ಕೊಡಗು: ಅಡಿಕೆ ಕದಿಯಲು ಬಂದವ ಗುಂಡೇಟು ತಿಂದು ಸತ್ತ

By Web Desk  |  First Published Aug 30, 2019, 7:12 PM IST

ಅಡಿಕೆ ಕದಿಯಲು ಬಂದಿದ್ದ ಕಳ್ಳನೊಬ್ಬನ ಮೇಲೆ ಮನೆಯ ಮಾಲೀಕ ಫೖರಿಂಗ್| ಅಡಿಕೆ ಕದಿಯಲು ಬಂದವ ಗುಂಡೇಟು ತಿಂದು ಸತ್ತ|ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ ನಡೆದ ಘಟನೆ.


ಕೊಡಗು, [ಆ.30]: ಅಡಿಕೆ ಕದಿಯಲು ಬಂದಿದ್ದ ಕಳ್ಳನೊಬ್ಬನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ ನಡೆದಿದೆ.

ದೇವಂಗೋಡಿ ನಿವಾಸಿ ಗಣೇಶ್​ ಮೃತಪಟ್ಟವರು. ಮಂಡೇಡಿ ಮೊಣ್ಣಪ್ಪ ಅವರ ಮನೆಯಲ್ಲಿದ್ದ ಅಡಿಕೆ ದಾಸ್ತಾನನ್ನು ಕದಿಯಲು ಗಣೇಶ್​ ಗುರುವಾರ ರಾತ್ರಿ ಬಂದಿದ್ದಾನೆ.

Tap to resize

Latest Videos

ಸದ್ದು ಕೇಳಿ ಹೊರಬಂದ ಮಂಡೇಡಿ ಮೊಣ್ಣಪ್ಪ ಅವರು ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಗುಂಡ ತಲುಗಿ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿಷಯ ತಿಳಿದ ಭಾಗಮಂಡಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

click me!