ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ನನ್ನ ಸಂಬಳ ಅರ್ಪಣೆ: ಬಿಜೆಪಿ ಶಾಸಕ ಸತೀಶ್ ರೆಡ್ಡಿ

By Suvarna News  |  First Published May 14, 2021, 12:42 PM IST

* ಹೊಂಗಸಂದ್ರದಲ್ಲಿ 50 ಹಾಸಿಗೆಗಳ ಕೋವಿಡ್‌ ಕೇರ್ ಸೆಂಟರ್ ಉದ್ಘಾಟಿಸಿದ ಸತೀಶ್ ರೆಡ್ಡಿ 
* ಇನ್ನೆರೆಡು ದಿನಗಳಲ್ಲಿ 200 ಹಾಸಿಗೆಗಳ ಕೋವಿಡ್‌ ಕೇರ್ ಸೆಂಟರ್ ಸ್ಥಾಪನೆ
* ಕೊರೋನಾದಿಂದ ಮೃತರ ಕುಟುಂಬಳಿಗೆ ಸಹಾಯಹಸ್ತ ಚಾಚಿಸಿ ಬಿಜೆಪಿ ಶಾಸಕ


ಬೆಂಗಳೂರು(ಮೇ.14): ಮಹಾಮಾರಿ ಕೊರೋನಾ ವೈರಸ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸಂಬಳ ಅರ್ಪಿಸುವುದಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಸತೀಶ್ ರೆಡ್ಡಿ ಘೋಷಿಸಿದ್ದಾರೆ. 

Latest Videos

undefined

ಇಂದು(ಶುಕ್ರವಾರ) ಬೊಮ್ಮನಹಳ್ಳಿ ಕ್ಷೇತ್ರದ ಹೊಂಗಸಂದ್ರದಲ್ಲಿ 50 ಹಾಸಿಗೆಗಳ ಕೋವಿಡ್‌ ಕೇರ್ ಸೆಂಟರ್ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕುಟುಂಬದ ಆಧಾರಸ್ತಂಭವಾಗಿದ್ದ ಸುಮಾರು 25 ಬಡ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಹೀಗಾಗಿ ಮೃತರ ಕುಟುಂಬಳಿಗೆ ಸಹಾಯ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

"

ನನ್ನ 3 ತಿಂಗಳ ಸಂಬಳ ಆಶಾ ಕಾರ್ಯಕರ್ತೆಯರಿಗೆ: ಶಾಸಕ ಗಣೇಶ್ ಹುಕ್ಕೇರಿ

ಇದೇ ಸಂದರ್ಭದಲ್ಲಿ ಸ್ಪೂರ್ತಿ ಸ್ವಯಂಸೇವಾ ಸಂಸ್ಥೆ ಮತ್ತು ಶಾಸಕ ಸತೀಶ್ ರೆಡ್ಡಿ ವಾಲೇಂಟರಿ‌ ತಂಡದಿಂದ 8 ಆಟೋಗಳು ಮತ್ತು ಒಂದು ಆಂಬುಲೆನ್ಸ್‌ ಉದ್ಘಾಟಿಸಲಾಯಿತು.

ಆಟೋಗಳು ಹಾಗೂ ಆಂಬುಲೆನ್ಸ್‌  ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗಳಿಗೆ ಮತ್ತು ಮನೆಗಳಿಗೆ ಬಿಡಲು ಬಳಸಲಾಗುವುದು. ಇನ್ನೆರೆಡು ದಿನಗಳಲ್ಲಿ ಇನ್ನೂ 200 ಹಾಸಿಗೆಗಳ ಕೋವಿಡ್‌ ಕೇರ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಜಂಟಿ ಅಯುಕ್ತ ರಾಮಕೃಷ್ಣಪ್ಪ ಹಾಜರಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!