ಪುತ್ರಿಯ ಮದುವೆ ಮಾಡಲು ಮುಂಬೈನಿಂದ ಕಲಬುರಗಿಯ ವ್ಯಕ್ತಿಗೆ ಕೊರೋನಾ ಸೋಂಕು| ಕಲಬರಗಿ ಜಿಲ್ಲೆ ಆಳಂದ ತಾಲೂಕಿನ ಅಂಬಲಗಾಕ್ಕೆ ಬಂದಿದ್ದ 49 ವರ್ಷದ ವ್ಯಕ್ತಿ| ಮೇ 29ಕ್ಕೆ ಮಗಳ ಮದುವೆ ದಿನಾಂಕ ನಿಗದಿ|
ಕಲಬುರಗಿ(ಮೇ.27): ಮಗಳ ಮದುವೆ ಮಾಡಲು ಕಲಬುರಗಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿದ್ದು, ಮಗಳ ಮದುವೆ ಮಾಡಬೇಕೆಂದಿದ್ದ ಕುಟುಂಬಕ್ಕೆ ತಂದೆನಿಂದಲೇ ಶಾಕ್ ಆಗಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇದೇ ಮೇ 29ಕ್ಕೆ ಆ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿಬೇಕಿತ್ತು.
ತನ್ನ ಪುತ್ರಿಯ ಮದುವೆ ಮಾಡಲು ಮುಂಬೈನಿಂದ ಕಲಬುರಗಿಯ ಆಳಂದ ತಾಲೂಕಿನ ಅಂಬಲಗಾಕ್ಕೆ ಬಂದಿದ್ದ 49 ವರ್ಷದ ವ್ಯಕ್ತಿ(ಪಿ-1967)ಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ಕಲಬುರಗಿ: ಕ್ವಾರಂಟೈನ್‌ನಲ್ಲಿದ್ದ ಅಪ್ರಾಪ್ತ ಬಾಲಕಿಗೆ ಹೆರಿಗೆ
ಇನ್ನೇನು 14 ದಿನಗಳ ಕ್ವಾರಂಟೈನ್ ಮುಗಿದು ಮನೆಗೆ ತೆರಳಿ ಮಗ ಮದುವೆ ಸಂಭ್ರಮದಲ್ಲಿ ಭಾಗಹಿಸಬೇಕೆನ್ನುವಷ್ಟರಲ್ಲಿ ಮಂಗಳವಾರ ಬಂದ ವರದಿಯಲ್ಲಿ ಕೊರೋನಾ ಸೋಂಕಿರುವುದು ಖಚಿತವಾಗಿದ್ದು, ಮದುವೆ ಮನೆಯಲ್ಲೇ ಮಂಕು ಕವಿದಂತಾಗಿದೆ.