ಬಾಲ್ಯದ ಮೈಸೂರು ದಸರಾ ಮೆಲುಕು: ಸಚಿವ ಸೋಮಣ್ಣ ಮಾತು ಹೀಗಿತ್ತು

Published : Aug 30, 2019, 05:42 PM ISTUpdated : Aug 30, 2019, 05:48 PM IST
ಬಾಲ್ಯದ ಮೈಸೂರು ದಸರಾ ಮೆಲುಕು: ಸಚಿವ ಸೋಮಣ್ಣ ಮಾತು ಹೀಗಿತ್ತು

ಸಾರಾಂಶ

ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಬಾಲ್ಯದ ದಸರಾ ನೆನಪಿನ ಬುತ್ತಿಯನ್ನು ತೆರೆದಿಟ್ಟಿದ್ದಾರೆ. ಅಂದು ಬಂಡಿಯಲ್ಲಿ ಹೋಗಿದ್ದವರು ಈಗ ಕಾರಿನಲ್ಲಿ ಬಂದಿರುವುದನ್ನು ಮೆಲುಕು ಹಾಕಿದ್ದಾರೆ. ಹಾಗಾದ್ರೆ ಸೋಮಣ್ಣ ಅವರು ಬಾಲ್ಯದ ದಸರಾ ಬಗ್ಗೆ ಏನೆಲ್ಲ?ಅವರ ಬಾಯಿಂದ ಮಾತುಗಳು ಈ ಕೆಳಗಿನಂತಿವೆ.

ಮೈಸೂರು, (ಆ.30):  ನಾನು 6 ವರ್ಷ ಮಗುವಾಗಿದ್ದಾಗ ನಮ್ಮ ತಾಯಿವರು ಎತ್ತಿನಗಾಡಿಯಲ್ಲಿ ಕರೆದುಕೊಂಡು ಬಂದಿದ್ರು. ಆಗ ಜಯಚಾಮರಾಜೇಂದ್ರ ಮಹಾರಾಜರು ಇದ್ರು. ನನಗೀಗ 69 ವರ್ಷ ವಯಸ್ಸಾಗಿದೆ.

ಯಾರಿಗೆ ಗೊತ್ತಿತ್ತು ನಾನು ಇವತ್ತು ದಸರಾ ಉತ್ಸವ ಮಾಡ್ತೀನಿ ಅಂತ. ಇದೊಂದು ನಮ್ಮೆಲ್ಲರಿಗೂ ಸೌಭಾಗ್ಯವಾಗಿದೆ. ಹೀಗೆ ಮೈಸೂರು ದಸರಾ ಉಸ್ತುವಾರಿ ವಹಿಸಿಕೊಂಡಿರುವ ವಸತಿ ಸಚಿವ ವಿ. ಸೋಮಣ್ಣ ಅವರು ಬಾಲ್ಯದಲ್ಲಿ ಮೊದಲ ಬಾರಿಗೆ ದಸರಾ ವೀಕ್ಷಿಸಿದ ಅನುಭವಗಳನ್ನು ಹಂಚಿಕೊಂಡರು.

ದಸರಾ ಆಯೋಜನೆಗೆ ಮೈಸೂರಿನ ಪ್ರತೀ ತಾಲೂಕಿಗೆ 5 ಲಕ್ಷ : ಸಚಿವ ಸೋಮಣ್ಣ

ಇಂದು (ಶುಕ್ರವಾರ) ದಸರಾ ನಿಮಿತ್ತ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಸೋಮಣ್ಣ ಅವರು ಬಾಲ್ಯದ ದಸರಾ ನೆನಪುಗಳನ್ನು ಮೆಲುಕು ಹಾಕಿದರು.

ನಾನು ಕೂಡ ನಿಮ್ಮ ಹಾಗೇ ಮನುಷ್ಯಾನೇ. ಎಲ್ಲರಂತೆ ತಾಯಿ ಗರ್ಭದಿಂದಲೇ ಬಂದಿರುವವನು. ದಸರಾ ಮಹೋತ್ಸವ ಚನ್ನಾಗಿ ಮಾಡೋದು ನಮ್ಮೆಲ್ಲರ ಜವಾಬ್ದಾರಿ. ನಾನು ನಿಮಗೆ ತೊಂದರೆ ಕೊಡ್ತಿದ್ದೀನಿ, ತಾವು ಅಡ್ಜೆಸ್ಟ್ ಮಾಡ್ಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ವಿನಮ್ರವಾಗಿ ಹೇಳಿದರು. 

’ಅನುಭವ ಇದ್ದವರಿಗೆ ದಸರಾ ಉಸ್ತುವಾರಿ ಕೋಡಬೇಕಿತ್ತು’ ರಾಮದಾಸ್ ರಾಂಗ್

ನಾನು ಇರಬಹುದು ಅಥವಾ ಹೋಗಬಹುದು.  ಇಲ್ಲಿ ಯಾರೂ ಕೋಡ ಶಾಶ್ವತ ಅಲ್ಲ.  ನನಗೆ ಆಸಕ್ತಿಯಿಂದ ಚನ್ನಾಗಿ ದಸರಾ ಮಾಡಬೇಕು ಅಂತ ಆಸೆ ಅಷ್ಟೆ. ಅಧಿಕಾರಿಗಳು ಎಲ್ಲರು ಮನಸ್ಸು ಮಾಡಿದ್ರೆ ದಸರಾ ಉತ್ಸವ ಚನ್ನಾಗಿ ಮಾಡಲು ಸಾಧ್ಯ, ದುಡ್ಡಿದ್ರೆ ಮಾತ್ರ ಆಗಲ್ಲ ಎಂದು ಹೇಳಿದರು.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!