ಬೆಂಗಳೂರು (ಮೇ.14): ನಾನು ಮೈಸೂರಿಗೆ ಬಂದ ದಿನದಿಂದ ನನ್ನ ಮೇಲೆ ಒಂದಿಲ್ಲೊಂದು ಆರೋಪ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿದವರು ಕ್ಷಮೆ ಕೇಳಲಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಜಿ ಕಾರ್ಪೋರೇಟರ್, ಶಾಸಕರ ಟೀಕೆಗಳಿಗೆ ಪ್ರತಿಕ್ರಿಯೆ ಕೇಳಬೇಡಿ. ಪ್ರತಿಯೊಂದಕ್ಕೂ ಉತ್ತರ ಕೊಡುತ್ತಾ ಕೂರುವ ಸಮಯವಲ್ಲ. ನಾನು ಮೈಸೂರಿಗೆ ಬಂದ ದಿನದಿಂದಲೂ ಪರ್ಸನಲ್ ಆರೋಪ ಮಾಡುತ್ತಿದ್ದಾರೆ. ದೇಶಸೇವೆಗಾಗಿ ನಾವು ಕೆಲಸಕ್ಕೆ ಸೇರಿದ್ದೇವೆ ಎಂದು ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದರು.
ಚಾಮರಾಜನಗರ ಆಕ್ಸಿಜನ್ ದುರಂತ : ಮೈಸೂರು ಡೀಸಿಗೆ ಕ್ಲೀನ್ ಚಿಟ್ ..
ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಜೀವ ರಕ್ಷಣೆ ಸಾಧ್ಯ. ಕಲಬೇಡ, ಕೊಲಬೇಡ ಎಂಬ ಬಸವಣ್ಣನ ವಚನ ಎಲ್ಲರೂ ಮಾರ್ಗಸೂಚಿಯಾಗಿ ಸ್ವೀಕರಿಸಬೇಕು. ನಾಡದೇವತೆ ಚಾಮುಂಡೇಶ್ವರಿ ಸ್ವಲ್ಪ ಕಷ್ಟ ಸಾಧ್ಯವಾದರೂ ಒಳ್ಳೆ ಬುದ್ದಿ ಕೊಡಲಿ ಎಂದು ಜಿಲ್ಲಾಧಿಕಾರಿ ರೋಹಿಣಿ ಹೇಳಿದರು.
ಈ ಟೈಮಲ್ಲಿ ಮೋಜು-ಮಸ್ತಿ ಬೇಕಿತ್ತಾ : DC ರೋಹಿಣಿ ವಿರುದ್ಧ ಮತ್ತೊಂದು ಆರೋಪ ...
ಕ್ಷಮೆ ಕೇಳಬೇಕು : ಚಾಮರಾಜನಗರದಲ್ಲಿ ಮೇ 2 ರಂದು ಸಂಭವಿಸಿದ ಆಕ್ಸಿಜನ್ ದುರಂತದ ವಿಚಾರವಾಗಿ ಮೈಸೂರಿಗೆ ಕಳಂಕ ತರಲು ಮುಂದಾಗಿದ್ದರು. ಆದರೆ ನಾವು ಆರೋಪದಿಂದ ಮುಕ್ತರಾಗಿದ್ದೇವೆ. ಯಾರು ಅದಕ್ಕೆ ಪ್ರಯತ್ನಿಸಿದ್ದರೂ ಅವರೆಲ್ಲಾ ಮೈಸೂರು ಜನರ ಕ್ಷಮೆ ಕೇಳಬೇಕು. ನಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಮತ್ತು ಆಧಾರ ರಹಿತ. ಸರ್ಕಾರ ಕೇಳಿದ ಎಲ್ಲ ಮಾಹಿತಿ ನೀಡಿದ್ದೇವೆ ಎಂದರು.
ನಾನು ಮೈಸೂರಿಗೆ ಬಂದ ದಿನದಿಂದ ನನ್ನ ಮೇಲೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಟ್ಟಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona