ಕೊಡಗು ಪ್ರಕೃತಿ ವಿಕೋಪ ಭವಿಷ್ಯ: ಬ್ರಹ್ಮಾಂಡ ಗುರೂಜಿ ಬಂಧನಕ್ಕೆ ಒತ್ತಾಯ

By Kannadaprabha NewsFirst Published May 27, 2020, 6:04 PM IST
Highlights

ಪ್ರಕೃತಿ ವಿಕೋಪಕ್ಕೆ ಕೊಡಗು ನೆಲ ಸಮವಾಗುತ್ತೆ ಅನ್ನೋ ಬ್ರಹ್ಮಾಂಡ ಗುರುಜಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬ್ರಹ್ಮಾಂಡ ಗುರೂಜಿಯನ್ನು  ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.

ಮಡಿಕೇರಿ(ಮೇ 27): ಪ್ರಕೃತಿ ವಿಕೋಪಕ್ಕೆ ಕೊಡಗು ನೆಲ ಸಮವಾಗುತ್ತೆ ಅನ್ನೋ ಬ್ರಹ್ಮಾಂಡ ಗುರುಜಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬ್ರಹ್ಮಾಂಡ ಗುರೂಜಿಯನ್ನು  ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.

ಬ್ರಹ್ಮಾಂಡ ಗುರೂಜಿ ವಿಜ್ಞಾನಿ ಅಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಆದರೆ ಅದನ್ನ ಯಾರೂ ತಡೆಯಲು ಆಗೋದಿಲ್ಲ‌. ಆಗೋ ಪ್ರಕೃತಿ ವಿಕೋಪವನ್ನ ನಾವು ಎದುರಿಸುತ್ತೇವೆ.
ಅನಾವಶ್ಯಕ ಹೇಳಿಕೆ ಕೊಡುವುದನ್ನ ನಿಲ್ಲಿಸಬೇಕು. ಕೂಡಲೆ ಬ್ರಹ್ಮಾಂಡ ಗುರೂಜಿ ಬಂಧಿಸುವಂತೆ ಕೊಡಗು ರೈತ ಸಂಘ ಒತ್ತಾಯಿಸಿದೆ.

ಬೆಂಗಳೂರು ಪೊಲೀಸರ ನೆರವಿಗೆ ನಿಂತ ಕ್ರಿಕೆಟಿಗ ಅನಿಲ್ ಕುಂಬ್ಳೆ

ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ಬಾರಿ ಭೂಕಂಪದಿಂದ ನೆಲಸಮವಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿರುವುದು ಸಾಮಾಜಿಕ ಜಾಲತಾಣ ಮತ್ತು ಆನ್‌ಲೈನ್‌ ಪ್ರಕಟವಾಗಿದೆ. ಇದು ಜನತೆಯಲ್ಲಿ ತೀವ್ರ ಭಯ ಮೂಡಿಸಿದೆ. ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಹೇಳಿಕೆ ನೀಡಿರುವ ಈ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡಗು ಬೆಳೆಗಾರರ ಒಕ್ಕೂಟ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ.

ಭವಿಷ್ಯ ನುಡಿದಿರುವುದು ಮೇ 25ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದೆ. ಇದು ಕೊಡಗಿನ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸರ್ಕಾರ ನುಡಿದಿರುವ ಭವಿಷ್ಯ ನಂಬುತ್ತದೆ ಎಂದಾದರೇ, ಭಾರಿ ಭೂಕಂಪನ ಯಾವ ತಾರೀಖಿನಂದು, ಎಷ್ಟುಸಮಯಕ್ಕೆ ಆಗುತ್ತದೆ, ಎಷ್ಟುಪ್ರಮಾಣದಲ್ಲಿ ರಿಕ್ಟರ್‌ ಮಾಪಕದಲ್ಲಿ ದಾಖಲಾಗುತ್ತದೆ, ಕೊಡಗಿನ ಯಾವ ಪ್ರದೇಶದಲ್ಲಿ ಇದು ಕೇಂದ್ರೀಕೃತವಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸರ್ಕಾರ ಇದನ್ನು ವೈಜ್ಞಾನಿಕವಾಗಿ ದೃಢೀಕರಿಸುವುದು ಮುಖ್ಯ.

"

ಸರ್ಕಾರ ನಂಬಿದರೆ ಆತಂಕದಲ್ಲಿರುವ ಜನರಿಗೆ ಸುರಕ್ಷಿತ ಜಾಗಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಈಗಾಗಲೇ ಸತತ 2 ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗಿನ ಜನತೆ ಈ ಭವಿಷ್ಯದಿಂದ ಮತ್ತಷ್ಟುಆತಂಕಗೊಂಡಿದ್ದಾರೆ. ಹೇಳಿರುವುದು ಸುಳ್ಳು, ಮೂಢನಂಬಿಕೆ ಎಂದಾದರೆ ಸಮಾಜದಲ್ಲಿ ಆತಂಕ ಸೃಷ್ಟಿಸಲು ಕಾರಣವಾಗಿರುವ ಈ ಸ್ವಯಂಘೋಷಿತ ಬ್ರಹ್ಮಾಂಡ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಬ್ರಹ್ಮಾಂಡ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿ​ಸ​ಲಾ​ಗಿದೆ.

ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಮಚ್ಚು ಬೀಸಿದ್ದ ಪಾಗಲ್‌ ಆತ್ಮಹತ್ಯೆ..!

ದೂರು ನೀಡಿ​ರುವ ಕೊಡಗು ಬೆಳೆಗಾರರ ಒಕ್ಕೂಟ ವಿರಾಜಪೇಟೆ ಡಿವೈಎಸ್ಪಿ ಜಯಕುಮಾರ್‌ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಇದಕ್ಕೂ ಮೊದಲು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‌ ಅಪ್ಪಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿತು. ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‌ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ ದೂರು ಸಲ್ಲಿಸಿದರು.

click me!