ಕೂಸು ಹುಟ್ಟೋಕು ಮುನ್ನ ಕುಲಾವಿ : ಜಮೀರ್‌ಗೆ ಕೈ ಮುಖಂಡರಿಂದಲೇ ಟಾಂಟ್

Suvarna News   | Asianet News
Published : Nov 01, 2020, 01:42 PM IST
ಕೂಸು ಹುಟ್ಟೋಕು ಮುನ್ನ ಕುಲಾವಿ : ಜಮೀರ್‌ಗೆ ಕೈ ಮುಖಂಡರಿಂದಲೇ ಟಾಂಟ್

ಸಾರಾಂಶ

ನಾವಂದುಕೊಂಡಿದ್ದೆ ಆಗಬೇಕೆಂದಿಲ್ಲ. ಕೂಸು ಹುಟ್ಟೋ ಮುನ್ನ ಕುಲಾವಿ ಹೊಲೆಸೋದಲ್ಲ ಎಂದು ಕಾಂಗ್ರೆಸ್ ಮುಖಂಡರೋರ್ವರು  ಟಾಂಟ್ ನೀಡಿದ್ದಾರೆ. 

ಮೈಸೂರು (ನ.01):  RR ನಗರ, ಶಿರಾ ಉಪ ಚುನಾವಣೆ  ಬಿರುಸಿನಿಂದಲೇ ಸಾಗಿದೆ. ಆದರೆ ಅಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎನ್ನುವುದೇ ನಮ್ಮ ಗುರಿ ಎಂದು ಮೈಸೂರಿನಲ್ಲಿ ತನ್ವೀರ್ ಸೇಠ್ ಹೇಳಿದ್ದಾರೆ. 

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಏರಲು ಪ್ರಯತ್ನ ನಡೆಯುತ್ತಿದೆ.  ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ವರಿಷ್ಠರ ನಿರ್ಧಾರಕ್ಕೆ ಬದ್ದರಾಗೋಣ ಎಂದರು. 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎನ್ನುವ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ತನ್ವೀರ್ ಸೇಠ್ ಅವರಿಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಾವು ಶ್ರಮಿಸಬೇಕು‌.  ಆಗ ಯಾರು ಸಿಎಂ ಆಗ್ತಾರೆ, ಆಗಬೇಕು ಎಂಬುದು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು. 

ಆರ್‌ ಆರ್‌ ನಗರ ಚುನಾವಣೆ ಆರೋಪ : ಇಬ್ಬರ ಬಿಟ್ಟು ಮೂರನೆಯವರಿಗೆ ಆಗುತ್ತಾ ಲಾಭ..?

ಮೈಸೂರಿನಲ್ಲಿ ಜಮೀರ್ ಅಹ್ಮದ್‌ಗೆ ಟಾಂಗ್ ನೀಡಿದ ತನ್ವೀರ್ ಸೇಠ್ ಕೂಸು ಹುಟ್ಟೋಕು ಮುನ್ನ ಗಂಡು ಹುಟ್ಟುತ್ತೆ ಎಂದುಕೊಂಡಿರ್ತಿವಿ. ಆನಂತರ ಹೆಣ್ಣು ಮಗುವಾದ್ರೆ ಏನ್ ಮಾಡಲು ಆಗುತ್ತೆ.  ಹಾಗೆ ಉಪ ಚುನಾವಣೆ ಬಳಿಕ ನಾವು ಅಧಿಕಾರಕ್ಕೆ ಬರ್ತಿವಿ ಅಂತ ಅಂದುಕೊಂಡಿದ್ದೇವೆ ಎಂದು ಹೇಳಿದರು. 

 ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ : ನಾನು ಸಿಎಂ ಆಗಬೇಕು ಎಂಬುದು ನನ್ನ ಆಸೆ. ಹಾಗಂತ ಅದು ಈಡೇರಲೇಬೇಕು ಎಂದು ಏನಿಲ್ಲ.  ಸಿಎಂ ಯಾರು ಆಗಬೇಕೆಂದು ವರಿಷ್ಠರು ನಿರ್ಧಾರ ಮಾಡ್ತಾರೆ.  ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು ಎಂದು ಮಾರ್ಮಿಕ ಹೇಳಿಕೆ ನೀಡಿದರು.

PREV
click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!