ʼನನ್ನ ಜೀವನದ ದೊಡ್ಡ ಬ್ಲೆಸ್ಸಿಂಗ್‌ ಅಂದರೆ ಕಾರ್ಕಳʼ ಅಂದ್ರು ಅಣ್ಣಾಮಲೈ, ಏಕದು?

Published : Feb 22, 2025, 04:50 PM ISTUpdated : Feb 22, 2025, 06:43 PM IST
ʼನನ್ನ ಜೀವನದ ದೊಡ್ಡ ಬ್ಲೆಸ್ಸಿಂಗ್‌ ಅಂದರೆ ಕಾರ್ಕಳʼ ಅಂದ್ರು ಅಣ್ಣಾಮಲೈ, ಏಕದು?

ಸಾರಾಂಶ

ಅಣ್ಣಾಮಲೈ ಅವರು ಕರ್ನಾಟಕ ಪೊಲೀಸ್ ಸೇವೆಯಲ್ಲಿದ್ದಾಗ ಕಾರ್ಕಳದಲ್ಲಿನ ಅನುಭವವನ್ನು ಸ್ಮರಿಸಿದ್ದಾರೆ. ಕಾರ್ಕಳವು ಅವರ ಜೀವನದ ದೊಡ್ಡ ಆಶೀರ್ವಾದವೆಂದು ಬಣ್ಣಿಸಿದ್ದಾರೆ. ಅಲ್ಲಿನ ಜನರ ಹೃದಯವಂತಿಕೆ, ಸಂಸ್ಕೃತಿ ಮತ್ತು ಧಾರ್ಮಿಕತೆಯನ್ನು ಅವರು ಕೊಂಡಾಡಿದ್ದಾರೆ. ಕಾರ್ಕಳದಲ್ಲಿ ಎಎಸ್‌ಪಿ ಮತ್ತು ಎಸ್‌ಪಿಯಾಗಿ ಒಟ್ಟು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ಅಲ್ಲಿನ ಜನರ ಪ್ರೀತಿಯನ್ನು ಅವರು ನೆನಪಿಸಿಕೊಂಡಿದ್ದಾರೆ.

ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವೆಯಲ್ಲಿದ್ದ ಅವಧಿಯನ್ನು ರಾಜ್ಯದ ಜನ ಇಂದಿಗೂ ಮರೆತಿಲ್ಲ. ಇಂದು ಅವರು ಕರ್ನಾಟಕ ಬಿಟ್ಟು ತಮಿಳುನಾಡಿಗೆ ಹೋಗಿ ಅಲ್ಲಿನ ರಾಜಕಾರಣದಲ್ಲಿ ಭಾಗಿಯಾಗಿರಬಹುದು. ಆದರೆ ಅವರ ಹೃದಯದಲ್ಲಿ ಇಂದಿಗೂ ತಾವು ಸೇವೆ ಸಲ್ಲಿಸಿದ ಜಾಗ, ಅಲ್ಲಿನ ಜನತೆ, ಅಲ್ಲಿನ ಸಂಸೃತಿ ನೆಲೆ ನಿಂತಿದೆ ಎಂಬುದನ್ನು ಅವರು ನೀಡಿದ ಸಂದರ್ಶನವೊಂದರ ಈ ಭಾಗ ಹೇಳುತ್ತದೆ. ಅದರಲ್ಲೂ ಅವರು ಕರ್ನಾಟಕದ ಒಂದು ಒಂದು ತಾಲೂಕನ್ನು ʼನನ್ನ ಈವನದ ಗ್ರೇಟೆಸ್ಟ್‌ ಬ್ಲೆಸ್ಸಿಂಗ್‌ʼ ಎಂದು ನೆನಪಿಸಿಕೊಂಡಿದ್ದಾರೆ.  

ಆ ಜಾಗ ಬೇರ್ಯಾವುದೂ ಅಲ್ಲ, ಉಡುಪಿ ಜಿಲ್ಲೆಯ ಕಾರ್ಕಳ. ಉಡುಪಿ ಜಿಲ್ಲೆಯ ಕಾರ್ಕಳ ಜಿಲ್ಲೆಗೆ ನಾನು ಕಾಲಿಟ್ಟಿದ್ದು ಪೊಲೀಸ್‌ ಆಗಿ ನನ್ನ ಮೊತ್ತಮೊದಲ ಅನುಭವ. ಅದೇ ನನಗೆ ದೊಡ್ಡ ಆಶೀರ್ವಾದ. ಅಲ್ಲಿನ ಜನ ತುಂಬಾ ಹೃದಯವೈಶಾಲ್ಯ ಇರುವವರು, ಅಲ್ಲಿನ ಜನರ ಗುಣ ದೊಡ್ಡದು. ಎಷ್ಟೊಂದು ದೈವಭಕ್ತರು ಎಂದು ಅಣ್ಣಾಮಲೈ ನೆನೆದುಕೊಂಡಿದ್ದಾರೆ. 

ಅಲ್ಲಿನ ಜನ ಪಂಚಭೂತಗಳಲ್ಲಿ ನಂಬಿಕೆ ಇಟ್ಟುಕೊಂಡವರು, ಮೌನವಾಗಿ ಜೀವನ ನಡೆಸುವವರು. ಕಾರ್ಕಳ ಒಂದು ಸಣ್ಣ ಪೇಟೆ, ಅಲ್ಲಿನ ಜನ ತುಂಬಾ ಸುಸಂಸ್ಕೃತರು. ಅದೆಲ್ಲ ನನ್ನನ್ನು ಒಬ್ಬ ಮನುಷ್ಯನಾಗಿ ರೂಪಿಸಿದವು. ಮೊದಲಿಗೆ ನಾನು ಒಂದು ವರ್ಷ ಎಂಟು ತಿಂಗಳು ಕಾರ್ಕಳದ ಎಎಸ್‌ಪಿಯಾಗಿ ಸೇವೆ ಸಲ್ಲಿಸಿದೆ. ನನಗೆ ಅಲ್ಲಿಂದ ಟ್ರಾನ್ಸ್‌ಫರ್‌ ಆದಾಗ ಜಿಲ್ಲೆಯ ಹಿಸ್ಟರಿಯಲ್ಲೇ ಮೊದಲ ಬಾರಿಗೆ ಅಲ್ಲಿನ ಜನ ನನ್ನನ್ನು ಅಲ್ಲಿಯೇ ಎಸ್‌ಪಿಯಾಗಿ ಉಳಿಸಿಕೊಳ್ಳಲು ಯತ್ನಿಸಿದರು.  ಮತ್ತೆ ಎಸ್‌ಪಿಯಾಗಿ ಪ್ರಮೋಷನ್‌ ಪಡೆದು ಅಲ್ಲೇ ಎರಡೂವರೆ ವರ್ಷ ಇದ್ದೆ. ಅಂದರೆ ಒಟ್ಟಾರೆ ನಾಲ್ಕಕ್ಕಿಂತಲೂ ಹೆಚ್ಚು ವರ್ಷ ಕಾರ್ಕಳ ಮತ್ತು ಉಡುಪಿಯಲ್ಲಿ ಸಾರ್ವಜನಿಕ ಸೇವಕನಾಗಿ ಸೇವೆ ಸಲ್ಲಿಸಿದೆ ಎಂದಿದ್ದಾರೆ.

ಅಲ್ಲಿನ ಜನ ಬಡವರು. ಕೆಲವರು ಭೂಮಿ ತಗಾದೆ ಇದೆ ಬನ್ನಿ ಪರಿಹರಿಸಿ ಎನ್ನುತ್ತಿದ್ದರು. ಹಾಗೆ ಅವರು ಬಂದಾಗ ನಾನು ಅವರಲ್ಲಿ ಒಬ್ಬನೆಂದು ಭಾವಿಸುತ್ತಿದ್ದರು. ಕರಾವಳಿಯ ಜನ ಬಹಳ ಧರ್ಮಭಕ್ತರು. ನಾನು ಕೂಡ ದೇವರೆಂದರೆ ಹೆದರುವವನು. ಅವರಿಗೆ ಧಾರ್ಮಿಕತೆ ಎಂಬುದು ಅವರ ದೈನಂದಿನ ಜೀವನದ ಭಾಗ. ಅಲ್ಲಿನ ಭೂತಕೋಲವನ್ನೇ ನೋಡಿ. ಈಗ ಕಾಂತಾರದ ಮೂಲಕ ಅದು ಜಾಗತಿಕ ಮಟ್ಟದಲ್ಲಿ ಹೆಚ್ಚು ಜನಪ್ರಿಯ ಆಗಿದೆ. ಆದರೆ ಅದೆಲ್ಲ ಅವರಿಗೆ ರಕ್ತಗತವಾಗಿ ಬಂದಿದೆ ಎಂದು ಅವರು ನೆನೆದುಕೊಂಡಿದ್ದಾರೆ. 

ಮುಖ್ಯಮಂತ್ರಿ ಮಕ್ಕಳು ಹಿಂದಿ ಓದ್ಬಹುದು, ನಮ್ಮ ಮಕ್ಕಳಿಗೆ ಯಾಕೆ ಓದಬಾರದು? ಅಣ್ಣಾಮಲೈ ಪ್ರಶ್ನೆ

ಅಣ್ಣಾಮಲೈ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಒಬ್ಬರು ನೆಟಿಜನ್‌, ನಾನೂ ಅದೇ ಭಾಗದವನು. ನೀವು ಇದ್ದಾಗ ನಮಗೆ ತುಂಬಾ ಸುರಕ್ಷತೆಯ ಫೀಲ್‌ ಇರುತ್ತಿತ್ತು. ನಿಮ್ಮ ಭಾಷಣ ಎಲ್ಲೇ ಇದ್ದರೂ ನಾನು ಅಲ್ಲಿಗೆ ಹಾಜರಾಗುತ್ತಿದ್ದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇಷ್ಟೆಲ್ಲಾ ನಿಮ್ಮನ್ನು ಪ್ರೀತಿಸಿದ ಕರ್ನಾಟಕದ ಜನತೆಯನ್ನು ತೊರೆದು ನೀವು ಹೋದದ್ದಾದರೂ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಕಾರ್ಕಳದಲ್ಲಿ ಕ್ರೈಮ್‌ ರೇಟ್‌ ಆಗಲೂ ಇರಲಿಲ್ಲ, ಈಗಲೂ ಇಲ್ಲ. ಇಲ್ಲಿ ದೊಡ್ಡ ಅಪರಾಧಗಳು ನಡೆದುದೇ ನಮಗೆ ಗೊತ್ತಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. 

ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಇವ್ರೇ ನೋಡಿ.. ಭೂಲೋಕದಿಂದ ದೂರಾಗಿದ್ದು ಹೀಗೆ..!

ತುಂಬಾ ಮಂದಿ ಅಣ್ಣಾಮಲೈ ಮಾತನ್ನು ಅನುಮೋದಿಸಿದ್ದಾರೆ. ಕಾರ್ಕಳದಲ್ಲಿ ಇರುವ ಪ್ರವಾಸಿ ತಾಣಗಳದ್ದೇ ಒಂದು ತೂಕವಾದರೆ, ಅಲ್ಲಿನ ಜನರ ಸಂಸ್ಕಾರ- ವಿನಯವಂತಿಕೆಯದ್ದೇ ಇನ್ನೊಂದು ತೂಕ. ಇಲ್ಲಿ ಜೈನರು, ಸಾರಸ್ವತರು, ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜೈನರ ಬಸದಿಗಳು ಸಾಕಷ್ಟು ಸಂಖೈಯಲ್ಲಿವೆ. ಕಾರ್ಕಳದ ಗೊಮ್ಮಟೇಶ್ವರ ಬಹಳ ಚಂದ ಮತ್ತು ಜನಪ್ರಿಯ. ಬಂಟರೂ ಸಾಕಷ್ಟು ಸಂಖ್ಯೆಯಲ್ಲಿದ್ದು ಭೂತಸ್ಥಾನಗಳಿದ್ದು, ಭೂತಕೋಲಗಳೂ ನಡೆಯುತ್ತವೆ. ಕಾರ್ಕಳದ ಪಕ್ಕದ ಮೂಡುಬಿದಿರೆ ವಿದ್ಯಾಕ್ಷೇತ್ರವೂ ಆಗಿದೆ. ಕಾರ್ಕಳದ ಸಾರಸ್ವತರ ಊಟ ತಿಂಡಿಯ ರುಚಿ ಮರೆಯುವಂಥದ್ದಲ್ಲ ಎಂದು ಸುಮಾರು ಮಂದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. 


 

PREV
Read more Articles on
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ