ಕರ್ನಾಟಕ ಬಜೆಟ್; ಗೋ ಹತ್ಯೆ ನಿಷೇಧ ಕಾಯ್ದೆ ನಂತರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ

By Suvarna News  |  First Published Mar 8, 2021, 1:19 PM IST

ಬಜೆಟ್  ಮಂಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ/ ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಜಾರಿ/ ಪ್ರತಿ ಜಿಲ್ಲೆಗೆ ಒಂದು ಗೋಶಾಲೆ/ ಭಾರೀ ಚರ್ಚೆಗೆ ಕಾರಣವಾಗಿದ್ದ ವಿಚಾರ


ಬೆಂಗಳೂರು(ಮಾ.  08)  ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮತ್ತೊಂದು ದಿಟ್ಟ ಹೆಜ್ಜೆ  ಇಟ್ಟಿದೆ. 

ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ  ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಜಾರಿ  ಮಾಡಿದ್ದಾರೆ. ಇದರ ಅನ್ವಯ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.'

Tap to resize

Latest Videos

ಗೋಹತ್ಯೆ ನಿಷೇಧ ಬಹುದಿನದ ಬೇಡಿಕೆಯಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಕರಾವಳಿ ಭಾಗದಲ್ಲಿ ಸಂಘರ್ಷಗಳು ನಡೆದಿದ್ದವು  ಇದಲ್ಲದೆ ಸಮಗ್ರ ಗೋ ಸ‌ಂಕುಲ ಸಮೃದ್ಧಿ ಯೋಜನೆಯನ್ನೂ ಯಡಿಯೂರಪ್ಪ ಸರ್ಕಾರ ಜಾರಿಗೆ ತಂದಿದೆ.

ಬಜೆಟ್ ನಲ್ಲಿ ಹೊಸ ತೆರಿಗೆ ಇಲ್ಲ, ಮಹತ್ವದ ಬದಲಾವಣೆ ಏನು? 

ಈ ಕುರಿತಾಗಿ ಬಜೆಟ್‌ನಲ್ಲಿ ವಿವರಣೆ ನೀಡಿರುವ ಸಿಎಂ ಯಡಿಯೂರಪ್ಪ, ಹೊರ ರಾಜ್ಯದ ದೇಶಿ ತಳಿಗಳಾದ ಗಿರ್, ಸಾಹಿವಾಲ್, ಒಂಗೋಲ್, ಥಾರ್ ಪಾರ್ಕರ್ ಮತ್ತು ದೇವಣಿ ತಳಿಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ರೈತರಿಗೆ ಪರಿಚಯಿಸಲು ಯೋಜನೆ  ನೆರವು ನೀಡುತ್ತದೆ ಎಂದು ತಿಳಿಸಿದರು ಟಾನಿಕ್ ಬಜೆಟ್ ಮಂಡನೆ ಮಾಡಿರುವ ಬಿಎಸ್ ಯಡಿಯೂರಪ್ಪ ನಾಗರಿಕರ ಮೇಲೆ ಯಾವುದೇ ಹೆಚ್ಚಿನ ತೆರಿಗೆ  ಹಾಕಿಲ್ಲ. 

click me!