ವಿಜ​ಯ​ಪುರ: ಭೀಮಾ ತೀರದ ಹಂತಕನ ಬ್ಯಾನರ್‌ಗೂ ಹಾಲಿನ ಅಭಿಷೇಕ!

Kannadaprabha News   | Asianet News
Published : Feb 28, 2020, 12:45 PM IST
ವಿಜ​ಯ​ಪುರ: ಭೀಮಾ ತೀರದ ಹಂತಕನ ಬ್ಯಾನರ್‌ಗೂ ಹಾಲಿನ ಅಭಿಷೇಕ!

ಸಾರಾಂಶ

ಹಂತಕ ಧರ್ಮರಾಜ ಚಡಚಣ ಬ್ಯಾನರ್‌ಗೆ ಧರ್ಮರಾಜ ಅಭಿಮಾನಿಗಳಿಂದ ಕ್ಷೀರಾ​ಭಿ​ಷೇಕ| ವಿಜಯಪುರ ಜಿಲ್ಲೆಯ ಚಡ​ಚಣ ತಾಲೂ​ಕಿನ ಲೋಣಿ​ ಬಿಕೆ ಗ್ರಾಮದ ಜಾತ್ರೆ​ಯಲ್ಲಿ ನಡೆದ ಘಟನೆ| ಲೋಣಿ (ಬಿ.ಕೆ.) ಗ್ರಾಮದ ಶ್ರೀ ಸಿದ್ಧೇಶ್ವ​ರ ದೇವರ ಜಾತ್ರೆ| 

ವಿಜ​ಯ​ಪುರ(ಫೆ.28): ಜಿಲ್ಲೆಯ ಚಡ​ಚಣ ತಾಲೂಕಿನ ಲೋಣಿ (ಬಿ.ಕೆ.) ಗ್ರಾಮದ ಶ್ರೀ ಸಿದ್ಧೇಶ್ವ​ರ ದೇವರ ಜಾತ್ರೆಗೆ ಆಗಮಿಸುವ ಜನರಿಗೆ ಸ್ವಾಗತ ಕೋರಿ ಹಂತಕ ಧರ್ಮರಾಜ ಚಡಚಣ ಹಾಗೂ ಅವರ ಅಭಿಮಾನಿಗಳನ್ನೊಳಗೊಂಡ ಬ್ಯಾನರ್‌ಗೆ ಧರ್ಮರಾಜ ಅಭಿಮಾನಿಗಳು ಭಾನು​ವಾರ ಕ್ಷೀರಾ​ಭಿ​ಷೇಕ ಮಾಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್‌ ಆಗಿವೆ.

ಇದೇ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಚಡಚಣ ಕುಟುಂಬದ ವಿರೋಧಿ ಬಣದಲ್ಲಿರುವ ಪುತ್ರಪ್ಪ ಸಾಹುಕಾರ ಭೈರಗೊಂಡ ಅವರ ಮೇಲೆ ಗುಂಡಿನ ಸುರಿಮಳೆಗೈದು ಪರಾರಿಯಾಗಿದ್ದ. ನಂತರ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಬಂದ ಧರ್ಮರಾಜ, ತಾಲೂಕಿನ ಕೊಂಕಣಗಾಂವ ಗ್ರಾಮದ ಹೊರವಲಯದಲ್ಲಿ ಠಿಕಾಣಿ ಹೂಡಿದ್ದ. 

ಭೀಮಾತೀರದ ಹತ್ಯೆಗೆ ಬಿಗ್ ಟ್ವಿಸ್ಟ್ !

ನಂತರ ಈತನ ಅಡ್ಡಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಧರ್ಮರಾಜ ಮತ್ತು ಪೊಲೀ​ಸರ ಮಧ್ಯೆ ನಡೆದ ಗುಂಡಿಗೆ ಕಾಳಗದಲ್ಲಿ ಧರ್ಮರಾಜ ಹತನಾದ. ಧರ್ಮರಾಜ ಚಡಚಣನನ್ನು ಅಭಿಮಾನಿಗಳು ದೇವರು ಎಂದು ಭಾವಿಸಿ ಅವನ ಬ್ಯಾನರ್‌ಗೆ ಕ್ಷೀರಾ​ಭಿ​ಷೇಕ ಮಾಡಿರುವ ಫೋಟೋ ಈಗ ಎಲ್ಲೆಡೆ ವೈರಲ್‌ ಆಗಿದೆ.
 

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ