ರಾಮನಗರ: ರೈಲು ಹೊಡೆತಕ್ಕೆ ಕುರಿಗಳ ಮಾರಣ ಹೋಮ

By Web Desk  |  First Published Dec 23, 2018, 7:19 PM IST

ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ದಾರುಣ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.


ರಾಮನಗರ, [ಡಿ. 23]: ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ಘಟನೆ  ಇಂದು [ಭಾನುವಾರ] ಚನ್ನಪಟ್ಟಣದ ಮುದಗೆರೆ ಸಮೀಪ ನಡೆದಿದೆ.

ಕುರಿಗಳು ಮುದಗೆರೆಯ ದೇಸಿಗೌಡ ಎಂಬವರಿಗೆ ಸೇರಿವೆ. ಕುರಿಗಳು ಹಳಿ ದಾಟುತ್ತಿದ್ದ ವೇಳೆ ದಿಡೀರ್ ಆಗಿ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿವೆ.

Tap to resize

Latest Videos

ರೈಲಿನ ರಭಸದ ಹೊಡೆತಕ್ಕೆ ಕುರಿಗಳ ದೇಹದ ಭಾಗಗಳು ಛಿದ್ರ-ಛಿದ್ರವಾಗಿ ಎಲ್ಲೊಂದರಲ್ಲಿ ಬಿದ್ದಿವೆ.ಕುರಿಗಳ ಮಾರಣಹೋಮದಿಂದ ಲಕ್ಷಾಂತರ ರು. ನಷ್ಟವಾಗಿದ್ದು,  ಮಾಲೀಕ ಮುದಗೆರೆಯ ದೇಸಿಗೌಡಗೆ ದಿಕ್ಕು ತೋಚದಂತಾಗಿದೆ. 

click me!