ಸಾವಿನಂಚಿನಿಂದ ವ್ಯಕ್ತಿಯನ್ನು ಕಾಪಾಡಿದ ಅಪೋಲೊ ಆಸ್ಪತ್ರೆ

By Kannadaprabha News  |  First Published Dec 4, 2019, 11:38 AM IST

ನಂಜನಗೂಡಿನ ಅಪೋಲೊ ತುರ್ತು ಆರೈಕೆ ಕೇಂದ್ರ ಇತ್ತೀಚೆಗೆ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಅಂಚಿನಲ್ಲಿದ್ದ 53 ವರ್ಷದ ವ್ಯಕ್ತಿಯನ್ನು ಕಾಪಾಡಿದೆ. ನಂಜನಗೂಡಿನ ಅಪೋಲೊ ತುರ್ತು ಆರೈಕೆ ಕೇಂದ್ರಕ್ಕೆ ಹೃದಯದ ಸಮಸ್ಯೆಯಿಂದ ನ.23 ರಂದು ದಾಖಲಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.


ಮೈಸೂರು(ಡಿ.05): ನಂಜನಗೂಡಿನ ಅಪೋಲೊ ತುರ್ತು ಆರೈಕೆ ಕೇಂದ್ರ ಇತ್ತೀಚೆಗೆ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಅಂಚಿನಲ್ಲಿದ್ದ 53 ವರ್ಷದ ವ್ಯಕ್ತಿಯನ್ನು ಕಾಪಾಡಿದೆ.

ನಂಜನಗೂಡಿನ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹೆಡ್‌ ಕ್ಯಾಷಿಯರ್‌ ಆಗಿರುವ ಸಂಗಮೇಶ್‌ (ಹೆಸರು ಬದಲಾಯಿಸಲಾಗಿದೆ) ಎಂಬವರು ನಂಜನಗೂಡಿನ ಅಪೋಲೊ ತುರ್ತು ಆರೈಕೆ ಕೇಂದ್ರಕ್ಕೆ ಹೃದಯದ ಸಮಸ್ಯೆಯಿಂದ ನ.23 ರಂದು ದಾಖಲಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆರಂಭಿಕ ತನಿಖೆಗಳು ಮಯೋಕಾರ್ಡಿಯಲ್‌ ಇನ್ಫಾರಾಕ್ಷನ್‌ ಬದಲಾವಣೆಗಳೊಂದಿಗೆ ಅಸಹಜ ಇಸಿಜಿಯನ್ನು ತೋರಿಸಿದವು.

Latest Videos

undefined

ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಮೈಸೂರಿನ ಅಪೋಲೊ ಬಿಜಿಎಸ್‌ ಆಸ್ಪತ್ರೆಗೆ ತೆರಳಲು ಆಂಬ್ಯುಲೆನ್ಸ್‌ ಅವರನ್ನು ಸ್ಥಳಾಂತರಿಸುತ್ತಿದ್ದಾಗ, ಅವರು ತೀವ್ರ ಹೃದಯ ಸ್ತಂಭನಕ್ಕೆ ಒಳಗಾದರು. ಹೀಗಾಗಿ, ಕೇಂದ್ರದಲ್ಲಿ ಡಾ. ನಿರಂಜಿನಿ ನೇತೃತ್ವದ ತುರ್ತು ಆರೈಕೆ ತಜ್ಞರ ತಂಡವು ತಕ್ಷಣವೇ ರೋಗಿಗೆ ಸಿಪಿಆರ್‌ನ ಎರಡು ಚಕ್ರಗಳನ್ನು ನೀಡಿತು ಮತ್ತು ನಂತರ ಎರಡು ಸುತ್ತಿನ ಡಿಫಿಬ್‌ ಆಘಾತಗಳನ್ನು ನೀಡಿತು. ಇದರಿಂದಾಗಿ ಸಂಗಮೇಶ್‌ ಅವರನ್ನು ತೀವ್ರ ಹೃದಯ ಸ್ತಂಭನದಿಂದ ಪುನರುಜ್ಜೀವನಗೊಳಿಸಲಾಯಿತು. ನಂತರ ಆಂಬ್ಯುಲೆಸ್ಸ್‌ನಲ್ಲಿ ಅಪೋಲೋ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ವೈದ್ಯಕೀಯ ಆರೈಕೆಯನ್ನು ನೀಡಿ, ನ.27 ರಂದು ಡಿಸ್ಚಾಜ್‌ರ್‍ ಮಾಡಲಾಗಿದೆ ಎಂದು ಅಪೋಲೊ ಬಿಜಿಎಸ್‌ ಆಸ್ಪತ್ರೆಯ ಮುಖ್ಯಸ್ಥ ಎನ್‌.ಜಿ. ಭರತೀಶ ರೆಡ್ಡಿ ತಿಳಿಸಿದ್ದಾರೆ.

ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR

ಸಾರ್ವಜನಿಕರು ಯಾವುದೇ ವೈದ್ಯಕೀಯ ತುರ್ತು ಸಂದರ್ಭದಲ್ಲಿ 1066 ಕರೆ ಮಾಡಬಹುದು.

click me!