ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕಗೊಂಡ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆವರು ಚಿಕ್ಕಮಗಳೂರು ತಾಲ್ಲೂಕಿನ ದತ್ತಪೀಠಕ್ಕೆ ಭೇಟಿ ನೀಡಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.28) : ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕಗೊಂಡ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆವರು ಚಿಕ್ಕಮಗಳೂರು ತಾಲ್ಲೂಕಿನ ದತ್ತಪೀಠಕ್ಕೆ ಭೇಟಿ ನೀಡಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದರು.
ದತ್ತಪೀಠ(Dattapeetha)ಕ್ಕೆ ಹಿಂದೂ ಅರ್ಚಕರ ನೇಮಕವಾಗಬೇಕು, ಶೋಭಾಯಾತ್ರೆ ಮೆರವಣಿಗೆಯಲ್ಲಿ ದತ್ತಾತ್ರೇಯರ ಮೂರ್ತಿ ಕೊಂಡೊಯ್ಯಲು ಅನುಮತಿ ಸಿಗುವವರೆಗೆ ಕೇಶಮುಂಡನ ಹಾಗೂ ಗಡ್ಡ ತೆಗೆಸುವುದಿಲ್ಲ ಎಂದು ಅವರು ಸಂಕಲ್ಪ ಮಾಡಿದ್ದರು. ಇದೀಗ ಈ ಎರಡೂ ಕೋರಿಕೆಗಳು ಈಡೇರಿರುವ ಹಿನ್ನೆಲೆಯಲ್ಲಿ ಪೀಠಕ್ಕೆ ಭೇಟಿ ನೀಡಿದ ಅವರು, ದತ್ತಪೀಠದ ಆವರಣದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ತಾತ್ಕಾಲಿಕ ಶೆಡ್ ಸಮೀಪ ಕೇಶಮುಂಡನ ಮಾಡಿಸುವ ಮೂಲಕ ಹರಕೆ ತೀರಿಸಿದರು.
Chikkamagalauru: ದತ್ತಪೀಠಕ್ಕೆ ಹಿಂದೂ ಆರ್ಚಕರ ನೇಮಕ ಬಳಿಕ ಪ್ರಮೋದ್ ಮುತಾಲಿಕ್ ಮೊದಲ ಭೇಟಿ
ನಂತರ ಪೀಠಕ್ಕೆ ತೆರಳಿ ದತ್ತಪಾದುಕೆಗಗೆ ವಿಶೇಷ ಪೂಜೆ ಸಲ್ಲಿಸಿದರು.ಅವರೊಂದಿಗೆ ದತ್ತಾಶ್ರಯದ ಅರ್ಚಕರಾದ ರಾಜೇಂದ್ರ ಕುಮಾರ್, ಸಮಸ್ತ ವಿಶ್ವಧರ್ಮ ಸಂಸ್ಥಾನಂದ ಸಂಜೀತ್ ಸುವರ್ಣ, ಜಿಲ್ಲಾಧ್ಯಕ್ಷ ರಂಜೀತ್, ದುರ್ಗಾಸೇನಾ ತಾ.ಅಧ್ಯಕ್ಷೆ ನವೀನಾ, ಅರೆನೂರು ಸುಪ್ರಿತ್, ಅಭಿಜಿತ್, ಶರತ್ ಸೇರಿದಂತೆ ಚಿಕ್ಕಮಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಭಾಗಿಯಾದರು.
ಸನಾತನ ಧರ್ಮಕ್ಕೆ ಸಿಕ್ಕ ವಿಜಯ; ಸಂಕಲ್ಪ ಪೂರ್ಣ :
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಗಂಗಾಧರ ಕುಲಕರ್ಣಿ(Gangadhar kulkarni), ಮೂರು ವರ್ಷದ ಹಿಂದೆ 2019ರಲ್ಲಿ ದತ್ತಮಾಲಾ ಅಭಿಯಾ(Dattamala campaign)ನದ ಸಂದರ್ಭದಲ್ಲಿ ದತ್ತಾತ್ರೇಯರ ವಿಗ್ರಹವನ್ನು ತಂದಿದ್ದೆವು. ಅದನ್ನು ಶೋಭಾಯಾತ್ರೆಗೆ ಕೊಂಡೊಯ್ಯಲು ಅವಕಾಶ ಕೊಡಲಿಲ್ಲ. ಈ ಕಾರಣಕ್ಕೆ ಎಲ್ಲಿವರೆಗೆ ವಿಗ್ರಹ ಮೆರವಣಿಗೆಗೆ ಅವಕಾಶ ಸಿಗುವುದಿಲ್ಲವೋ ಹಾಗೂ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗುವುದಿಲ್ಲವೋ ಅಲ್ಲಿವರೆಗೆ ಕೇಶಮುಂಡನ ಮಾಡಬಾರದೆಂದು ಸಂಕಲ್ಪ ಮಾಡಿದ್ದೆವು. ಇದೀಗ ಭಗವಂತನ ಪ್ರೇರಣೆಯಿಂದಾಗಿ ಎರಡೂ ಕೋರಿಕೆಗಳು ಈಡೇರಿವೆ. ಈ ಹಿನ್ನೆಲೆಯಲ್ಲಿ ಕೇಶಮುಂಡನ ಮಾಡಿ ಹರಕೆ ತೀರಿಸಿದ್ದೇನೆ ಎಂದರು.
ಸಂಕಲ್ಪ ಮಾಡಿ ನಾಲ್ಕು ವರ್ಷದ ನಂತರ ನ್ಯಾಯಾಂಗ, ಸರ್ಕಾರದ ಸಹಕಾರಗಳಿಂದಾಗಿ ಅರ್ಚಕರ ನೇಮಕವಾಗಿದೆ. ಈ ಹೋರಾಟದ ನಿಮಿತ್ತ ಕೊರೋನ(Covid-19) ಸಂದರ್ಭದಲ್ಲಿ ಒಂದು ಕೋಟಿ ಶ್ರೀಗುರು ದೇವ ದತ್ತ ಎನ್ನುವ ಜಪವನ್ನೂ ಮಾಡಿಸಿದ್ದೆವು. ಹೋರಾಟದ ಜೊತೆಗೆ ಆಧ್ಯಾತ್ಮದ ಮುಖಾಂತರವೂ ಇದಕ್ಕೆ ಏನಾದರೂ ಆಗಬೇಕಿದೆ ಎಂದು ಸ್ವಪ್ನವಾಗಿತ್ತು. ಆ ಹಿನ್ನೆಲೆಯಲ್ಲಿ ಐದು ಗುರುವಾರ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿ ಅದನ್ನೇ ಊಟ ಮಾಡಿದ್ದೆವು ಎಂದರು.
ಈ ರೀತಿ ದತ್ತಪೀಠದ ಶಕ್ತಿ ಎಷ್ಟಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಜೀವಿತ ಕಾಲದಲ್ಲೇ ಅರ್ಚಕರ ನೇಮಕವಾಗಿ ಪೂಜೆ, ಪುನಸ್ಕಾರ ನಡೆದಿದೆ. ಇದೊಂದು ಸನಾತನ ಧರ್ಮ(Sanatana dharma)ಕ್ಕೆ ಸಿಕ್ಕಂತ ವಿಜಯ, ಸಂಕಲ್ಪ ಪೂರ್ಣವಾಗಿದ್ದಕ್ಕೆ ಸಂತೃಪ್ತಿಯೂ ಉಂಟಾಗಿದೆ ಎಂದರು.
ನೂರಕ್ಕೆ ನೂರು ಇಷ್ಟಾರ್ಥ ಪೂರ್ಣ : ಮುತಾಲಿಕ್
ದತ್ತಪೀಠಕ್ಕೆ ಬಂದು ಮುಡಿ ಕೊಟ್ಟಲ್ಲಿ ನೂರಕ್ಕೆ ನೂರು ಇಷ್ಟಾರ್ಥ ಪೂರ್ಣಗೊಳ್ಳುತ್ತದೆ ಎಂದು ಶ್ರೀರಾಮಸೇನೆ(Sriram sene) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Mutalik) ಹೇಳಿದರು. ಹಿಂದೂ ಅರ್ಚಕರ ನೇಮಕವಾದ ಹಿನ್ನೆಲೆಯಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಪೀಠದಲ್ಲಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ ಸಂದರ್ಭದಲ್ಲಿ ಹಾಜರಿದ್ದ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದೂಗಳು ಮಕ್ಕಳಾಗದಿರುವುದು, ಯಾವುದೇ ರೀತಿಯ ರೋಗ ರುಜಿನಗಳಿಂದ ತೊಂದರೆ ಇರಬಹುದು, ಹಣಕಾಸಿನ ಸಮಸ್ಯೆ ಯಾವುದಿದ್ದರೂ ಇಲ್ಲಿ ಬಂದು ಹರಕೆ ಮಾಡಿಕೊಂಡಲ್ಲಿ ಕೋರಿಕೆಗಳು ಈಡೇರುತ್ತವೆ ಎಂದರು.
ದತ್ತಪೀಠಕ್ಕೆ ಮುಕ್ತಿ ಸಿಗಬೇಕು ಎನ್ನುವ ಕಾರಣಕ್ಕೆ ಗಂಗಾಧರ ಕುಲಕರ್ಣಿ ಅವರು ಕೇಶಮುಂಡನ ಮಾಡಿರಲಿಲ್ಲ. ನಮ್ಮ ಧರ್ಮದ ನಮ್ಮ ಆಸೆ, ಆಕಾಂಕ್ಷೆ ಪೂರೈಸಲು ತಿರುಪತಿ(Tirupati temple) ಸೇರಿದಂತೆ ಹಲವು ಕ್ಷೇತ್ರಗಳಿಗೆ ತೆರಳಿ ಸಂಕಲ್ಪ ತೊಡುತ್ತೇವೆ. ಹಾಗೆ ಹಿಂದೂಗಳಿಗೆ ಹಿತವಾಗಬೇಕು, ಹಿಂದೂಗಳ ಪೀಠವಾಗಬೇಕು ಎನ್ನುವ ದೃಷ್ಠಿಕೋನದಿಂದ ಸಂಕಲ್ಪ ಮಾಡಿದ್ದರು. ಇಂದು ಅದು ಪೂರ್ಣಗೊಂಡಿದೆ ಎಂದರು.
Chikkamagaluru: ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ರಥೋತ್ಸವಕ್ಕೂ ಮುನ್ನವೇ ಧರ್ಮ ದಂಗಲ್
ಶಾಸ್ತ್ರೋಕ್ತವಾಗಿ ಇಂದು ಕೂಡ ಪೂಜೆ ಆಗಿದೆ. ಇದು ಅತ್ಯಂತ ಆನಂದದ ಸಂಗತಿ, ಇನ್ನು ಮುಂದಿನ ದಿನಗಳಲ್ಲೂ ನಿಶ್ಚಿತವಾಗಿ ಸಂಪೂರ್ಣವಾಗಿ ದತ್ತಪೀಠ ಹಿಂದೂಗಳ ಪೀಠ ಆಗಲಿದೆ. ಧಾರ್ಮಿಕ ದತ್ತಿ ಇಲಾಖೆಯ(Hindu Religious and Charitable Endowments Department) ದೇವಸ್ಥಾನ ಕಟ್ಟಡದ ಸುತ್ತ ಮುತ್ತ ಯಾವುದೇ ನಾಸ್ತಿಕವಾದಿ ಹಾಗೂ ಹಿಂದುಯೇತರ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಪ್ರವೇಶ ಕೊಡುವಂತಿಲ್ಲ. ಟೆಂಡರ್ ಕೊಡುವಂತಿಲ್ಲ, ಮಾರಾಟದ ವ್ಯವಸ್ಥೆ ಮಾಡುವಂತಿಲ್ಲ. ಇಂದು ಇಲ್ಲಿ ಅಂಗಡಿಗಳೆಲ್ಲಾ ಅವರದ್ದೇ ಇದೆ. ಇದೆಲ್ಲವನ್ನೂ ಧಾರ್ಮಿಕ ದತ್ತಿ ಇಲಾಖೆ ಕಾನೂನು ಆಧಾರದ ಮೇಲೇ ತೆಗೆಯಬೇಕು ಎಂದು ಒತ್ತಾಯಿಸಿದರು.