ಆನೇಕಲ್‌ ಶಾಸಕ ಶಿವಣ್ಣಗೂ ಸೋಂಕು

By Kannadaprabha News  |  First Published Jul 10, 2020, 11:22 AM IST

ಆನೇಕಲ್‌ ಶಾಸಕ ಬಿ.ಶಿವಣ್ಣ ಅವರಿಗೂ ಕೊರೋನಾ ಸೋಂಕಿರುವುದು ದೃಢವಾಗಿದ್ದು, ಇಲ್ಲಿನ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದಾರೆ. ಕಳೆದ 2 ದಿನಗಳ ಹಿಂದೆ ಜ್ವರ, ನೆಗಡಿ ಕಾಣಿಸಿಕೊಂಡ ಕಾರಣ ಶಿವಣ್ಣ ತಪಾಸಣೆಗೆ ಒಳಗಾಗಿದ್ದರು.


ಆನೇಕಲ್(ಜು.10)‌: ಆನೇಕಲ್‌ ಶಾಸಕ ಬಿ.ಶಿವಣ್ಣ ಅವರಿಗೂ ಕೊರೋನಾ ಸೋಂಕಿರುವುದು ದೃಢವಾಗಿದ್ದು, ಇಲ್ಲಿನ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದಾರೆ. ಕಳೆದ 2 ದಿನಗಳ ಹಿಂದೆ ಜ್ವರ, ನೆಗಡಿ ಕಾಣಿಸಿಕೊಂಡ ಕಾರಣ ಶಿವಣ್ಣ ತಪಾಸಣೆಗೆ ಒಳಗಾಗಿದ್ದರು.

ಗುರುವಾರ ಅದರ ಬಂದಿದ್ದು, ಅವರಿಗೆ ಸೋಂಕಿರುವುದು ದೃಢವಾಗಿದೆ. ಲಾಕ್‌ಡೌನ್‌ ಹಾಗೂ ಕೊರೋನಾದಿಂದ ಜನರು ಸಂಕಷ್ಟಕ್ಕೀಡಾಗಿರುವ ಕಾರಣ ತಾಲೂಕಿನೆಲ್ಲೆಡೆ ಸಂಚರಿಸಿ, ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಹೀಗೆ ಜನರ ಸಂಪರ್ಕದಲ್ಲಿದ್ದ ಕಾರಣ ಅವರಿಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.

Tap to resize

Latest Videos

undefined

ಕಾಫಿನಾಡಿನಲ್ಲಿ ಮತ್ತೆ 6 ಕೊರೋನಾ ಪಾಸಿಟಿವ್ ಪತ್ತೆ..!

‘ಸಾಮಾನ್ಯರಿಗೆ ಮಾತ್ರವಲ್ಲ ವೈದ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಕೊರೋನಾ ಸೋಂಕು ಹಬ್ಬುತ್ತಿದ್ದು, ಇದೊಂದು ಸಹಜವಾದ ಪ್ರಕ್ರಿಯೆ ಎಂದು ಭಾವಿಸಿ ಧೈರ್ಯವಾಗಿ ಎದುರಿಸಿ’ ಎಂದು ಶಾಸಕ ಶಿವಣ್ಣ ವಿಶ್ವಾಸದ ನುಡಿಗಳನ್ನು ಆಡಿದ್ದಾರೆ.

click me!