ಕಾಂಗ್ರೆಸ್ ಪಕ್ಷದಿಂದ ಉಪ ಚುನಾವಣೆಗೆ ಅರ್ಜಿ

By Kannadaprabha News  |  First Published Dec 10, 2023, 8:26 AM IST

ನಗರಸಭೆ 9ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಛೆವುಳ್ಳ ಆಕಾಂಕ್ಷಿಗಳು ತಮ್ಮ ಸ್ವವಿವರಗಳೊಂದಿಗೆ ಸೋಮವಾರ ಸಂಜೆ ೫ ಗಂಟೆಯೊಳಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅರ್ಜಿ ಸಲ್ಲಿಸುವಂತೆ ತಾ. ಕಾಂಗ್ರೆಸ್ ಸಮಿತಿ ತಿಳಿಸಿದೆ.


ಶಿರಾ:  ನಗರಸಭೆ 9ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಛೆವುಳ್ಳ ಆಕಾಂಕ್ಷಿಗಳು ತಮ್ಮ ಸ್ವವಿವರಗಳೊಂದಿಗೆ ಸೋಮವಾರ ಸಂಜೆ ೫ ಗಂಟೆಯೊಳಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅರ್ಜಿ ಸಲ್ಲಿಸುವಂತೆ ತಾ. ಕಾಂಗ್ರೆಸ್ ಸಮಿತಿ ತಿಳಿಸಿದೆ.

ಅರ್ಜಿ ಸಲ್ಲಿಸುವವರು ತಮ್ಮ ಸ್ವವಿವರಗಳ ಅರ್ಜಿ ಹಾಗೂ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಬೆಂಗಳೂರು ಇವರ ಹೆಸರಿನಲ್ಲಿ 6000 ರು. ಡಿ.ಡಿ ಲಗತ್ತಿಸಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಿ.ಆರ್.ಮಂಜುನಾಥ್, ನಗರ ಅಧ್ಯಕ್ಷರು, ಶಿರಾ ಬ್ಲಾಕ್ ಕಾಂಗ್ರೆಸ್ ಸಮಿತಿ ಮೊ: ದೂ.ಸಂ: 9739386776 ಹಾಗೂ ನಟರಾಜ್ ಬರಗೂರು, ಗ್ರಾಮಾಂತರ ಅಧ್ಯಕ್ಷರು, ಶಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ದೂ.ಸಂ: 9740320403 ಸಂಪರ್ಕಿಸುವಂತೆ ತಿಳಿಸಿದ್ದಾರೆ.

Tap to resize

Latest Videos

undefined

ಲೋಕ ಚುನಾವಣೆಗೆ ಪ್ಲಾನ್

ನವದೆಹಲಿ (ಡಿಸೆಂಬರ್ 10, 2023): ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಸೋಲನ್ನಪ್ಪಿದ್ದ ಕಾಂಗ್ರೆಸ್‌, ರಾಜಸ್ಥಾನ ಮತ್ತು ಮಿಜೋರಾಂ ರಾಜ್ಯಗಳ ಸೋಲಿನ ಕುರಿತು ಶನಿವಾರ ಪರಾಮರ್ಶೆ ನಡೆಸಿದೆ. ಈ ವೇಳೆ ಈ ರಾಜ್ಯಗಳಲ್ಲಿ ಸೋತರೂ, ಗೆದ್ದವರು ಮತ್ತು ಸೋತವರ ನಡುವಿನ ಮತಗಳ ಅಂತರ ಬಹಳವಿಲ್ಲ ಎಂಬುದನ್ನು ಪ್ರಮುಖವಾಗಿ ಗಮನಿಸಿರುವ ಪಕ್ಷ, ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದೆ.

ಶನಿವಾರ ಇಲ್ಲಿ ರಾಜಸ್ಥಾನ ಮತ್ತು ಮಿಜೋರಾಂ ರಾಜ್ಯಗಳ ಪಕ್ಷದ ಹಿರಿಯರ ನಾಯಕರ ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಈ ರಾಜ್ಯಗಳಲ್ಲಿನ ಕಾಂಗ್ರೆಸ್‌ ಉಸ್ತುವಾರಿಗಳು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನು ಓದಿ: ಚುನಾವಣೆ ಗೆಲ್ಲಲು ಜನರ ಹೃದಯ ಗೆಲ್ಲಬೇಕು: ಪ್ರಧಾನಿ ಮೋದಿ

ಉಭಯ ರಾಜ್ಯಗಳಲ್ಲಿ ಸೋಲಿಗೆ ಕಾರಣರಾದವರನ್ನು ಹೊಣೆ ಮಾಡುವ ನಿರ್ಧಾರವನ್ನು ಸಭೆ ತೆಗೆದುಕೊಂಡಿತಾದರೂ, ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಮತಗಳ ಅಂತರ ಬಹಳ ಹೆಚ್ಚಿಲ್ಲ. ಬಹಳ ಕಡೆ ಅತ್ಯಂತ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿದ್ದಾರೆ. 

ಜೊತೆಗೆ ಅಧಿಕಾರದಲ್ಲಿದ್ದಾಗಲೇ ನಡೆದ ಚುನಾವಣೆಯಲ್ಲಿ ಹಿಂದೆ ಯಾವುದೇ ಸಮಯಕ್ಕಿಂತ ಹೆಚ್ಚಿನ ಸ್ಥಾನಗಳು ಈ ಬಾರಿ ಲಭಿಸಿವೆ ಎಂಬ ಅಂಶವನ್ನು ರಾಜ್ಯದ ಕಾಂಗ್ರೆಸ್‌ ನಾಯಕರು ಸಭೆಯ ಗಮನಕ್ಕೆ ತಂದರು. ಅಲ್ಲದೆ ಲೋಕಸಭಾ ಚುನಾವಣೆಗೆ ಈಗಿನಿಂದಲೂ ಸಜ್ಜಾಗಿ ಗೆಲುವಿಗೆ ಶ್ರಮಿಸುವ ಭರವಸೆಯನ್ನು ರಾಜ್ಯ ನಾಯಕರು ಸಭೆಗೆ ನೀಡಿದರು ಎಂದು ಎಂದು ಪಕ್ಷದ ರಾಜಸ್ಥಾನ ಪ್ರಭಾರಿ ಸುಖಜಿಂದರ್‌ ಸಿಂಗ್‌ ರಂಧಾವಾ ಹೇಳಿದ್ದಾರೆ.

ಕಂತೆ ಕಂತೆ ನೋಟು ಸಿಕ್ಕಿದ್ದೇ ತಡ, ಧೀರಜ್‌ ಸಾಹು ಬ್ಯುಸಿನೆಸ್‌ ಗೊತ್ತೇ ಇಲ್ಲ ಎಂದ ಕಾಂಗ್ರೆಸ್‌!

ಬಿಜೆಪಿಗಿಂತ 10 ಲಕ್ಷ ಮತ ಮಾತ್ರ ಕಮ್ಮಿ:
ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯ ವೇಳೆ 5 ರಾಜ್ಯಗಳಲ್ಲಿ ಬಿಜೆಪಿ ಒಟ್ಟು 4,92,15,575 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ 4,81,64,849 ಮತ ಪಡೆದಿತ್ತು. ಅಂದರೆ ಎರಡೂ ಪಕ್ಷಗಳು ಪಡೆದ ಮತಗಳ ನಡುವಿನ ಅಂತರ ಕೇವಲ 10 ಲಕ್ಷ. ರಾಜಸ್ಥಾನದಲ್ಲಿ ಬಿಜೆಪಿ ಶೇ. 41.69 ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‌ 39.53 ರಷ್ಟು ಮತ ಪಡೆದಿತ್ತು. ಮಿಜೋರಾಂನಲ್ಲಿ ಬಿಜೆಪಿ ಶೇ. 5.06 ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‌ ಶೇ. 20.82 ರಷ್ಟು ಮತ ಪಡೆದಿತ್ತು.

click me!