ಬಿಸಿಲು ಹೆಚ್ಚಾದ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಬೆ.11ರಿಂದ ಸಂಜೆ 4ರ ವರೆಗೂ ಪ್ರವೇಶ ನಿರ್ಬಂಧ

Kannadaprabha News   | Kannada Prabha
Published : Apr 18, 2026, 10:12 AM IST
Anjanadri Hill Entry restricted from 11 am to 4 pm due heat stroke rav

ಸಾರಾಂಶ

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಇತ್ತೀಚೆಗೆ ಇಬ್ಬರು ಭಕ್ತರ ಸಾವಿನ ಹಿನ್ನೆಲೆಯಲ್ಲಿ ದರ್ಶನದ ಸಮಯವನ್ನು ಬದಲಾಯಿಸಲಾಗಿದೆ. ಜಿಲ್ಲಾಡಳಿತದ ಆದೇಶದಂತೆ, ಇನ್ನು ಮುಂದೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಬೆಟ್ಟ ಹತ್ತಲು ನಿರ್ಬಂಧ ಹೇರಲಾಗಿದೆ.

ಕೊಪ್ಪಳ (ಏ.18): ತಾಪಮಾನ ಹೆಚ್ಚಿದ್ದು, ಅಂಜನಾದ್ರಿ ಬೆಟ್ಟವನ್ನು ಮಧ್ಯಾಹ್ನ ಉರಿಬಿಸಿಲಿನಲ್ಲಿ ಏರುವುದರಿಂದ ಕೆಲವರ ಆರೋಗ್ಯ ಏರುಪೇರಾಗುತ್ತಿದೆ. ಹೀಗಾಗಿ, ಅಂಜನಾದ್ರಿ ಬೆಟ್ಟ ಏರಲು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ನಿರ್ಬಂಧ ಹೇರಲಾಗಿದೆ. 

ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆದೇಶ ಹೊರಡಿಸಿದ್ದಾರೆ. 

ದೇವರ ದರ್ಶನಕ್ಕೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಇಬ್ಬರು ಭಕ್ತರು ದೇವಸ್ಥಾನದ ಮೆಟ್ಟಿಲುಗಳನ್ನು ಏರಿ ಮೇಲೆ ಹೋದ ನಂತರ ಉಸಿರಾಡಲು ತೊಂದರೆಯಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್‌ನಲ್ಲಿ ಗುಜರಾತ್ ಮೂಲದ ಭಕ್ತರೊಬ್ಬರು ಮೆಟ್ಟಿಲು ಏರುವಾಗ ಎದೆಯ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು. ಏ.1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ದರ್ಶನ ಪಡೆದ ಬಳಿಕ ದಾವಣಗೆರೆ ಮೂಲದ ಭಕ್ತನೊಬ್ಬ ಬಿಸಿಲಿನ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿದ್ದ.

ಇಂದಿನ ತಾಪಮಾನ :.

ನಗರ ಗರಿಷ್ಠ(ಡಿಗ್ರಿ.ಸೆಂ.) ಕನಿಷ್ಠ(ಡಿಗ್ರಿ.ಸೆಂ.)

  • ಕಲಬುರಗಿ 43.2 28.6
  • ಬೀದರ್‌ 41.0 24.8
  • ರಾಯಚೂರು 40.4 27.0
  • ವಿಜಯಪುರ 40.0 24.0
  • ಗದಗ 38.4 23.0
  • ಧಾರವಾಡ 37.5 20.0
  • ಬಾಗಲಕೋಟೆ 37.5 24.7
  • ಮೈಸೂರು 37.0 21.2
  • ಶಿವಮೊಗ್ಗ 37.0 22.8
  • ದಾವಣಗೆರೆ 37.0 22.5
  • Apr 18, 2026, 12:10:18 AM

PREV
Read more Articles on
click me!

Recommended Stories

Davanagere By-Election 2026: ಕಾಂಗ್ರೆಸ್ ಪಕ್ಷ ನಮಗೆ ಅನಿವಾರ್ಯವಲ್ಲ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ ಮುಸ್ಲಿಂ ಮುಖಂಡ!
ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತಗಳ ಮರು ಎಣಿಕೆ: 'ಸತ್ಯಕ್ಕೆ ಜಯ ಸಿಗಲಿದೆ' ಎಂದ ಶಾಸಕ ಟಿ.ಡಿ. ರಾಜೇಗೌಡ!