ನಾಳೆಯಿಂದ ಕ್ಯಾಂಪ್ಕೋ ಅಡಕೆ ಖರೀದಿ ಮಿತಿ ಏರಿಕೆ, ಒಬ್ಬರಿಗೆ ಎಷ್ಟು ಕ್ವಿಂಟಾಲ್‌..?

By Kannadaprabha NewsFirst Published May 3, 2020, 7:28 AM IST
Highlights

ಲಾಕ್‌ಡೌನ್‌ ಸಮಯದಲ್ಲಿ ಬೆಳೆಗಾರರಿಗೆ ನೆರವಾಗಲು ಅಡಕೆ ಖರೀದಿ ನಡೆಸುತ್ತಿರುವ ಕ್ಯಾಂಪ್ಕೋ ಸಂಸ್ಥೆ, ಇದೀಗ ಗ್ರಾಹಕರು ಮಾರಾಟ ಮಾಡುವ ಮಿತಿಯನ್ನು ಹೆಚ್ಚಿಸಿದೆ. ಇಲ್ಲಿದೆ ಡೀಟೇಲ್ಸ್‌

ಮಂಗಳೂರು(ಮೇ.03): ಲಾಕ್‌ಡೌನ್‌ ಸಮಯದಲ್ಲಿ ಬೆಳೆಗಾರರಿಗೆ ನೆರವಾಗಲು ಅಡಕೆ ಖರೀದಿ ನಡೆಸುತ್ತಿರುವ ಕ್ಯಾಂಪ್ಕೋ ಸಂಸ್ಥೆ, ಇದೀಗ ಗ್ರಾಹಕರು ಮಾರಾಟ ಮಾಡುವ ಮಿತಿಯನ್ನು 1 ಕ್ವಿಂಟಾಲ್‌ನಿಂದ 4 ಕ್ವಿಂಟಾಲ್‌ ವರೆಗೆ ಹೆಚ್ಚಿಸಿದೆ.

ಇದು ಮೇ 4ರಿಂದ ಜಾರಿಗೆ ಬರಲಿದೆ. ಕಳೆದ ಮೂರು ವಾರದ ಹಿಂದೆ ಕ್ಯಾಂಪ್ಕೋ ಲಾಕ್‌ಡೌನ್‌ ಅವಧಿಯಲ್ಲಿ 1 ಕ್ವಿಂಟಾಲ್‌ ಮಿತಿಯಲ್ಲಿ ಅಡಕೆ ಖರೀದಿ ನಡೆಸುತ್ತಿತ್ತು. ಅದನ್ನು ಈಗ 2ರಿಂದ 5 ಕ್ವಿಂಟಾಲ್‌ ವರೆಗೆ ಒಬ್ಬ ಬೆಳೆಗಾರ ಅಡಕೆಯನ್ನು ಮಾರಾಟ ಮಾಡಬಹುದು.

ಹೊರ ಜಿಲ್ಲೆ, ರಾಜ್ಯಕ್ಕೆ ಪ್ರಯಾಣಿಸ್ತೀರಾ..? ಹೀಗಿದೆ ಮಾರ್ಗಸೂಚಿ

ಗ್ರಾಹಕರು ಹಿಂದಿನಂತೆ ಮೊದಲೇ ಕೂಪನ್‌ ಪಡೆದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್‌ ಧರಿಸಿ ಕ್ಯಾಂಪ್ಕೋ ಮಾರಾಟ ಮಳಿಗೆಗೆ ಆಗಮಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

click me!