2021ರಲ್ಲಿ ವಿಜಯನಗರ ಜಿಲ್ಲೆ ಖಚಿತ: ಸಚಿವ ಆನಂದ್‌ ಸಿಂಗ್‌

By Kannadaprabha News  |  First Published Aug 17, 2020, 8:03 AM IST

ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಅನೇಕ ದಿನಗಳ ಕನಸಾಗಿದೆ| ಹಂಪಿ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ವಿಜಯನಗರ ಹೊಸ ಜಿಲ್ಲೆಯಾಗುವುದು ಎಂಬ ವಿಶ್ವಾಸ ಮತ್ತು ನಂಬಿಕೆ ನನಗೆ ಇದೆ| ವಿಜಯನಗರ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಂದರ್ಭಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ| 


ಹೊಸಪೇಟೆ(ಆ.17):2021ರಲ್ಲಿ ಹೊಸಪೇಟೆ ವಿಜಯನಗರ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಿಲ್ಲೆಯ ರಚನೆ ಖಚಿತ’ ಎಂದು ಅರಣ್ಯ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಅನೇಕ ದಿನಗಳ ಕನಸಾಗಿದೆ. ಹಂಪಿ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ವಿಜಯನಗರ ಹೊಸ ಜಿಲ್ಲೆಯಾಗುವುದು ಎಂಬ ವಿಶ್ವಾಸ ಮತ್ತು ನಂಬಿಕೆ ನನಗೆ ಇದೆ. 2021ರಲ್ಲಿ ವಿಜಯನಗರ ಜಿಲ್ಲೆಯಾಗುವುದು ಖಚಿತವಾಗಿದೆ. ಇದರೊಂದಿಗೆ ವಿಜಯನಗರ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಂದರ್ಭಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

ಸ್ಟಾರ್ಟ್‌ ಆಗದ ಪೊಲೀಸ್‌ ವಾಹನ: ತಳ್ಳಿ ಚಾಲು ಮಾಡಿದ ಆರಕ್ಷಕರು..!

ಮುಂದಿನ ವರ್ಷ ಆಗಸ್ಟ್‌ನಲ್ಲಿ ನಗರದ ಮುನ್ಸಿಪಾಲ್‌ ಹೈಸ್ಕೂಲ್‌ ಮೈದಾನದಲ್ಲಿ ದೇಶದಲ್ಲೇ ಅತಿ ಎತ್ತರದ ರಾಷ್ಟ್ರ ಧ್ಜಜಸ್ತಂಭವನ್ನು ನಿರ್ಮಿಸಿ ಧ್ವಜ ಹಾರಿಸಲಾಗುವುದು. ದೇಶದಲ್ಲಿ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಎಲ್ಲಿದೆ ಅಂದರೆ ಅದು ಹೊಸಪೇಟೆಯ ವಿಜಯನಗರ ಕ್ಷೇತ್ರದಲ್ಲಿ ಎಂದು ಹೇಳುವಂತಾಗಬೇಕು ಎಂದರು.

ವಿಜಯನಗರ ನೂತನ ಜಿಲ್ಲೆ ವಿಚಾರದಲ್ಲಿ ಆನಂದ ಸಿಂಗ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪದೇ ಪದೇ ಜಿಲ್ಲೆಯ ವಿಚಾರವನ್ನು ಪ್ರಸ್ತಾಪಿಸುತ್ತಲೇ ಇದ್ದಾರೆ. ವಿಜಯನಗರ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲೂ ಈ ವಿಷಯ ಮುಂಚೂಣಿಗೆ ಬಂದಿತ್ತು. ಸ್ವಲ್ಪ ದಿನ ತಣ್ಣಗಾಗಿದ್ದ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
 

click me!