
ಬೆಳಗಾವಿ: 2010ರ ಮೇ 23ಕ್ಕೂ ಮುಂಚೆ ನೇಮಕಗೊಂಡು ಸೇವೆಯಲ್ಲಿರುವ ಲಕ್ಷಾಂತರ ಶಿಕ್ಷಕರನ್ನು ಟಿಇಟಿ ಪರೀಕ್ಷೆಯಿಂದ ವಿನಾಯತಿ ನೀಡಿ ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ವತಿಯಿಂದ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಸುಪ್ರೀಂಕೋರ್ಟ್ ಮೇ 29, 2026ರಂದು ನೀಡಿದ ತೀರ್ಪು 2010ರ ಮೇ 23ಕ್ಕೂ ಮುಂಚೆ ನೇಮಕವಾಗಿರುವ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಬಾರದು. 2010ರ ಮೇ 23ರ ಎನ್‌ಸಿಟಿಇ ನಿಯಮಾವಳಿ ಪ್ರಕಾರ ನೇಮಕಗೊಂಡ ಶಿಕ್ಷಕರಿಗೆ ಖಾಯಂ ಕಡ್ಡಾಯ ಅಗತ್ಯತೆಯಿಂದ ವಿನಾಯತಿ ನೀಡಿರುವುದು ಸಮರ್ಥನೀಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
ಈ ತೀರ್ಪು ಹಿಂದಿನಿಂದಲೇ ಜಾರಿಯಾದರೇ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಶಿಕ್ಷಕರ ಸೇವೆಗೆ ಕುತ್ತು ಬರಲಿದೆ. ಅವರ ಕುಟುಂಬ ಜೀವನ, ಪಾಲನೆ ಮತ್ತು ಶಿಕ್ಷಕರ ನೈತಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಸೇವಾ ಹಕ್ಕುಗಳು, ಹಿರಿತನ, ಬಡ್ತಿ ನಿರೀಕ್ಷೆಗಳು ಮತ್ತು ಇತರ ಕಾನೂನುಬದ್ಧ ಪ್ರಯೋಜನಗಳನ್ನು ರಕ್ಷಿಸಲು ಅಗತ್ಯವಾದ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಚಂದಾನಂದ ಎಚ್.ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
2010ರ ಮೇ 23ಕ್ಕೂ ಮುಂಚೆ ನೇಮಕಗೊಂಡು ಸೇವೆಯಲ್ಲಿರುವ ಲಕ್ಷಾಂತರ ಶಿಕ್ಷಕರನ್ನು ಟಿಇಟಿ ಪರೀಕ್ಷೆಯಿಂದ ವಿನಾಯತಿ ನೀಡಿ ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ವತಿಯಿಂದ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.