ಭಟ್ಕಳ ಕಂಟೈನ್‌ಮೆಂಟ್‌ ಝೋನ್: ಅಗತ್ಯ ವಸ್ತು ಪೋರೈಕೆಗೆ ವ್ಯವಸ್ಥೆ

By Kannadaprabha NewsFirst Published May 12, 2020, 11:30 AM IST
Highlights

ಭಟ್ಕಳ ಕಂಟೈನಮೆಂಟ್‌ ಝೋನ್‌ ಆಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆ ಆಗುವುದಿಲ್ಲ. ಸದ್ಯ ಹೊಸ ಪಾಸ್‌ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

ಉತ್ತರ ಕನ್ನಡ(ಮೇ 12): ಭಟ್ಕಳ ಕಂಟೈನಮೆಂಟ್‌ ಝೋನ್‌ ಆಗಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆ ಆಗುವುದಿಲ್ಲ. ಸದ್ಯ ಹೊಸ ಪಾಸ್‌ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

ಭಟ್ಕಳದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು ಹಳೇ ಪಾಸ್‌ನ್ನೇ ಮುಂದುವರಿಸಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಯಾವುದೇ ರೀತಿಯಲ್ಲಿಯೂ ಜನರಿಗೆ ತೊಂದರೆಯಾಗದಂತೆ ನೊಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ನಾವು ಭಟ್ಕಳದಲ್ಲಿ ಕೋವಿಡ್‌-19ರ ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಿದ್ದೇವೆ ಎಂದ ಅವರು ಅಧಿಕಾರಿಗಳಿಗೆ ಯಾವುದೇ ಜನರಿಗೆ ತೊಂದರೆ ಕೊಡಬೇಕು ಎನ್ನುವ ಉದ್ದೇಶ ಖಂಡಿತ ಇಲ್ಲ. ಜನರ ಆರೋಗ್ಯ ಸರಿ ಇಡಲು ಹಾಗೂ ಜನರ ಒಳಿತಿಗಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ.

Fact Check: ಏರ್‌ ಇಂಡಿಯಾದಲ್ಲಿ 3 ಪಟ್ಟು ಹಣ ವಸೂಲಿ ಮಾಡಲಾಯ್ತಾ?

ಭಟ್ಕಳ ಪಟ್ಟಣವನ್ನು ಸಂಪೂರ್ಣ ಕಂಟೈನ್‌ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ. ನಾವು ಈಗಾಗಲೇ ಎಲ್ಲೆಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆಯೋ ಆ ಪ್ರದೇಶದ ಸಂಪೂರ್ಣ ಮಾರ್ಗಗಳನ್ನು ಮುಚ್ಚಿ ಜನರು ಓಡಾಡುವಂತೆ ಸೀಲ್‌ಡೌನ್‌ ಮಾಡಿದ್ದೇವೆ. ತುರ್ತು ಸಂದರ್ಭದಲ್ಲಿ ಹೊರಹೋಗುವ ಗೇಟ್‌ ಬಳಿಯಲ್ಲಿ ಬಂದು ವಿಷಯ ತಿಳಿಸಿದರೆ ಬಿಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಒಟ್ಟು ಐದು ಹೊರ ಹೋಗುವ ದಾರಿಗಳಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಐದು ದಾರಿಗಳಲ್ಲಿಯೂ ಕೂಡಾ ಪೊಲೀಸ್‌ ಸೆಕ್ಯುರಿಟಿಯೊಂದಿಗೆ ಹೆಲ್ಪ್‌ ಡೆಸ್ಕ್‌ ಸ್ಥಾಪಿಸಲಾಗುವುದು. ತುರ್ತು ಅಗತ್ಯ ಸಂದರ್ಭದಲ್ಲಿ ಅಲ್ಲಿಯೇ ಪಾಸ್‌ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು.

"

ಕಂಟೈನ್‌ಮೆಂಟ್‌ ಜೋನ್‌ನಲ್ಲಿ ಬ್ಯಾಂಕುಗಳು ಬೆಳಗ್ಗೆ 10 ಗಂಟೆಯಿಂದ 2 ಗಂಟೆಯ ತನಕ ಮಾತ್ರ ಕೆಲಸ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಕಂಟೈನ್‌ಮೆಂಟ್‌ ಜೋನ್‌ನಲ್ಲಿರುವ ಸಹಕಾರಿ ಬ್ಯಾಂಕುಗಳು, ಸಂಘಗಳನ್ನು ತೆರೆಯಬೇಕೆ? ಬೇಡವೇ? ಎನ್ನುವ ಕುರಿತು ಇಷ್ಟೆರಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಔಷಧಿ, ದಿನಸಿ, ತರಕಾರಿ, ಹಾಲು ಇತ್ಯಾದಿಗಳನ್ನು ಸರಬರಾಜು ಮಾಡುವ ಕುರಿತು 2-3 ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ವ್ಯಾನ್‌ಗಳಲ್ಲಿ ತೆಗೆದುಕೊಂಡು ಹೋಗಿ ಒಂದೊಂದು ಪ್ರದೇಶದಲ್ಲಿ ನಿಲ್ಲಿಸಿಕೊಂಡು ಮನೆಯಿಂದ ಒಬ್ಬರೇ ಹೊರಬಂದು ಖರೀದಿಸಲು ಅವಕಾಶ ನೀಡುವ ಕುರಿತು ಚಿಂತಿಸಲಾಗಿದೆ.

ಸೋಂಕಿತರಿಗೆ ಆಯಾ ತಾಲೂಕಿನಲ್ಲಿಯೇ ಚಿಕಿತ್ಸೆ..?

ಯಾವುದೇ ವಸ್ತುಗಳು ಬೇಕಾದಲ್ಲಿ ಹೆಲ್ಪ್‌ಲೈನಿಗೆ ಕರೆ ಮಾಡಿದರೆ ನಾಲ್ಕು ತಾಸುಗಳಲ್ಲಿ ಸ್ಥಳಕ್ಕೇ ತಲುಪಿಸಲಾಗುವುದು ಎಂದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವರು ವದಂತಿ ಹಬ್ಬಿಸುವ ಬರಹವನ್ನು ಬರೆಯುತ್ತಿರುವುದು ಇಲಾಖೆ ಗಮನಿಸುತ್ತಿದೆ. ಈಗಾಗಲೇ ಸುಳ್ಳು ವದಂತಿಗಳನ್ನು ಹಬ್ಬಿಸಿದ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅತಿರೇಕದ ಯಾವುದೇ ವರ್ತನೆಗೆ ಕಡಿವಾಣ ಹಾಕಲಾಗುವುದು. ನಾವು ಹಾಕಿದ ಬ್ಯಾರಿಕೇಡ್‌ ತೆಗೆದ ಕುರಿತು ಓರ್ವನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದ ಅವರು, ಯಾರೇ ಆಗಲಿ ಯಾವುದೇ ಕೃತ್ಯ ಎಸಗಿದರೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ಮಸೀದಿಯಲ್ಲಿ ಐವರು ಸೇರಿ ನಮಾಜ್‌ ಮಾಡಲು ಅವಕಾಶವಿದೆಯೇ? ಎಂದು ಪ್ರಶ್ನಿಸಿದಾಗ, ಇದಕ್ಕೆ ಅವಕಾಶವಿಲ್ಲ ಎಂದರಲ್ಲದೇ ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದ ಇಬ್ಬರಿಗೆ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದೂ ತಿಳಿಸಿದರು. ಸಹಾಯಕ ಆಯುಕ್ತ ಭರತ್‌ ಎಸ್‌., ಡಿವೈಎಸ್‌ಪಿ ಗೌತಮ್‌, ತಹಸೀಲ್ದಾರ್‌ ರವಿಚಂದ್ರ, ಸಿಪಿಐ ರಾಮಚಂದ್ರ ನಾಯಕ ಮುಂತಾದವರಿದ್ದರು.

click me!