ಬಾಗಲಕೋಟೆ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ

By Kannadaprabha News  |  First Published Aug 30, 2021, 2:00 PM IST

*  ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣ 
*  ಕಾಂಗ್ರೆಸ್‌ ಬಾವುಟ ಹಿಡಿದು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ
*  ಉಪಚುನಾವಣೆ ಘೋಷಣೆಯಾದ ನಂತರ ಜೋರಾದ ಪಕ್ಷಾಂತರ ಪರ್ವ 
 


ತೇರದಾಳ(ಆ.30): ಪಟ್ಟಣದಲ್ಲಿ ಪುರಸಭೆ ಉಪಚುನಾವಣೆ ಘೋಷಣೆಯಾದ ನಂತರ ಪಕ್ಷಾಂತರ ಪರ್ವ ಜೋರಾಗಿದೆ. 

ತೇರದಾಳ ಪಟ್ಟಣದ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರಾದ ಮಹಾಂತೇಶ ಮಿರ್ಜಿ ಸುರೇಶ, ಸುರೇಶ ಮಿರ್ಜಿ ಜಿಲಾನಿ ಕೊರಬು  ರಾಘವೇಂದ್ರ, ಹಾರುಗೊಪ್ಪ ಸೇರಿದಂತೆ ಅವರ ಬೆಂಬಲಿಗರು ಭಾನುವಾರ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌ ಬಾವುಟ ಹಿಡಿದು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

Tap to resize

Latest Videos

ಕಲಬುರಗಿ ಜನ ಸೋಂಬೇರಿ ಹೇಳಿಕೆಗೆ ಕೊನೆಗೂ ವಿಷಾದ ವ್ಯಕ್ತಪಡಿಸಿದ ಸಚಿವ ನಿರಾಣಿ

ಮುಖಂಡ ಪ್ರವೀಣ ನಾಡಗೌಡ ಮಾತನಾಡಿದರು. ಸಮಾರಂಭದಲ್ಲಿ ನಗರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ ಆಳಗೊಂಡ ಮುಖಂಡರಾದ ಶ್ರೀ ನೇಮಣ್ಣಾ ಸಾವಂತನವರ, ಪರಸಪ್ಪ ಮಾಸ್ತಿ, ಮಾಶೂಮ್‌ ಇನಾಂದಾರ, ಅಶೋಕ ಹಾಡಕಾರ, ಹನುಮಂತ ರೋಡನ್ನವರ ಇದ್ದರು. 
 

click me!