ಸ್ವಾವಲಂಬಿ ಜೀವನಕ್ಕೆ ಪಶುಪಾಲನೆ ಆಶಾಕಿರಣ : ಷಡಕ್ಷರಿ

By Kannadaprabha News  |  First Published Jun 22, 2023, 5:53 AM IST

ದೈನಂದಿನ ದುಡಿಮೆಯಲ್ಲಿ ಪಶುಪಾಲನೆ ರೈತರ ಬದುಕಿನ ಆಶಾಕಿರಣವಾಗಿ ಹೊರಹೊಮ್ಮಿದ್ದು, ರೈತನ ಆರ್ಥಿಕ ಸ್ಥಿತಿಗತಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಆರ್ಥಿಕ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.


  ತಿಪಟೂರು :  ದೈನಂದಿನ ದುಡಿಮೆಯಲ್ಲಿ ಪಶುಪಾಲನೆ ರೈತರ ಬದುಕಿನ ಆಶಾಕಿರಣವಾಗಿ ಹೊರಹೊಮ್ಮಿದ್ದು, ರೈತನ ಆರ್ಥಿಕ ಸ್ಥಿತಿಗತಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಆರ್ಥಿಕ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ತಾಲೂಕಿನ ನೊಣವಿನಕೆರೆ ಹೋಬಳಿ ಮತ್ತಿಘಟ್ಟದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಜೀವನ ನಿರ್ವಹಣೆಗೆ ಹೈನುಗಾರಿಕೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ರೈತನ ಮನೆಯಲ್ಲಿ ಹಾಲು ಹಿಂಡುವ ಒಂದು ಹಸುವಿದ್ದರೆ ಅವರ ಬಳಿ ಎಟಿಎಂ ಕಾರ್ಡ್‌ ಇದ್ದಂತೆ. ನಿರ್ವಹಣೆ ಮಾಡಿದಂತೆಲ್ಲಾ ಹಣ ಬರುತ್ತಲೇ ಇರುತ್ತದೆ. ಆದ್ದರಿಂದ ರೈತರು ಹೆಚ್ಚಾಗಿ ಹೈನುಗಾರಿಕೆಯನ್ನು ಅವಲಂಭಿಸುವುದರಿಂದ ಪ್ರತಿನಿತ್ಯದ ಖರ್ಚನ್ನು ಸರಿದೂಗಿಸಿಕೊಂಡು ಹೋಗಲಿದ್ದು ಇದರೊಂದಿಗೆ ಹಾಲು ಒಕ್ಕೂಟದಿಂದಲೂ ನಿಮಗೆ ಸಾಕಷ್ಟುಪ್ರಯೋಜನಗಳಿದ್ದು ಇವುಗಳ ಬಳಕೆ ಮಾಡಿಕೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.

Latest Videos

undefined

ಕೆಎಂಎಫ್‌ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್‌ ಕಂಪ್ಯೂಟರ್‌ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಒಕ್ಕೂಟವು ಹಾಲು ಉತ್ಪಾದಕರಿಗೆ ಸದಾ ಬೆನ್ನಲುಬಾಗಿದ್ದು ಅವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ಪಾದಕರಿಗೆ ಸಾಕಷ್ಟುಅನುಕೂಲಗಳನ್ನು ಮಾಡುತ್ತಾ ಬರುತ್ತಿದೆ. ಕಡಿಮೆ ಅವಧಿಯಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿರುವ ಈ ಸಹಕಾರ ಸಂಘವು ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ನೆರವಾಗಬೇಕು. ಕಟ್ಟಡ ನಿರ್ಮಾಣಕ್ಕೆ ಕೆಎಂಎಫ್‌ನಿಂದ 4 ಲಕ್ಷ ರು. ಹಾಗೂ ಒಕ್ಕೂಟದಿಂದ 4.5 ಲಕ್ಷ ರು.ಗಳನ್ನು ನೀಡಲಾಗಿದೆ. ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ನೀಡಲಾಗುತ್ತಿದ್ದು ಎಂಜಿನಿಯರಿಂಗ್‌, ಎಂಬಿಬಿಎಸ್‌ ಬದಲು ಡಿ.ಫಾಮ್‌ರ್‍, ಬಿಎಸ್ಸಿ ಅರ್ಗಿ, ಎಂಎಸ್ಸಿ ಅರ್ಗಿ, ಬಿಎಚ್‌ಎಂಎಸ್‌ನಂತಹ ಕೋರ್ಸ್‌ಗಳನ್ನು ಮಾಡುವುದರಿಂದ ಉದ್ಯೋಗಕ್ಕೆ ಸಾಕಷ್ಟುಅವಕಾಶಗಳ ಸಿಗಲಿದ್ದು ಈ ಕೋರ್ಸ್‌ಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್‌. ಶಿವಸ್ವಾಮಿ ಮಾತನಾಡುತ್ತಾ, ಸಂಘದ ಬೆಳವಣಿಗೆಗೆ ಹಾಲು ಉತ್ಪಾದಕರ ಶ್ರಮ ಸಾಕಷ್ಟಿದ್ದು, ಕಡಿಮೆ ಅವಧಿಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಇವರ ಸಹಕಾರವೇ ಕಾರಣ. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಉತ್ಪಾದಕರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್‌ ದಾಸ್ತಾನು ಕೊಠಡಿಯನ್ನು ಉದ್ಘಾಟಿಸಿದರು. ಸಂಘದ ನಿರ್ದೇಶಕರಾದ ಎಂ.ಎಲ್‌ ರಾಜಶೇಖರ್‌, ಸುರೇಶ್‌, ತಮ್ಮಯ್ಯ, ನಿಜಗುಣಯ್ಯ, ಜಯಣ್ಣ, ಶಾಂತರಾಜ್‌, ರೇಣುಕಯ್ಯ, ಮಹದೇವಮ್ಮ, ಅನುಸೂಯ, ನೀಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನರೂಪ ಕೇಶವಮೂರ್ತಿ ಸೇರಿದಂತೆ ಹಾಲು ಉತ್ಪಾದಕರು, ಗ್ರಾಮಸ್ಥರು ಭಾಗವಹಿಸಿದ್ದರು.

ರೈತರ ಜೀವನ ಸುಧಾರಣೆಯಾಗಬೇಕಾದರೆ ಪಶುಪಾಲನೆಯ ಅವಶ್ಯಕತೆ ಇದ್ದು, ರೈತರು ಇದರಿಂದ ಆರ್ಥಿಕ ಸದೃಢರಾಗುತ್ತಿದ್ದಾರೆ. ಒಕ್ಕೂಟದಿಂದಲೂ ಸಹ ರೈತರಿಗಾಗಿ ಹಾಗೂ ರೈತರ ರಾಸುಗಳಿಗೆ ಹತ್ತಾರು ಯೋಜನೆಗಳನ್ನು ತರಲಾಗಿದೆ. ಸರ್ಕಾರ ಪ್ರತಿ ಲೀಟರ್‌ ಹಾಲಿಗೆ 5 ರು. ಸಹಾಯಧನ ನೀಡುತ್ತಿದ್ದು ಮತ್ತೆ ಇದನ್ನು 2 ರು. ಗೆ ಹೆಚ್ಚಿಸಲು ನಿರ್ಧಾರ ತೆಗೆದುಕೊಂಡಿದ್ದು ಇದರಿಂದ ರೈತನಿಗೆ ಪ್ರತಿ ಲೀಟರ್‌ ಹಾಲಿಗೆ 37-38 ರು. ಸಿಗಲಿದೆ. ಒಕ್ಕೂಟವು ಉತ್ಪಾದಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ 25 ಸಾವಿರ ರು. ಸಹಾಯಧನ ನೀಡುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು.

-ಸಿ.ವಿ. ಮಹಲಿಂಗಯ್ಯ ಅಧ್ಯಕ್ಷ, ತುಮಕೂರು ಹಾಲು ಒಕ್ಕೂಟ

click me!