'ಡಿಸೆಂಬರ್ 12ರ ಒಳಗೆ ಆನಂದ್ ಸಿಂಗ್ ಗೆ ಸಚಿವ ಸ್ಥಾನ'

By Kannadaprabha News  |  First Published Dec 3, 2019, 2:54 PM IST

ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಉಪ ಚುನಾವಣೆ ನಡೆಯಲಿದ್ದು, ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆನಂದ್ ಸಿಂಗ್ ಮಂತ್ರಿಯಾಗೋದು ಪಕ್ಕಾ ಎಂದು ಸಚಿವರು ಭೌಇಷ್ಯ ನುಡಿದಿದ್ದಾರೆ.


ಹೊಸಪೇಟೆ [ಡಿ.03]: ಮೊದಲು ರಾಜೀನಾಮೆ ನೀಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿರುವ ಪಕ್ಷದ ಅಭ್ಯರ್ಥಿ ಆನಂದ ಸಿಂಗ್ ಡಿ. 12ರೊಳಗೆ ಮಂತ್ರಿಯಾಗಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ಮುಂಭಾಗದಲ್ಲಿ  ಹಮ್ಮಿಕೊಂಡಿದ್ದ ಬಿಜೆಪಿ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಆನಂದ ಸಿಂಗ್ ಗೆದ್ದು, ಇದೇ ಡಿ. 12 ರೊಳಗೆ ಸಚಿವರು ಕೂಡ ಆಗಲಿದ್ದಾರೆ. ಅವರೊಂದಿಗೆ ಸುರಪುರದ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ಒಲಿದು ಬಂದರೂ ಯಾವುದೇ ಆಶ್ಚರ್ಯವಿಲ್ಲ ಎಂದರು.

Tap to resize

Latest Videos

ಚುನಾವಣೆಯ ಬಳಿಕ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗುತ್ತದೆ. ಮನೆಗೊಬ್ಬ ಯಜಮಾನ ಇರಬೇಕು ಹೊರತು, ಒಂದು ಮನೆಗೆ ಹತ್ತಾರು ಜನ ಯಜಮಾನರು ಇರಬಾರದು. ಮೈತ್ರಿ ಸರ್ಕಾರದಲ್ಲಿ ಇದೇ ಆಗಿತ್ತು. ಹೀಗಾಗಿಯೇ ಸರ್ಕಾರ ಪತನವಾಯಿತು. ಕುಮಾರಸ್ವಾಮಿಯ ಅಡ್ಜಸ್ಟ್ ರಾಜಕಾರಣ ನಡೆಯಲಿಲ್ಲ ಎಂದರು. 

ಬೆಂಗಳೂರಿನಲ್ಲಿ 1 ಲಕ್ಷ ಮನೆಗಳು ಹಾಗೂ ರಾಜ್ಯದಲ್ಲಿ 2 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಡಿಪಿಆರ್ ಮಾಡಲಾಗುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ 1,800 ಮನೆಗಳ ನಿರ್ಮಾಣ ಕಾರ್ಯವನ್ನು ಕೈಗತ್ತಿಕೊಳ್ಳಲಾಗುವುದು ಎಂದರು. ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಮೂರ್ನಾಲ್ಕು ಜಿಲ್ಲೆಗಳಿಗೆ ಸಿಮೀತವಾಗಿತ್ತು. ಹಾಗಾಗಿ ತಿಕ್ಕಾಟಗಳು ಪ್ರಾರಂಭವಾದವು. ಮನಸ್ತಾಪವಾಗಿ ಶಾಸಕರು ರಾಜೀನಾಮೆ ಸಲ್ಲಿಸಿದರು. ಆನಂದ ಸಿಂಗ್ ಹಾಗೂ ಉಳಿದ ಶಾಸಕರ ಸಂಬಂಧ ಒಂದೇ ಆಗಿರಲಿಲ್ಲ. ಆನಂದ ಸಿಂಗ್ ದಿಟ್ಟ ಹೆಜ್ಜೆ ಇಟ್ಟು ರಾಜೀನಾಮೆಯನ್ನು ಸಲ್ಲಿಸಿದರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ಮಾತನಾಡಿದರು. ಸಂಸದ ಕರಡಿ ಸಂಗಣ್ಣ,ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಶಿವರಾಜ್ ಪಾಟೀಲ್, ಬಸವರಾಜ ದಢೇಸೂಗುರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಪಕ್ಷದ ಚುನಾವಣಾ ಉಸ್ತುವಾರಿ ಎನ್. ರವಿಕುಮಾರ,ಮುಖಂಡರಾದ ನೇಮಿರಾಜನಾಯ್ಕ, ಸಿಂಗನಾಳ ವಿರುಪಾಕ್ಷಪ್ಪ, ಶರಣ್ಯಸ್ವಾಮಿ ಇನ್ನಿತರರಿದ್ದರು.

click me!