೆಯರೂ ಕೂಡ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. 

Tap to resize

Latest Videos

ನಿಲ್ಲದ ಎಂಇಎಸ್, ಶಿವಸೇನೆ ಪುಂಡರ ಉದ್ಧಟತನ: ಪೊಲೀಸರಿಗೇ ನಿಂದಿಸಿದ ನಾಡದ್ರೋಹಿಗಳು

ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ತೆರಳುತ್ತಿದ್ದ ಪುಂಡ ಎಂಇಎಸ್, ಶಿವಸೇನೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೈಯಲ್ಲಿ ಧ್ವಜಸ್ತಂಭ ಹಿಡಿದು ಮಹಾನಗರ ಪಾಲಿಕೆ ಕಚೇರಿಯತ್ತ ಧಾವಿಸುತ್ತಿದ್ದ ಎಂಇಎಸ್ ನಾಯಕಿಯರಾದ ರೇಣು ಕಿಲ್ಲೇಕರ್, ಸರಿತಾ ಪಾಟೀಲ್ ಸೇರಿ 6 ಜನರನ್ನ ಬೆಳಗಾವಿ ಮಾರ್ಕೆಟ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಮಾಳಮಾರುತಿ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. 
 

click me!