ಯಾದಗರಿ: KSRTC ಬಸ್‌ ಪಲ್ಟಿಯಾಗಿ ಚಾಲಕ ಸೇರಿ ಮೂವರು ಪ್ರಯಾಣಿಕರ ದುರ್ಮರಣ

Published : Aug 30, 2019, 06:39 PM IST
ಯಾದಗರಿ: KSRTC ಬಸ್‌ ಪಲ್ಟಿಯಾಗಿ ಚಾಲಕ ಸೇರಿ ಮೂವರು ಪ್ರಯಾಣಿಕರ ದುರ್ಮರಣ

ಸಾರಾಂಶ

ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ಪಲ್ಟಿಯಾಗಿ ಬಸ್‌ ಚಾಲಕ ಸೇರಿ ಮೂವರು ಪ್ರಯಾಣಿಕರ ದುರ್ಮರಣ| ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿ ನಡೆದ ಘಟನೆ. 

ಯಾದಗಿರಿ, [ಆ.30]:  ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು [ಶುಕ್ರವಾರ] ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿ ನಡೆದಿದೆ. 

ಘಟನೆಯಲ್ಲಿ ಬಸ್ ಚಾಲಕ ದೌಲಸಾಬ್ ಸೇರಿ ಮೂವರು ಮೃತಪಟ್ಟಿದ್ದಾರೆ. ಇನ್ನು ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಹಾಪುರ ವಿಭಾಗಕ್ಕೆ ಸೇರಿದ ಈಶಾನ್ಯ ಸಾರಿಗೆ ಬಸ್‌ ಕಲಬುರಗಿಯಿಂದ ಕೆಂಭಾವಿ ಕಡೆ ತೆರಳುತ್ತಿದ್ದ ವೇಳೆ ಇಂದು‌ ಸಂಜೆ‌ ಈ ಅವಘಡ ಸಂಭವಿಸಿದೆ. ಕೆಂಬಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!