ರಾಯಚೂರಲ್ಲಿ ಮತ್ತೊಬ್ಬ ಸರ್ಕಾರಿ ಸಿಬ್ಬಂದಿ ನಾಪತ್ತೆ

Kannadaprabha News   | Asianet News
Published : Aug 30, 2021, 02:09 PM ISTUpdated : Aug 30, 2021, 03:02 PM IST
ರಾಯಚೂರಲ್ಲಿ ಮತ್ತೊಬ್ಬ ಸರ್ಕಾರಿ ಸಿಬ್ಬಂದಿ ನಾಪತ್ತೆ

ಸಾರಾಂಶ

*  ಭೂ ದಾಖಲೆಗಳ ಉಪನಿರ್ದೇಶಕರ ಇಲಾಖೆಯ ಸಿಬ್ಬಂದಿ ಶಿವಪ್ಪ ಕಳೆದ ನಾಪತ್ತೆ *  ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ನಾಪತ್ತೆಯಾದ ಸಿಬ್ಬಂದಿ ಪತ್ನಿ  *  ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದ ಎಸಿ ಕಚೇರಿ ಎಫ್‌ಡಿಎ ಪ್ರಕಾಶಬಾಬು ಕೂಡ   

ರಾಯಚೂರು(ಆ.30): ಇತ್ತೀಚೆಗೆ ನಗರದ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ಕಾಣೆಯಾದ ಬೆನ್ನಲ್ಲೇ ಮತ್ತೊಂದು ಇಲಾಖೆಯ ಸಿಬ್ಬಂದಿ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರಿಂದಾಗಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. 

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಭೂ ದಾಖಲೆಗಳ ಉಪನಿರ್ದೇಶಕರ ಇಲಾಖೆಯ ಸಿಬ್ಬಂದಿ ಶಿವಪ್ಪ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡ ಸಿಬ್ಬಂದಿ ಪತ್ನಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದರೂ ಪೊಲೀಸರು ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ. ಆ. 26ರಂದು ಕಚೇರಿಗೆ ಹೋಗುವುದಾಗಿ ಹೇಳಿಹೋಗಿರುವ ಶಿವಪ್ಪ ನಾಪತ್ತೆಯಾಗಿದ್ದಾರೆ.

ಅಚ್ಚೇ ದಿನ್‌ ಯಾರಿಗೆ, ಎಲ್ಲಿ ಬಂದಿದೆ ಅಂತ ಬಿಜೆಪಿಗರೇ ಹೇಳಬೇಕು: ಡಿಕೆಶಿ

ಇತ್ತೀಚೆಗೆ ಸ್ಥಳೀಯ ಡಿಸಿ ಕಚೇರಿ ಆವರಣದಲ್ಲಿರುವ ಮತ್ತೊಂದು ಎಸಿ ಕಚೇರಿ ಎಫ್‌ಡಿಎ ಪ್ರಕಾಶಬಾಬು ಕೂಡ ನಾಪತ್ತೆಯಾಗಿದ್ದರು. ಅವರ ಪತ್ತೆ ಕಾರ್ಯದಲ್ಲಿ ಪೊಲೀಸರು ಮಗ್ನಗೊಂಡಿರುವಾಗಲೇ ಡಿಡಿಎಲ್‌ಆರ್‌ ಕಚೇರಿ ಸಿಬ್ಬಂದಿಯೂ ಕಾಣೆಯಾಗಿರುವುದು ಆತಂಕ ಮೂಡಿಸಿದೆ.
 

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!